ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅತ್ಯಾಚಾರ

ಮುಗಿಯದ ಕಥೆಯಿದು
ಸುಡುತ್ತೇವೆ ನೂರಾರು ಮೇಣದಬತ್ತಿಯನ್ನು
ಬಿಗಿಯುತ್ತೇವೆ ಭಾಷಣ
ದುಃಖಿಸುತ್ತೇವೆ, ಕೊರಗುತ್ತೇವೆ
ನೆನೆ ನೆನೆದು
‘ಅಯ್ಯೋ ಸಣ್ಣ ಮಗುವಂತೆ’
ಉದ್ಘರಿಸುತ್ತೇವೆ,
ಚೆಲ್ಲುವೆವು ನಿಟ್ಟುಸಿರ
ಚಿಂತಿಸುವೆವು ಮುಂದೇನೆಂದು
ಹೆಣ್ಣೇಕೆ ಹುಟ್ಟಿತೆಂದು
ಕೊಡುತ್ತೇವೆ ನೂರಾರು ಸಲಹೆಗಳನ್ನು
ಮರೆತು ಬಿಡುತ್ತೇವೆ
ಆಕ್ಷಣವನ್ನು

ನಡೆಯುತ್ತದೆ? ——- ಏನು?
ಮತ್ತೊಮ್ಮೆ ಮಗದೊಮ್ಮೆ  
ಅಲ್ಲೆಲ್ಲೋ ಇನ್ನೆಲ್ಲೋ ಮತ್ತೆಲ್ಲೋ
ಕೊನೆಗೊಮ್ಮೆ ನಡೆದರೂ ನಮ್ಮ ಪಕ್ಕದಲ್ಲಿ
ದಿವ್ಯ ನಿರ್ಲಕ್ಷ್ಯ ನಮ್ಮದು
ಅದೇ ಪುನರಾವರ್ತನೆ
ದೂಷಿಸುತ್ತೇವೆ , ಮರುಗುತ್ತೇವೆ
ಹಾಗೆಯೇ ತೇಲಿಬಿಡುತ್ತೇವೆ ವಿಷಯವನು

ಹೊಣೆಯಾಗಿಸುತ್ತೇವೆ
ಪಕ್ಷಗಳನ್ನು , ಜಾತಿಗಳನ್ನು, ಧರ್ಮಗಳನ್ನು
ತಿಳಿಯಲಾರೆವು ಮೂಲ ಕಾರಣವ
ನಿಂದಿಸಿ, ಆರೋಪಿಸಿ, ನಡೆಸಿ ಜಾಥಾ,
ಮಾಧ್ಯಮಗಳಲ್ಲಿ ಕುಳಿತು
ನಡೆಸುವಾಗ ವಿತಂಡವಾದವ
ಟಿ ಆರ್ ಪಿ ಯ ಸರಕಾಗುತ್ತದೆ ಅವಳ ಕಣ್ಣೀರು
ಮರೆಯುತ್ತೇವೆ ಮತ್ತೆ
ತಣ್ಣಗಾಗುತ್ತೇವೆ ಎಂದಿನಂತೆ
ಏನೂ ಆಗದಂತೆ

ಬಳಸುತ್ತವೆ
ಪಕ್ಷಗಳು ತಮ್ಮ ಬೇಳೆಯ ಬೇಯುವಿಕೆಗೆ
ಹಳಿಯುತ್ತದೆ  ವಿರೋಧ ಪಕ್ಷವು
ಆಡಳಿತ ಪಕ್ಷವನು
ಕೊನೆಗೊಮ್ಮೆ ನೀಡುತ್ತಾರೆ ಧರ್ಮ ಜಾತಿಯ
ಹಣೆ ಪಟ್ಟಿಯನು
ನಗು ನಗುತ್ತಾ ಚರ್ಚಿಸುವರು ಸದನದಲಿ
ಘೋಷವಾಕ್ಯವೊಂದು ತಯಾರಾಗುತ್ತದೆ
‘ಮಲಗಿ ಆನಂದಿಸಿ’

ಬಿಸಿ ತಟ್ಟುತ್ತದೆ ಒಮ್ಮೆ
ಸಂತ್ರಸ್ತೆ ತಮ್ಮದೇ ಮನೆಯ ಮಗಳಾದಾಗ
ಬದಲಾವಣೆಯ ಬಯಸಿ
ನ್ಯಾಯವ ಹುಡುಕಿ
ಮರೆತ ಮಾನವೀಯತೆಯ
ಎಳೆಯ ಅರಸುತ್ತಾ ಸಾಗುವೆವು

ಮೊದಲಾಗಲಿ ಬದಲಾವಣೆ ನಮ್ಮಿಂದಲೇ
ಮಗಳಿಗೆ ವಸ್ತ್ರ ಸಂಹಿತೆಯಂತೆ
ಮಗನಿಗೂ ನೀಡೋಣ ಸಂಸ್ಕಾರ
ತಡೆಯೋಣ ಮುಂದಾಗುವ ಅತ್ಯಚಾರ
ಅಬಲೆಯಲ್ಲ ಅವಳು ಸಬಲಳು
ಬಲಹೀನತೆಯ ತೊರೆದು
ನನಸಾಗಲಿ ಸ್ವಸ್ಥ ಸಮಾಜದ ಕನಸು.

  • ರಶ್ಮಿ ಶಮಂತ್, ಹೊಸನಗರ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!