ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೈಟೆಕ್ ಶೌಚಗೃಹ ನಿರ್ಮಿಸಿಕೊಡುವಂತೆ ಮಹಿಳೆಯರ ಆಗ್ರಹ

ಗಂಗಾವತಿ: ಚಿಕ್ಕಜಂತಕಲ್ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಹೈಟೆಕ್ ಶೌಚಾಗೃಹ ನಿರ್ಮಿಸುವಂತೆ ಆಗ್ರಹಿಸಿ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಕಂಪ್ಲಿ ತಾಲೂಕು ಘಟಕದ ನೇತೃತ್ವದಲ್ಲಿ ಮಹಿಳಾ ಮಣಿಗಳು ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯ ಪಿಡಿಒ ರವಿ ಕುಲಕರ್ಣಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಕಂಪ್ಲಿ ತಾಲೂಕು ಅಧ್ಯಕ್ಷ ಇ.ಧನಂಜಯ್ಯ ಮಾತನಾಡಿ, ಇಲ್ಲಿನ ಗ್ರಾಮದ ಹರಿಜನ ಕಾಲೋನಿಯಲ್ಲಿರುವ ಶೌಚಾಲಯಗಳು ಸಂಪೂರ್ಣವಾಗಿ ದುರಸ್ಥಿಗೆ ಒಳಪಟ್ಟಿದ್ದು, ಮಹಿಳೆಯರು ಶೌಚಾಗೃಹಕ್ಕೆ ತೆರಳುವುದು ತುಂಬ ತೊಂದರೆ ಉಂಟಾಗಿದೆ. ಇಲ್ಲಿನ ಅಕ್ಕಪಕ್ಕದಲ್ಲಿ ಗದ್ದೆಗಳು ಇದ್ದು, ಸಮರ್ಪಕವಾಗಿ ಶೌಚಗೃಹ ಇಲ್ಲದ ಪರಿಣಾಮ ಮಹಿಳೆಯರು ಗ್ರಾ.ಪಂ. ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಆದ್ದರಿಂದ ಇಲ್ಲಿನ ಮಹಿಳೆಯರ ಸಮಸ್ಯೆಯನ್ನು ಆಲಿಸಿ, ಕೂಡಲೇ ಅಧಿಕಾರಿಗಳು ಗಮನ ಹರಿಸಿ, ಹೈಟೆನ್ ಶೌಚಾಗೃಹ ನಿರ್ಮಿಸಿ ಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಸಂಘಟನೆ ಮೂಲಕ ಇಲ್ಲಿನ ಮಹಿಳೆಯರ ಸಹಕಾರದೊಂದಿಗೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವದೊಂದಿಗೆ ಮೇಲಿನ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಇಲ್ಲಿನ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಮನವಿ ಸ್ವೀಕರಿಸಿ ಪಿಡಿಒ ರವಿ ಕುಲಕರ್ಣಿ ಮಾತನಾಡಿ, ಚಿಕ್ಕಜಂತಕಲ್ ಗ್ರಾಮದ ಹರಿಜನ ಕಾಲೋನಿಯಲ್ಲಿರುವ ಶೌಚಾಗೃಹ ದುರಸ್ಥಿಗೆ ಒಳಪಟ್ಟಿರುವುದು ಈಗ ಗಮನಕ್ಕೆ ಬಂದಿದ್ದು, ತಾತ್ಕಾಲಿಕವಾಗಿ ತಟ್ಟಿಯ ಮೂಲಕ ಶೌಚಾಲಯ ನಿರ್ಮಿಸಿಡಲಾಗುವುದು. ಈಗಾಗಲೇ ಹೈಟೆಕ್ ಶೌಚಾಗೃಹಕ್ಕೆ ಮೇಲಿನ ಅಧಿಕಾರಿಗಳಿಗೆ ಪ್ರಾಸ್ತಾವನೆ ಸಲ್ಲಿಸಿದ್ದು, ಒಂದೆರಡು ತಿಂಗಳು ಅನುದಾನ ಮಂಜೂರಾಗುವ ಭರವಸೆ ಇದ್ದು, ಬಂದ ತಕ್ಷಣ ಶೌಚಾಗೃಹ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಪೇಂಟರ್ ನೀಲಪ್ಪ, ಮಹಿಳೆಯರಾದ ಚನ್ನಮಲ್ಲಮ್ಮ, ಶಿವಮ್ಮ, ದ್ಯಾವಮ್ಮ, ನೀಲಮ್ಮ, ಈರಮ್ಮ, ಹನುಮಮ್ಮ, ಹುಲಿಗೆಮ್ಮ, ತಿಪ್ಪಮ್ಮ, ಗಂಗಮ್ಮ, ಭೀಮಮ್ಮ ಸೇರಿದಂತೆ ಅನೇಕರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!