
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ
ಶಾಯಿರಿಗಳನ್ನು ಬರೆಯುವರ ಸಂಖ್ಯೆ ಅದ್ಬುತವಾಗಿದೆ ಬರುವ ದಿನಗಳಲ್ಲಿ ಈ ಪರಂಪರೆ ಉಜ್ವಲವಾಗಿ ಸಾಗುತ್ತಾ ಸಾಮಾಜಿಕ ಬದಲಾವಣೆಗೆ ಪೂರಕವಾಗುವ ರೀತಿಯಲ್ಲಿ ಸಾಹಿತ್ಯ ರಚಿಸಬೇಕೆಂದು ಸಾಹಿತಿ
ಡಾ. ಪವನ ಕುಮಾರ್ ಗುಂಡೂರು ಅಭಿಪ್ರಾಯ ಪಟ್ಟರು.

ಭಾನುವಾರ ಕೊಪ್ಪಳದ ತಾ.ಪಂ.ಸಭಾಂಗಣದಲ್ಲಿ ಶಿವಶಕ್ತಿ ಪ್ರಕಾಶನ ಕೊಪ್ಪಳ, ಮಂಜುಳಾ ಪ್ರಕಾಶನ ಬೈರಾಪುರ ಹಾಗೂ ಕೊಪ್ಪಳ ಜಿಲ್ಲಾ/ ತಾಲೂಕ ಚುಟುಕು ಸಾಹಿತ್ಯ ಪರಿಷತ್, ಸಹಯೋಗದಲ್ಲಿ. ಶಿವಪ್ರಸಾದ ಹಾದಿಮನಿ ಯವರ “ನೂರೊಂದು ಶಾಯಿರಿಗಳು,” ಮತ್ತು ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಯವರ, “ಮಧು ಬನದ ಶಾಯಿರಿಗಳು” ಪುಸ್ತಕಗಳ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲೇಖಕರು ಕಾವ್ಯವನ್ನು ಒತ್ತಾಯ ಪೂರ್ವಕವಾಗಿ ಬರೆಯದೇ ನಿತ್ಯ ಕಲಿಯುವ ವಿದ್ಯಾರ್ಥಿ ರೀತಿಯಾಗಿ ಬರೆಯುವ ಆಸಕ್ತಿ ಹೊಂದಬೇಕೆಂದು ತಿಳಿಸಿದರು.
ಗದ್ಯ ಬರೆಯುವುದು ಸುಲಭ ಪದ್ಯ ಬರೆಯುವುದು ಕಠಿಣ ಎಂದು ತಿಳಿಸಿದರು.
ಸಾಹಿತಿ ಶ್ರೀ ಶರಣಪ್ಪ ಎನ್. ಮೆಟ್ರಿ ಅಧ್ಯಕ್ಷತೆ ವಹಿಸಿದ್ದರು. ಶಿ. ಕಾ ಬಡಿಗೇರ ಅವರು ಕೃತಿಗಳನ್ನು ಲೋಕಾಪ೯ಣೆ ಗೈದರು. ನೂರೊಂದು ಶಾಯಿರಿಗಳ ಕುರಿತು ವೀರಪ್ಪ ನಿಂಗೋಜಿ ಮಾಜಿ ಅಧ್ಯಕ್ಷರು ಕಸಾಪ ಕೊಪ್ಪಳ ಮಾತನಾಡಿದರು. ಲೇಖಕ ಶಿವಪ್ರಸಾದ ಹಾದಿಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಜಿಲ್ಲಾ ಚು. ಸಾ. ಪ ಅಧ್ಯಕ್ಷ ರುದ್ರಪ್ಪ ಭಂಡಾರಿ , ಸಾಹಿತಿಗಳಾದ ಶರಣಬಸಪ್ಪ ಬಿಳಿಯಲಿ
ಕೊಟ್ರೇಶ ಜವಳಿ, ಕರಿಸಿದ್ಧನಗೌಡ ಮಾಲಿ ಪಾಟೀಲ. ,
ಈರಪ್ಪ ಬಿಜಲಿ , ಮರುಳಸಿದ್ದಪ್ಪ ದೊಡ್ಡಮನಿ , ಎ.ಪಿ ಅಂಗಡಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಮಹಾಂತೇಶ ನೆಲಾಗಣಿ ನಿರೂಪಿಸಿದರು.
ನಂತರ ಸಾಹಿತಿ ಸಾವಿತ್ರಿ ಮುಜುಮದಾರ್ ಚಲನಚಿತ್ರ ಅಕಾಡೆಮಿ ಸದಸ್ಯರು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಕವಿಗಳಾದ ವಿಜಯಲಕ್ಷ್ಮೀ ಕೊಟಗಿ, ಸೋಮಶೇಖರ ಕಂಚಿ, ರವಿ. ಎಸ್. ಹಿರೇಮನಿ, ಅಕ್ಕಮಹಾದೇವಿ ಅಂಗಡಿ., ಎಸ್.ಎಂ. ಕಂಬಾಳಿ ಮಠ, ಬಸವರಾಜ ಉಪ್ಪಿನ, .ಡಾ. ನಾಗರಾಜ್ ದಂಡೋತಿ, ಮುಮ್ತಾಜ್ ಬೇಗಂ ಕನಕಗಿರಿ, ವಸಂತ ಗುಡಿ, ಡಾ. ಸಂಗಮೇಶ್ವರ ಪಾಟೀಲ್ (ಸಂಪಾ), ಶಿವಮ್ಮ ಗುರು ಸ್ಥಲಮಠ, ಅಮೀನ್ಸಾಬ್ ಮುಲ್ಲಾ ಸೇರಿದಂತೆ 17 ಜನ ಕವಿತೆ ವಾಚನ ಮಾಡಿದರು. ಯಲ್ಲಪ್ಪ ಎಂ. ಹರನಾಳಗಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















