
ಬೀದರ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ದಿನಾಂಕ 11-01-2026 ರವಿವಾರದಂದು ಹಿಂದೂ ಸಮ್ಮೇಳನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
” ಕೋಟಿ ಸವಾಲಿಗೆ ಒಂದೇ ಉತ್ತರ : ಹಿಂದೂ ಭಾವದ ಜಾಗರಣ ಎಂಬ ಸಂದೇಶವನ್ನು ಇಟ್ಟುಕೊಂಡು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಹಿಂದೂ ಸಮ್ಮೇಳನ ಶೋಭಾಯಾತ್ರೆ ಮದ್ಯಾಹ್ನ 1:00 ಗಂಟೆಗೆ ಬಸವಕಲ್ಯಾಣದ ಕೋಟೆಯಿಂದ ಪ್ರಾರಂಭವಾಗಿ ಮಹಾತ್ಮಾಗಾಂಧಿ ಚೌಕ್, ಶ್ರೀ ಬಸವೇಶ್ವರ ಚೌಕ, ಮಾರ್ಗವಾಗಿ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಸಾಯಂಕಾಲ 4:00 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರು ಹಿರೇಮಠ ಮೇಹರ, ತಡೋಳಾ, ಪೂಜ್ಯ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ತ್ರಿಪೂರಾಂತ, ಬಸವಕಲ್ಯಾಣ, ಹಾಗೂ ಶ್ರೀ ಕೃಷ್ಣ ಜೋಶಿ ಸಾಮಾಜಿಕ ಕಾರ್ಯಕರ್ತರು, ಕಲಬುರಗಿ ಇವರಿಂದ ದಿಕ್ಸೂಚಿ ಭಾಷಣ ಆಗಲಿದೆ ಎಂದು ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷರಾದ ಶ್ರೀ ಡಾ. ಬಸವರಾಜ ಸ್ವಾಮಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ



















