ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವಕಲ್ಯಾಣದಲ್ಲಿ ಅದ್ದೂರಿಯಾಗಿ ಜರುಗಿದ ಬೃಹತ್ ಹಿಂದೂ ಮಹಾಸಮ್ಮೇಳನ

ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ಅತಿ ವಿಜೃಂಭಣೆಯಿಂದ ನಡೆದ ಬೃಹತ್ ಹಿಂದೂ ಮಹಾಸಮ್ಮೇಳನದ ಶೋಭಾಯಾತ್ರೆಗೆ ಬಸವಕಲ್ಯಾಣದ ಪರಮಪೂಜ್ಯರಾದ ಶ್ರೀ ಡಾಕ್ಟರ್ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು.
ಈ ಭವ್ಯ ಮೆರವಣಿಗೆಯು ನಗರದ ಕೋಟೆಯಿಂದ ಪ್ರಾರಂಭವಾಗಿ ಮುಖ್ಯರಸ್ತೆ ಮಾರ್ಗವಾಗಿ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದಿಂದ ಸಾಗಿ ಅಕ್ಕಮಹಾದೇವಿ ಆವರಣದವರೆಗೆ ಜರುಗಿತು.
ಈ ಹಿಂದೂ ಮಹಾ ಸಮಾವೇಶದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು, ಹೆಣ್ಣು ಮಕ್ಕಳು ತಲೆಯ ಮೇಲೆ ಕುಂಭ ಕಳಸ ಹೊತ್ತು ಕಾರ್ಯಕ್ರಮ ನಡೆಯುವ ಆವರಣದವರೆಗೆ ನಡೆಯುತ್ತಾ ಸಾಗಿದರು, ಮಕ್ಕಳು ಶರಣರ ವೇಷಭೂಷಣ ಧರಿಸಿ ಅತೀ ಸುಂದರವಾಗಿ ಕಾಣುತ್ತಿದ್ದರು. ಒಂದೆಡೆ ಲಂಬಾಣಿ ವೇಷಧಾರಿ ಮಹಿಳೆಯರ ನೃತ್ಯ , ಮಹಿಳೆಯರ ಕೋಲಾಟ, ಡೊಳ್ಳು ಹಾಗೂ ಬ್ಯಾಂಡ್ ಜೊತೆಗೆ ಹಿಂದೂ ಮಹಾ ಸಮಾವೇಶ ಆವರಣದವರೆಗೆ ತಲುಪಿತು. ತದ ನಂತರ ಕಾರ್ಯಕ್ರಮವನ್ನು ತಡೋಳಾ, ಮೆಹಕರ್ ಶ್ರೀಗಳು ಉದ್ಘಾಟಿಸಿ ಕಾರ್ಯಕ್ರಮ ಪ್ರಾರಂಭ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಹಂಚಾಟೆ, ಬಜರಂಗ ದಳದ ಅಧ್ಯಕ್ಷ ರವಿ ನಾವದ್ಗೇಕರ್ ಡಾ.ಧನರಾಜ ಚಂದನಕೆರೆ, ಜ್ಯೋತಿ ತೂಗಾವೆ ಮಾತನಾಡಿದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!