
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೈಲೇಶ್ವರ ಗ್ರಾಮದ ಬ್ರಿಲಿಯಂಟ್ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಜನವರಿ 16 ಮತ್ತು 17 ರಂದು ಶಾಲೆಯ ಆವರಣದಲ್ಲಿ “ಬ್ರಿಲಿಯಂಟ್ ಕಲಾ ವೈಭವ” ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಸಿದ್ದಲಿಂಗ ದೇವರು ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟೆ ಮತ್ತು ಪೂಜ್ಯಶ್ರೀ ಪ್ರಭು ಕುಮಾರ್ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪಟ್ಟದ ದೇವರು ಹಿರೇಮಠ ಕೊಲ್ಲಾರ್ ಬೇಲೂರು
ನೆರವೇರಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಿ ಎಸ್ ಸಾವಳಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುದ್ದೇಬಿಹಾಳ ನೆರವೇರಿಸಿದರು.
ಮುಖ್ಯ ಅತಿಥಿ ಸ್ಥಾನವನ್ನು ತಾಳಿಕೋಟೆಯ ಪ್ರಸಿದ್ಧ ವಿದ್ಯಾಸಂಸ್ಥೆ ಸರ್ವಜ್ಞ ವಿದ್ಯಾಪೀಠದ ಅಧ್ಯಕ್ಷರಾದ ಶ್ರೀ ಸಿದ್ದನಗೌಡ ಮಂಗಳೂರು ರವರು ವಹಿಸಿಕೊಂಡರು.
ಈ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎನ್ ಬಿ ನಡುವಿನ ಮನಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಶ್ರೀ ಆರ್ ವಿ ದಮ್ಮೂರ್ ಮಠ ಕ್ಷೇತ್ರ ಸಮನ್ವಯ ಅಧಿಕಾರಿಗಳು ಮುದ್ದೇಬಿಹಾಳ,
ಶ್ರೀ ಎಸ್ ಎಸ್ ಹಿರೇಮಠ ಶಿಕ್ಷಣ ಸಂಯೋಜಕರು ತಾಳಿಕೋಟೆ ವಲಯ,
ಶ್ರೀ ಕೆ ಎಸ್ ಸಜ್ಜನ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ತಾಳಿಕೋಟೆ ವಲಯ,
ಶ್ರೀರಾಜು ಮೂರುಮಾನ ಸಮೂಹ ಸಂಪನ್ಮೂಲ ವ್ಯಕ್ತಿಗಳು ಬ. ಸಾಲವಾಡಗಿ ಕ್ಲಸ್ಟರ್ ಇವರುಗಳು ಗೌರವಾನ್ವಿತ ಉಪಸ್ಥಿತಿ ವಹಿಸಿಕೊಂಡಿದ್ದರು.
ಬ್ರಿಲಿಯಂಟ್ ಕುಟುಂಬದ ಶಿಕ್ಷಕರಾದ ಶಿವು ಅವರು ಸ್ವಾಗತ ಕೋರಿದರು.
ಸಂಸ್ಥೆಯ ನಿರ್ದೇಶಕರಾದ ಎಸ್ ಹೆಚ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಂಸ್ಥೆ ಇಂದು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಕ್ರೀಡಾ ವಲಯದಲ್ಲಿ ಉತ್ತಮ ಸ್ಥಾನದಲ್ಲಿ ಇದೆ, ಹಾಗೆಯೇ ನಮ್ಮ ಸಂಸ್ಥೆಯಲ್ಲಿ ಕಲಿತ ಟಾಪರ್ ವಿದ್ಯಾರ್ಥಿಗಳನ್ನು ಎಲ್ಲಾ ಇಲಾಖೆಗಳಲ್ಲಿ ಕಾಣುವುದು ನಮಗೆ ಹೆಮ್ಮೆ ಅನಿಸುತ್ತದೆ. ದಿವಂಗತರಾದ ಎಂ ಎಂ ಬಿರದಾರ್ ಮತ್ತು ಎಂ ಎಂ ಮಕoದಾರ ಅವರು ಸಂಸ್ಥೆಯನ್ನು ಹುಟ್ಟು ಹಾಕಿದರು. ಮೊದಲು 1996ರಲ್ಲಿ ಬ್ರಿಲಿಯಂಟ್ ಕೋಚಿಂಗ್ ಕ್ಲಾಸ್ ಸೆಂಟರ್ ಎಂದು ತಾಳಿಕೋಟೆಯಲ್ಲಿ ಚಿಕ್ಕ ಚೊಕ್ಕ ಕೋಣೆಯಲ್ಲಿ ಪ್ರಾರಂಭಿಸಿದರು. 2000ನೇ ಇಸವಿಯಲ್ಲಿ ನಾನು ಮಡಿವಾಳ ಸರ್, ಗಡಗಿ ಸರ್, ಎಂ ಎಂ ಬಿರಾದಾರ ಸರ್ ಅವರಿಗೆ ಪರಿಚಯವಾದೆವು ಆವಾಗ ಆಲೋಚನೆ ಮಾಡಿ 2003 ರಲ್ಲಿ ಮಾರುತಿ ಶಿಕ್ಷಣ ಸಂಸ್ಥೆ ಎಂದು ನಾಮಕರಣ ಮಾಡಿದೆವು, ನಂತರ 2005ರಲ್ಲಿ ಮೈಲೇಶ್ವರದಲ್ಲಿ ಈಗ ಭವ್ಯವಾಗಿ ಬೆಳೆದು ನಿಂತಾಗ ಶಿಕ್ಷಣ ಸಂಸ್ಥೆಯ ಪ್ರಚಾರಕ್ಕೆ ಮೈಲೇಶ್ವರ ಗ್ರಾಮದಲ್ಲಿ ಹೋದಾಗ ರಸ್ತೆ ಅಪಘಾತದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಎಂ ಎಂ ಬಿರಾದಾರವರ ಅಕಾಲಿಕ ಮರಣದಿಂದ ದುಃಖದ ನಡುವಿನಲ್ಲಿ ಬಿದ್ದು ನಂತರ ನಿಧಾನವಾಗಿ ಚೇತರಿಸಿಕೊಂಡು 2010 ರಿಂದ ಇಲ್ಲಿಯವರೆಗೆ ದಿವಂಗತರಾದ ಗಡಗಿ ಸರ್,ನಾನು ಮಡಿವಾಳ ಸರ್ ಈಗ ನಡುವಿನ ಮನೆ ಸರ್ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮುನ್ನಡೆಸಿಕೊಂಡು ಹೋಗುತ್ತಾ ಬಂದಿದ್ದೇವೆ ಈ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ವಿದ್ಯಾರ್ಥಿಗಳು ಹಾಗೂ ಪಾಲಕರ ಸಹಕಾರ ಕಾರಣ ಮತ್ತು ಆಡಳಿತ ಮಂಡಳಿ ಪರಿಶ್ರಮದಿಂದ ಬೆಳೆದು ನಿಂತಿದೆ ಹೇಳಿ ಪ್ರಾಸ್ತಾವಿಕ ಭಾಷಣಕ್ಕೆ ವಿದಾಯ ಹೇಳಿದರು.
ಬೀದರ್ ಜಿಲ್ಲೆಯ ಭಾಲ್ಕಿ ಪೂಜ್ಯರು ಆಶೀರ್ವಚನ ನೀಡುತ್ತಾ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದ ತಾಳಿಕೋಟೆಯ ಪುಣ್ಯ ನೆಲದಲ್ಲಿನ ಇಂತಹ ಅದ್ಭುತವಾದ ಶಿಕ್ಷಣ ಸಂಸ್ಥೆಯನ್ನು ನಾನು ಇಡೀ ಕರ್ನಾಟಕದಲ್ಲಿ ನೋಡಿಲ್ಲ ಏಕೆಂದರೆ ಶಾಲೆಯನ್ನು ಮಾತ್ರಕ್ಕೆ ಕೇವಲ ಶಿಕ್ಷಣಕ್ಕೆ ಸೀಮಿತವಾಗಿಸದೆ 10ನೇ ತರಗತಿ ವಿದ್ಯಾರ್ಥಿನಿಯರಿಂದ ಅವರ ತಂದೆ, ತಾಯಿಗಳ ಪಾದಪೂಜೆ ಮಾಡುವ ಮತ್ತು ತಂದೆ ತಾಯಿಗಳ ಪಾದದಲ್ಲಿ ದೇವರು ಇದ್ದಾನೆ ಎಂದು ಸಂಸ್ಕಾರ ಕಲಿಸಿಕೊಟ್ಟ ಕೀರ್ತಿ ಈ ಶಾಲೆಯದಾಗುತ್ತದೆ ಕೇವಲ 20 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸಂಸ್ಥೆ ಈಗ 1500 ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವಷ್ಟು ಶಕ್ತಿ ಹೊಂದಿದೆ ಮನೆಯಲ್ಲಿ ಕೊಡುವ ಸಂಸ್ಕಾರ, ಶಾಲೆಯಲ್ಲಿ ಕೊಡುವ ಜ್ಞಾನ ಇವೆರಡೂ ಜೊತೆಯಾಗಿದ್ದರೆ ಮಾತ್ರ ನಿಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಆದ್ದರಿಂದ ಈ ಶಾಲೆ ಇನ್ನೂ ಅದ್ಭುತವಾಗಿ ಬೆಳೆಯಲಿ ಎಲ್ಲಾ ಕ್ಷೇತ್ರಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳನ್ನು ಕಾಣುವಂತಹ ಸೌಭಾಗ್ಯ ಎಲ್ಲರಿಗೂ ಸಿಗಲಿ ಎಂದು ಹೇಳಿ ಆಶೀರ್ವದಿಸಿದರು.
ಈ ಕಾರ್ಯಕ್ರಮ ಉದ್ಘಾಟಕರಾದ ಶ್ರೀ ಬಿ. ಎಸ್. ಸಾವಳಗಿ ಅವರು ಮಾತನಾಡುತ್ತಾ ಶಿಕ್ಷಣ ಸಂಸ್ಥೆಯ ಈ ಕಾರ್ಯಕ್ರಮವನ್ನು ನೋಡಿ ಕ.ಸಾ.ಪ ಕಾರ್ಯಕ್ರಮವನ್ನು ನೋಡಿದಂತೆ ಭಾಸವಾಗುತ್ತದೆ ತಂದೆ ತಾಯಿ ಕಷ್ಟಪಟ್ಟು ಇಲ್ಲಿ ನಿಮಗೆ ದುಡ್ಡು ಕೊಟ್ಟು ಕಲಿಸಿರುತ್ತಾರೆ ಆ ದುಡ್ಡಿಗೆ ಬೆಲೆ ಕೊಟ್ಟು ನೀವು ಒಳ್ಳೆಯ ವಿದ್ಯಾರ್ಥಿಗಳಾಗಿ, ಶಿಕ್ಷಣವೇ ನಮ್ಮ ಮುಖ್ಯ ಗುರಿ ಎಂದು ಭಾವಿಸಿ ಶಿಕ್ಷಣವಿಲ್ಲದೆ ಏನೂ ನಮಗೆ ಸಾಧಿಸಲು ಸಾಧ್ಯವಿಲ್ಲ ಎಂದು ಮನಗಂಡು ನೀವೆಲ್ಲರೂ ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳಿ ನಿಮಗೆಲ್ಲಾ ಉನ್ನತ ಸಿಗಲೆಂದು ಎಂದು ಆಶಿಸುತ್ತಾ ಈ ಈ ಸಂಸ್ಥೆಯ ಕೀರ್ತಿ ಇನ್ನೂ ಹೆಚ್ಚು ಬೆಳೆಯಲೆಂದು ಆಶಿಸುತ್ತಾ ಈ ವೇದಿಕೆ ಮೇಲಿರುವವರಿಗೆ ಮುಂಭಾಗದಲ್ಲಿರುವವರಿಗೆ ವಂದಿಸುತ್ತಾ ಉದ್ಘಾಟನೆ ಭಾಷಣಕ್ಕೆ ಮುಕ್ತಾಯ ಹೇಳುತ್ತೇನೆ ಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿದ್ದನಗೌಡ ಮಂಗಳೂರು ರವರು ಈ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ಮಾಡುತ್ತಾರೆಂದು ಅಂದುಕೊಂಡಿದ್ದೆ ಆದರೆ ಈ ಕಲಾಮಂಟಪವನ್ನು ನೋಡಿ ಮುದ್ದು ವಿದ್ಯಾರ್ಥಿಗಳ ಶ್ರದ್ಧೆ, ಅವರುಗಳ ವೇಷ ಭೂಷಣ ನೋಡಿದರೆ ಇದು ಮೈಸೂರು ಅರಮನೆಯ ದಸರಾ ಕಾರ್ಯಕ್ರಮ ರೀತಿ ನಡೆಯುತ್ತದೆ ಎಂದು ಅನಿಸುತ್ತದೆ ನಾವು ಕೂಡಾ ಮುಂದೆ ಇಂತಹ ಕಾರ್ಯಕ್ರಮ ಮಾಡಬೇಕು ಎಂದು ಅನಿಸುತ್ತದೆ, ತಾಯಿಯೇ ಮೊದಲ ಗುರು ಮಕ್ಕಳ ಮುಂದೆ ತಂದೆ ತಾಯಿಗಳು ಕೆಟ್ಟ ಪದಗಳನ್ನು ಬಳಸಬೇಡಿ, ಮುಂದೆ ಅದೇ ಮಾತುಗಳನ್ನು ಮಕ್ಕಳ ಬಾಯಲ್ಲಿ ಬರುವಂತೆ ಮಾಡಬೇಡಿ ಎಂದು ಹೇಳುತ್ತಾ ಶಿಕ್ಷಕರೇ ಎರಡನೇ ಗುರು ಅವರು ಹಾಕಿಕೊಟ್ಟ, ಕಲಿಸಿಕೊಟ್ಟ ಶಿಕ್ಷಣ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆಯಿರಿ ಇಂಥ ಅದ್ಭುತವಾದ ಕಾರ್ಯಕ್ರಮ ಮಾಡಬೇಕಾದರೆ ಇದರ ಹಿಂದೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಮಾತ್ರ ಸಾಧ್ಯ ಇಂತಹ ಅದ್ಭುತ ಕಾರ್ಯಕ್ರಮವಾಗಲು ಶ್ರಮ ವಹಿಸಿದವರಿಗೆ ಧನ್ಯವಾದಗಳು. ಪ್ರತಿ ವರ್ಷವೂ ಈ ಶಾಲೆಯ ವಿದ್ಯಾರ್ಥಿಗಳು ಹತ್ತರಲ್ಲಿ ಮೂರು ವಿದ್ಯಾರ್ಥಿಗಳು ರಾಜ್ಯಮಟ್ಟ, ಜಿಲ್ಲಾ ಮಟ್ಟ, ತಾಲೂಕು ಮಟ್ಟಕ್ಕೆ ಆಯ್ಕೆಯಾಗುವುದು ಬಹಳ ಸಂತೋಷ, ಹೆಮ್ಮೆ ಪಡುವ ವಿಷಯ. ಕೆಲವೊಬ್ಬರು ಕಿಡಿಗೇಡಿಗಳು ಇಂಥ ಕಾರ್ಯಕ್ರಮಕ್ಕೆ ಅದು ಪರ್ಮಿಷನ್ ಇದೆಯಾ? ಅದು ಇದೆಯಾ? ಎನ್ನುವ ನೋವು ಕೊಟ್ಟದ್ದು ನಾವು ಅವರು ಅನುಭವಿಸಿದ್ದು ಸಾಕಾಗಿದೆ. ಪೂಜ್ಯರಿಂದ ವಿದ್ಯಾರ್ಥಿಗಳ ತಂದೆ ತಾಯಿಗಳ ಪಾದಪಾದ ಪೂಜೆಯನ್ನು ಮಾಡುವುದರ ಮುಖಾಂತರ ಈ ಸಂಸ್ಥೆ ಶಿಕ್ಷಣ ಜೊತೆಗೆ ಸಂಸ್ಕಾರ ಸಂಸ್ಕೃತಿ ಕಲಿಸಿಕೊಡುವ ಶಾಲೆ ಕರ್ನಾಟಕದ ತುಮಕೂರು ಸಿದ್ದಗಂಗಾ ಮಠವನ್ನು ಹೊರತುಪಡಿಸಿ ಇದು ಎರಡನೇ ಶಿಕ್ಷಣ ಸಂಸ್ಥೆ ನಮ್ಮ ಜಿಲ್ಲೆಯಲ್ಲಿ ಇದೆ, ಮಕ್ಕಳು ಗುರುಗಳು ಪಾಠವನ್ನು ಆಲಿಸಿ ಉತ್ತಮ ಅಂಕಗಳನ್ನು ಪಡೆಯುವ ಮುಖಾಂತರ ಈ ಶಾಲೆಗೆ ಹೆಚ್ಚಿನ ಕೀರ್ತಿ ಬರಲೆಂದು ಆಶಿಸುತ್ತಾ ಅತಿಥಿ ಭಾಷಣಕ್ಕೆ ವಿರಾಮ ಹೇಳಿದರು.
ಗೌರವಾನ್ವಿತ ಕ್ಷೇತ್ರ ಸಮನ್ವಧಿಕಾರಿಗಳಾದ ಮುದ್ದೇಬಿಹಾಳ ದಮ್ಮೂರು ಅವರು ಮಾತನಾಡಿ ಸಂಸ್ಥೆಗಳು ಸಕಾರಾತ್ಮಕ ಸಂಸ್ಥೆಗಳಾಗಬೇಕು ಈ ಸಂಸ್ಥೆಯನ್ನು 1996 ರಲ್ಲಿ ಒಂದು ಸಣ್ಣ ಕೋಣೆಯಲ್ಲಿ ಕಣ್ಣಾರೆ ಕಂಡದ್ದು, 1996,97,98ರಲ್ಲಿ ಅನೇಕ ಸಣ್ಣಪುಟ್ಟ ಸಮಸ್ಯೆಗಳು ಹುಟ್ಟಿಕೊಂಡವು ಆವಾಗ ಎಂ ಎಂ ಬಿರಾದಾರ್, ಎಂ ಎಂ ಮಕಾಂದರ್ ಮತ್ತು ಸಿದ್ದನಗೌಡ ಮಂಗಳೂರು ಅವರು ನಾವು ಒಂದೇ ದೋಣಿಯಲ್ಲಿ ಸಾಗಿದವರು. ಕಷ್ಟಕರ ಕಾಲದಲ್ಲಿ ಈ ಸಂಸ್ಥೆ ಹುಟ್ಟಿಕೊಂಡಿತು ಹಾಗೂ ಹೀಗೂ ವಿದ್ಯಾರ್ಥಿಗಳನ್ನು ಕೂಡಿಸುತ್ತಾ, ಕಲಿಸುತ್ತಾ ಇವತ್ತು ಇಷ್ಟು ಅದ್ಭುತವಾಗಿ ಬೆಳೆದು ನಿಂತಿದೆ ಇನ್ನೂ ಹೆಚ್ಚು ಕೀರ್ತಿ ಪತಾಕೆಯನ್ನು ಹಾರಿಸಲೆಂದು ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯಲೆಂದು ಆಶಿಸುತ್ತೇನೆ ಎಂದರು.
ವೇದಿಕೆ ಮೇಲೆ ಇದ್ದವರೆಲ್ಲರೂ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳಿದರು. ಇದೇ ಸಮಯದಲ್ಲಿ ಈ ಸಂಸ್ಥೆಯಲ್ಲಿ ಕಲಿತ ಟಾಪರ್ ವಿದ್ಯಾರ್ಥಿಗಳಲ್ಲಿ ಮೊದಲನೇ ಸ್ಥಾನ ಪಡೆದವರಿಗೆ ಒಂದು ವರ್ಷದ ಶುಲ್ಕವನ್ನು ಮರಳಿ ಕೊಡುತ್ತಾ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದವರಿಗೆ ವೇದಿಕೆಯ ಮೇಲೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್ಬಿ ನಡುವಿನಮನಿ ಅವರು ಅಧ್ಯಕ್ಷ ಭಾಷಣದಲ್ಲಿ ವಿದ್ಯಾರ್ಥಿಗಳಿಗೂ ಮತ್ತು ಪಾಲಕರಿಗೂ ಮತ್ತು ವೇದಿಕೆ ಮೇಲೆ ಇದ್ದವರಿಗೂ,ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಾಲಕರು, ಪತ್ರಿಕಾ ಮಾಧ್ಯಮದವರು, ಆರಕ್ಷಕ ಸಿಬ್ಬಂದಿ ಅವರಿಗೂ ನಮ್ಮ ಶಾಲೆಯ ಹೆಚ್ಚು ಕೀರ್ತಿ ಹೊಂದಲು ಸಹಕಾರ ನೀಡಬೇಕೆಂದು ಹೇಳಿ ತಮ್ಮ ಅಧ್ಯಕ್ಷ ಭಾಷಣಕ್ಕೆ ವಿದಾಯ ಹೇಳಿದರು.
ವರದಿ ಸಂಗಮೇಶ ಸಿ. ಚೌದ್ರಿ




















