ಕೊಪ್ಪಳ/ಕುಷ್ಟಗಿ: ರೈತರ ಜಮೀನಿಗೆ ವಿದ್ಯುತ್ ಅಡಚಣೆ ಆಗುತ್ತಿದ್ದು, ಕರ್ನಾಟಕ ಜನ ದರ್ಶನ ವೇದಿಕೆ ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಇವರ ಸಮ್ಮುಖದಲ್ಲಿ ವಿದ್ಯುತ್ ಸರಬರಾಜು ಅಧಿಕಾರಿಗಳಿಗೆ ರೈತರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಮಾತನಾಡಿ, ಯಾರಗೇರ, ಗೊರಬಿಹಾಳ, ವಾರಿಕಲ್ ಭಾಗದ ರೈತರಿಗೆ ಸರಿಯಾಗಿ ವಿದ್ಯುತ್ ಇಲ್ಲದೆ ಬೆಳೆ ಬರುತ್ತಿಲ್ಲ, ಪ್ರತಿ 10 ನಿಮಿಷಕ್ಕೂ ವಿದ್ಯುತ್ ಅಡಚಣೆ ಮಾಡುತ್ತಿದ್ದು ರೈತರ ಬೆಳೆದ ಬೆಳೆ ನಷ್ಟವಾಗುತ್ತದೆ, ವಿದ್ಯುತ್ ಸರಿಯಾಗಿ ಕೊಡದಿದ್ದರೆ ಮುಂದಿನ ದಿನಮಾನಗಳಲ್ಲಿ ನಿಗಮ ಸರಬರಾಜು ಕಚೇರಿ ರೈತರಿಂದ ಮುತ್ತಿಗೆ ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ವೇದಿಕೆಯ ಪದಾಧಿಕಾರಿಗಳು, ಯಾರಗೆರ್, ಗೊರಬಿಹಾಳ, ವಾರಿಕಲ್ ಸುತ್ತಮುತ್ತಲಿನ ಗ್ರಾಮದ ರೈತರು, ಗುರು-ಹಿರಿಯರು, ಭಾಗಿಯಾಗಿದ್ದರು.
- ಕರುನಾಡ ಕಂದ




















