ಹನೂರು : ಚಾಮರಾಜನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹೆಸರಾಂತ ಜಿಲ್ಲಾಧಿಕಾರಿಗಳಾದ ಹರ್ಷಗುಪ್ತ ರವರು ಅಂದು ಚಲುವ ನಗರ ಅಭಿವೃದ್ಧಿಗೆ ಪಣತೊಟ್ಟಿದ್ದರು ಅವರ ನಂತರದ ಸ್ಥಾನವನ್ನು ತುಂಬಿದ ಏಕೈಕ ವ್ಯಕ್ತಿಯಾದವರು ನಮ್ಮಜಿಲ್ಲೆಗೆ ಬಂದಿದ್ದರೆ ಅದು ಶ್ರೀಮತಿ ಶಿಲ್ಪನಾಗ್ ರವರು ಎಂದು ಮಾನಸ ಕಾಲೇಜು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ದತ್ತೇಶ್ ಕುಮಾರ್ ತಿಳಿಸಿದರು.
ಚಾಮರಾಜನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಚಾಮರಾಜನಗರ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿಗಳಾಗಿದ್ದ ಶ್ರೀಮತಿ ಶಿಲ್ಪಾ ನಾಗ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ದತ್ತೇಶ್ ಕುಮಾರ್ ರವರು ಭಾಗವಹಿಸಿ ಶುಭ ಕೋರಿದರು.
ಇದೇ ಸಮಯದಲ್ಲಿ ಹಲವಾರು ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಜರಿದ್ದು, ಶುಭ ಕೋರಿದರು.
ವರದಿ ಉಸ್ಮಾನ್ ಖಾನ್



















