ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಸಲಹೆ, ಸೂಚನೆಗಳ ಸಂಗ್ರಹ

ಕಂಪ್ಲಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯ-ವ್ಯಯದ ಪೂರ್ವಭಾವಿ ಸಭೆಯು ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಅವರ ಸಭಾಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ನಂತರ ಲೆಕ್ಕಿಗ ರಮೇಶ ಬೆಳಂಕರ್ ಅವರು ಪಟ್ಟಣದ ಪ್ರಗತಿಯ ವರದಿಯನ್ನು ಮಂಡಿಸಿ ಮಾತನಾಡಿ, ಎಸ್‌ಎಫ್‌ಸಿ ವಿಶೇಷ ಅನುದಾನದ ಸುಮಾರು 2 ಕೋಟಿಯಲ್ಲಿ ನಡುವಲ ಮಸೀದಿ-ಜೋಗಿ ಕಾಲುವೆವರೆಗಿನ ಅಗಲೀಕರಣ ಮಾಡಿದ್ದು, ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಐತಿಹಾಸಿಕ ಸೋಮಪ್ಪ ಕೆರೆ ಹಾಗೂ ಪಾರ್ಕ್ ಅಭಿವೃದ್ಧಿಗಾಗಿ ಅಮೃತ್ ಯೋಜನೆಯಡಿ ಸುಮಾರು 2 ಕೋಟಿ ನಿಗದಿಪಡಿಸಿದೆ. ಒಳ ಚರಂಡಿಗಾಗಿ ಎಸ್‌ಟಿಪಿ ಘಟಕ ನಿರ್ಮಾಣ ಮಾಡಲು ಅರಳಿಹಳ್ಳಿ ತಾಂಡದಲ್ಲಿ ಸರ್ವೆ ನಂ-77/ಎ ರಲ್ಲಿ 5 ಎಕರೆ ಭೂಮಿ ನಗದಿಪಡಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದಿದ್ದು, ಡಿಪಿಆರ್ ಹಂತದಲ್ಲಿದೆ. ನೀರು ಸರಬರಾಜು ಯೋಜನೆಯಲ್ಲಿ ರೈಸಿಂಗ್ ಮೇನ್ ಪೈಪ್‌ಲೈನ್ ಬದಲಾಯಿಸುವ ಕಾಮಗಾರಿ ಮಾಡುವುದು. ಎಸ್‌ಎಫ್‌ಸಿ ವಿಶೇಷ ಅನುದಾನದ 170 ಲಕ್ಷ ವೆಚ್ಚದಲ್ಲಿ ವಾರದ ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯೊಂದಿಗೆ ಆದೇಶ ನೀಡಲಾಗಿದ್ದು, ಶ್ರೀಘ್ರವಾಗಿ ಕಾಮಗಾರಿ ಆರಂಭಿಸಲಾಗುವುದು. ರಾಜ್ಯ ಸರ್ಕಾರದ ವಿಶೇಷ ಅನುದಾನದ ಸುಮಾರು 7.50 ಕೋಟಿಯಲ್ಲಿ ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಡಿಪಿಆರ್ ಪ್ರಗತಿಯಲ್ಲಿದೆ. ಹೀಗೆ ವಿವಿಧ ಅಭಿವೃದ್ಧಿಗೆ ಸಂಬಂಧಿಸಿದ ವರದಿಯನ್ನು ಮಂಡಿಸಿದರು.
ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದು, ಬಜೆಟ್‌ನಲ್ಲಿಟ್ಟು ಪ್ರತಿಯೊಂದು ಸಮಸ್ಯೆಗಳನ್ನು ಮುಕ್ತಿ ನೀಡಲು ಸೂಕ್ತಕ್ರಮವಹಿಸಲಾಗುವುದು ಎಂದರು.

ಸಲಹೆ, ಸೂಚನೆ :
ಇಲ್ಲಿನ ಪೂರ್ವಭಾವಿ ಸಭೆಯಲಿ ಜನಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಯವರು ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಪಟ್ಟಣದ ಸಣಾಪುರ ರಸ್ತೆ, ಮುದ್ದಾಪುರ ಅಗಸಿಯ ಸೊಸೈಟಿಯಿಂದ ರಸ್ತೆ ಅಗಲೀಕರಣ ಮಾಡಿ, ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿರುವ ಶೌಚಗೃಹಗಳು ಬಾಗಿಲು, ಕಿಡಕಿ ಸೇರಿದಂತೆ ಹಾಳಾಗುವ ಜೊತೆಗೆ ಸ್ವಚ್ಚತೆ ಇಲ್ಲದೇ ಗಬ್ಬು ನಾರುತ್ತಿದೆ. ಇದರ ಬಗ್ಗೆ ಗಮನ ಹರಿಸಬೇಕು. ಸೋಮಪ್ಪ ಕೆರೆಯಲ್ಲಿ ಕುಡುಕರ ಹಾವಳಿಯಿಂದ ಎಲ್ಲೆಂದರಲ್ಲಿ ಬಾಟಲಿಗಳು ಪ್ರತ್ಯಕ್ಷವಾಗುತ್ತಿವೆ. ಇಲ್ಲಿ ಬರುವ ವಾಯು ವಿಹಾರಿಗಳಿಗೆ ತುಂಬ ತೊಂದರೆ ಉಂಟಾಗಿದೆ. ಗ್ರಂಥಾಲಯ ಸಂಚಾರಿ ಬಸ್ ನಿರುಪಯುಕ್ತವಾಗಿದ್ದು, ಇದರಲ್ಲಿ ಅನೈತಿಕ ಘಟನೆಗಳು ನಡೆಯುತ್ತಿವೆ. ಸಮರ್ಪಕವಾಗಿ ಬೀದಿ ದೀಪಗಳಿಲ್ಲ. ವಿಹಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಕಾವಲುಗಾರರನ್ನು ನೇಮಿಸಬೇಕು. ಆದ್ದರಿಂದ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕೆಂದು ಯುವ ಮುಖಂಡ ಬಿಕೆ ವಿರುಪಾಕ್ಷ ತಿಳಿಸಿದರು. ನಂತರ ಅನೇಕರು ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಹೂಗಾರ ರಮೇಶ, ಜಾಫರ್, ಸುಧಾಕರ, ಅಕ್ಕಿಜಿಲಾನ್, ಎನ್.ಎಂ.ಪತ್ರಯ್ಯಸ್ವಾಮಿ, ವೆಂಕಟೇಶ, ಚನ್ನಬಸುವ, ತಿಮ್ಮಪ್ಪನಾಯಕ ಹಾಗೂ ಸಿಬ್ಬಂದಿಗಳು ಸೇರಿದಂತೆ ಸಂಘ-ಸಂಸ್ಥೆಯವರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!