ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಟಕಲ್ : ಅದ್ದೂರಿಯಾಗಿ ಜರುಗಿದ ಹುಳಗೇರಾ ಶ್ರೀ ಅಣವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ :
ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ಶ್ರೀ ಅಣವೀರಭದ್ರೇಶ್ವರ ಮತ್ತು ಭದ್ರಕಾಳಿ ಕಲ್ಯಾಣ ಮಹೋತ್ಸವ ಗೋಧೂಳಿ ಸಮಯದಲ್ಲಿ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ದಿ. 14-01-2026 ರ ಬುಧವಾರ ಬೆಳಿಗ್ಗೆ 6 ಗಂಟೆಯಿಂದ 10.30 ರವರೆಗೆ ಮಹಾ ರುದ್ರಾಭಿಷೇಕ, 11 ಗಂಟೆಯಿಂದ 3 ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿವಾನುಭವ ಚಿಂತನೆ ಮತ್ತು ಧರ್ಮ ಸಭೆ ನಡೆಯಿತು. ಸಾಯಂಕಾಲ 5:30 ನಿಮಿಷಕ್ಕೆ ಕಲ್ಯಾಣ ಕಾರ್ಯ ಜೋರಾಗಿ ಜರುಗಿತು. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ಮಹಾರಾಷ್ಟ್ರದಿಂದಲೂ ಈ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಜ್ಯೋತಿ ಬೆಳಗಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯಶ್ರೀ ರೇವಣಸಿದ್ಧ ಶಿವಾಚಾರ್ಯರು ” ಶ್ರೀನಿವಾಸ ಸರಡಗಿ (ಮಠ) ನಮ್ಮ ಸನಾತನ ಹಿಂದೂ ಪುರಾಣದ ಪ್ರಕಾರ ಶ್ರೀ ವೀರಭದ್ರ ಸ್ವಾಮಿ ಶಿವ ಪರಮಾತ್ಮರ ಕಡುಕೋಪದ ಶಕ್ತಿ ಪರಿಣಾಮವಾಗಿ ಉದ್ಭವಿಸಿದದಂತಹ ಶಕ್ತಿಶಾಲಿ ದೈವ. ಈಗ ದೇವಸ್ಥಾನ ನವೀಕರಣಗೊಳ್ಳುತ್ತಿರುವುದು ಬದಲಾವಣೆಯಾಗಿದ್ದು ಬಹಳ ಸಂತೋಷವಾಯಿತು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವ ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷರಿಗೂ, ಸರ್ವ ಸದಸ್ಯರಿಗೆ ಮತ್ತು ಭಕ್ತಾದಿಗಳಿಗೆ ಧನ್ಯವಾದಗಳನ್ನು ತಿಳಿಸಿ ಇಂತಹ ಸತ್ಕಾರಕ್ಕೆ ತಾವೆಲ್ಲರೂ ಕೈ ಜೋಡಿಸಿ ಇನ್ನೂ ಹೆಚ್ಚಿನ ಅಭಿವೃದ್ಧಿಗೊಳ್ಳಲಿ ಆ ಅಣವೀರಭದ್ರೇಶ್ವರನ ಆಶೀರ್ವಾದ ತಮ್ಮೆಲ್ಲರ ಮೇಲಿರಲಿ ” ಎಂದು ಹರಸಿದರು.
ಅಧ್ಯಕ್ಷತೆಯನ್ನು ಪೂಜ್ಯಶ್ರೀ ಷಟ್ ಸ್ಥಲ, ಬ್ರಹ್ಮ ರೇವಣಸಿದ್ದ ಶಿವಾಚಾರ್ಯರು ರಟಕಲ್ ಪೂಜ್ಯಶ್ರೀ ನೀಲಕಂಠ ದೇವರು ವಹಿಸಿ, ಅತಿಥಿಗಳಾಗಿ ಆಗಮಿಸಿದ್ದ ರಾಮಲಿಂಗ ರೆಡ್ಡಿ ದೇಶಮುಖ, ಶರಣಬಸಪ್ಪ ಮಮಶೆಟ್ಟಿ, ಮಾತನಾಡಿದರು.
ಈ ಸಂದರ್ಭದಲ್ಲಿ ಅಣ್ಣಾರಾವ ಪೆದ್ದಿ, ವೀರಣ್ಣ ಗಂಗಾಣಿ, ಡಾ. ಅನಿಲ ರಟಕಲ್, ನೀಲಕಂಠರಾವ ಪಾಟೀಲ್, ಸೋಮಣ್ಣ ಕುರಕೋಟಿ, ಮಹೇಶ ಪೆದ್ದಿ, ರಾಜಶೇಖರ ಗುಡುದಾ, ಅರ್ಚಕರಾದ ಗೌರಿಶಂಕರ ತೆಂಗಿನಮಠ, ರೇವಣಸಿದ್ದಪ್ಪ ಕುರಕೋಟಿ, ಸಂತೋಷ್ ಚಿದರಿ, ಜಗದೇವಪ್ಪ ಮಹಗಾoವ, ಚಿಕ್ಕವೀರಪ್ಪ ಮಾಮಾ, ಮಲ್ಲಿಕಾರ್ಜುನ್ ಕುರಕೋಟಿ, ಮಗಲಪ್ಪಸರ್ ಚಿದರಿ, ನಾಗಣ್ಣ ಗಡ್ಡಿ, ರವಿ ಬಳಾ ಸೇರಿದಂತೆ ಭಾಜಾ ಭಜಂತ್ರಿಯವರಿದ್ದರು. ರಟಕಲ್ ಪೊಲೀಸರು ಸೂಕ್ತ ಬಂದೋಬಸ್ತ್ ನೀಡಿದರು.

ವರದಿ ಎಸ್ ವಿ ಗಂಗಾಣಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!