ಹರಪನಹಳ್ಳಿ: ಹರಿದಾಸರ ಕೀರ್ತನಗಳ ಬಗ್ಗೆ ಸರ್ವಧರ್ಮೀಯರಿಗೂ ಅರಿವು ಮೂಡಿಸಲು ಮತ್ತು ಸಮ ಸಮಾಜದ ನಿರ್ಮಾಣಕ್ಕಾಗಿ ದಾಸ ಸಾಹಿತ್ಯ ಪ್ರಕಾರವು ಅತ್ಯುತ್ತಮವಾದ ನಿದರ್ಶನಗಳಾಗಿವೆ ಎಂದು ಬೆಂಗಳೂರು ಬಸವನಗುಡಿ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಪ್ರಾಚಾರ್ಯರಾದ ಪ್ರಮೋದಾಚಾರ್ಯರು ತಿಳಿಸಿದರು.
ಹರಪನಹಳ್ಳಿ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ನಡೆದ ಹರಿದಾಸರ ‘ದಾಸ’ ಪರೀಕ್ಷೆಯ ಸಂಚಾಲಕ ಕಾರ್ಯ ನಿರ್ವಹಿಸಿ ಮಾತನಾಡಿದರು.
ದೇಶದ ಸನಾತನ ಪರಂಪರೆಯನ್ನು ಹರಿದಾಸರು ತಮ್ಮ ಸಾಹಿತ್ಯ ಪ್ರಕಾರಗಳಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ, ತಂತ್ರಜ್ಞಾನ ಬೆಳೆದಂತೆ ಸಮ್ಮ ಸನಾತನ ಪರಂಪರೆ, ಸಂಸ್ಕಾರದ ಬಗ್ಗೆ ಇಂದಿನ ಯುವ ಪೀಳಿಗೆಗೆ ಮತ್ತು ಎಲ್ಲಾ ಧರ್ಮದ ಜನಗಳಿಗೆ ತಿಳಿಸುವ ಅಗತ್ಯವಿದೆ.
ಆದ್ದರಿಂದ ದಾಸರ ಕೀರ್ತನೆಗಳ ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ, ಇದರಲ್ಲಿ ಕೇವಲ ಬ್ರಾಹ್ಮಣ ಸಮುದಾಯ ಮಾತ್ರ ಬರೆಯುವುದಷ್ಟೆ ಅಲ್ಲ ಎಲ್ಲ ವರ್ಗದ ಜನರು ಬರೆಯ ಬಹುದಾಗಿದೆ ಎಂದು ಅವರು ತಿಳಿಸಿದರು.
ಈ ವೇಳೆ ಮಾಲತಿ ಮಾಳಗಿ, ವೈದ್ಯ ನಾಗೇಶ್ ಭಟ್, ವ್ಯಾಸರಾಜ್ ಟಿ, ಪರೀಕ್ಷಾರ್ಥಿಗಳಾದ ವಸಂತ, ಅನಿತಾ, ಅರುಣಾ ನಾಗೇಶ್ ಭಟ್, ಪಂಕಜಾ, ಮಾಲಾ, ಮಂಜುಳಾ, ಶಾರದಾ, ಸುಮನಾ, ಮೇಧಾವತಿ, ಸೌಮ್ಯ, ಅರ್ಚನ, ರೂಪಾ, ಅರ್ಪಣ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















