ಹನೂರು : ವಿಕಲಚೇತನ ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಸೇರಿದಂತೆ ವಿವಿಧ ಸಲಕರಣೆಗಳನ್ನು ಶಾಸಕ ಎಂ. ಆರ್. ಮಂಜುನಾಥ್ ಅವರು ವಿತರಣೆ ಮಾಡಿದರು.
ಈ ವೇಳೆ ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಎಲ್ಲರಂತೆ ವಿಕಲಚೇತನರು ಸಹ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಇವರರಿಗೆ ನೆರವು ಹಾಗೂ ಸಹಕಾರಿಯಾಗುವಂತೆ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಇದೊಂದು ಬೆಳವಣಿಯಾಗಿದೆ ಎಂದರು.
ಇದೀಗ ಹನೂರಿನಲ್ಲಿ ವಿತರಣೆಯಾಗಿರುವ ವಿವಿಧ ಸಲಕರಣೆಗಳು ಜಿಲ್ಲೆಯಾದ್ಯಂತ ಇರುವ ಅರ್ಹ ವಿಕಲಚೇತನರಿಗೂ ಸಹ ದಕ್ಕಬೇಕಾಗಿದೆ ಮುಂದಿನ ದಿನಗಳಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಅರ್ಹ ಫಲವನುಗಳಿಗೆ ಮತ್ತಷ್ಟು ಪರಿಕರಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಇದೆ ವೇಳೆ ಭರವಸೆ ನೀಡಿದರು.
ಇದೆ ಸಮಯದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ. ಡಾ ಕೆ ಎನ್ ಮಂಜುನಾಥ್ ಹಾಗೂ ಮುಖಂಡರುಗಳಾದ ಮಂಜೇಶ್ ಗೌಡ, ಚಿನ್ನವೆಂಕಟ್, ಎಸ್. ಆರ್ ಮಹದೇವ್, ಅಮೀನ್, ನಟರಾಜುಗೌಡ, ಗೋವಿಂದ, ರಾಚಪ್ಪ, ಶಿವು, ವೆಂಕಟೇಶ್,ಪ್ರಸನ್ನ, ಸೇರಿದಂತೆ ಇನ್ನಿತರರು ಇದ್ದರು.
ವರದಿ :ಉಸ್ಮಾನ್ ಖಾನ್




















