ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸುಂಠಾಣ ನೂತನ ಗುರುಭವನ ಲೋಕಾರ್ಪಣೆ ಹಾಗೂ ಮಹಾದಾಸೋಹಿ ಶ್ರೀ ಶರಣ ಬಸವೇಶ್ವರ ಪುರಾಣ ಉದ್ಘಾಟನೆ

ಕಾಳಗಿ : ಸೂಗೂರು ಗುರು ರುದ್ರಮುನೀಶ್ವರ ಹಿರೇಮಠ ಸುಂಠಾಣ ಶಾಖಾ ಮಠ, ನೂತನ ಗುರುಭವನ ಲೋಕಾರ್ಪಣೆ ಮಾಡಿ ದಿವ್ಯಸಾನಿಧ್ಯ ವಹಿಸಿ ಚಂದನಕೇರಾ ಶ್ರೀಗಳು ಮಾತನಾಡಿ ಜೀವನದಲ್ಲಿ ಗುರು ಏಕೆ ಅವಶ್ಯಕ ಗುರುವಿನ ಮಹತ್ವ ಚಿಕ್ಕ ಇರುವೆ ಹರಿದ್ವಾರದಿಂದ ಋಷಿಕೇಶಕ್ಕೆ ಪಯಣಿಸಬೇಕಾದರೆ ಸುಮಾರು 3-4 ಜನ್ಮಗಳನ್ನಾದರೂ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಹರಿದ್ವಾರಕ್ಕೆ ಹೋಗುವವರ ವಸ್ತ್ರದ ಮೇಲೆ ಈ ಇರುವೆ ಹತ್ತಿದರೆ3-4ಗಂಟೆಗಳಲ್ಲಿ ಸುಲಭವಾಗಿ ಋಷಿ ಕೇಶಕ್ಕೆ ತಲುಪುತ್ತದೆ ಹಾಗೆಯೇ ನಿಮ್ಮ ಸ್ವಂತ ಪ್ರಯತ್ನದಿಂದ ಈ ಭವಸಾಗರನ್ನು ದಾಟುವದು ಎಷ್ಟು ಕಷ್ಟ ಇದು ಅನೇಕ ಜನ್ಮ ತೆಗೆದುಕೊಳ್ಳಬಹುದು. ಇದರ ಬದಲು ಗುರುವಿನ ಕೈ ಹಿಡಿದು ಭಕ್ತಿಯಿಂದ ಅವರು ತೋರಿದ ಮಾರ್ಗದಲ್ಲಿ ಸಾಗಿದರೆ ಅವರು ನಿಮ್ಮನ್ನು ಸುಲಭವಾಗಿ ಈ ಭವಸಾಗರವನ್ನು ದಾಟಿಸಬಹುದು ಎಂದು ನುಡಿದರು.
ಪ್ರತಿದಿನ ಸಾಯಂಕಾಲ 7:00 ಗಂಟೆಗೆ ಪುರಾಣ ಮತ್ತು ಅನ್ನದಾಸೋಹ ಇರುತ್ತದೆ. ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಕಟ್ಟಿಮಠ ಚಂದನಕೇರಾ, ಶ್ರೀಗಳು ವಹಿಸಿ ಆಶೀರ್ವದಿಸಿದರು.

ಡಾ. ಶಾಂತವೀರ ಶಿವಾಚಾರ್ಯರು ಗಡಿಗೌಡಗಾಂವ
ಪುರಾಣನುಡಿಗಳನ್ನಾಡಿದರು.
ಸಾನಿಧ್ಯ, ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಗುಂಡೆಪಲ್ಲಿ,
ನೇತೃತ್ವ ಪೂಜ್ಯಶ್ರೀ ಡಾ. ಚನ್ನರುದ್ರಮನಿ ಶಿವಾಚಾರ್ಯರು ಸೂಗೂರು ಶಾಖಾ ಮಠ ಸುಂಠಾಣ, ಮತ್ತು ಪೂಜ್ಯಶ್ರೀ ನೀಲಕಂಠ ದೇವರು ವಿರಕ್ತ ಮಠ ರಟಕಲ್ ಜ್ಯೋತಿ ಬೆಳಗಿಸಿ ಮಾತನಾಡಿದರು.

ಮಲ್ಲಿನಾಥ ಕೋಲ್ಕುಂದಿ ಉದ್ಯಮಿಗಳು, ಮಲ್ಲಿಕಾರ್ಜುನ ಮರ್ತೂರ ಉದ್ಯಮಿದಾರರು, ಸಂತೋಷ ಪಾಟೀಲ್ ಉದ್ಯಮಿದಾರರು,
ವೀರಣ್ಣ ಗಂಗಾಣಿ ರೈತ ಮುಖಂಡರು,
ಶ್ರೀಮತಿ ಗೀತಾ ಸುಂಠಾಣ ಅಧ್ಯಕ್ಷರು ಗ್ರಾಮ, ಪಂಚಾಯತಿ.

ಕಾರ್ಯಕ್ರಮದ ಪೂರ್ವದಲ್ಲಿ ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಜ್ಯೋತಿ ತೆಗೆದುಕೊಂಡು, ಕಾರ್ ಮತ್ತು ಬೈಕ್ ರ್ರ್ಯಾಲಿ ಚಾಲನೆ ನೀಡಲಾಯಿತು.
ರಾಜೇಶ ಗುತ್ತೇದಾರ ಮಾಜಿ ಜಿ, ಪಂ, ಸದಸ್ಯರು, ರೇವಣಸಿದ್ದಪ್ಪ ಮಾಸ್ತರ ಚಿಂಚೋಳಿ, ಬಸವರಾಜ ಪಾಟೀಲ್ ಹೇರೂರ.
ನಂತರ ಸಂಠಾಣ ಗ್ರಾಮದ ಪ್ರಮುಖ ಬೀದಿಯಲ್ಲಿ ಬಾಜಾ ಭಜಂತ್ರಿ ಕಳಸ ಆರತಿ ಮತ್ತು ಭಜನೆಯೊಂದಿಗೆ ಶ್ರೀ ಮಠಕ್ಕೆ “ಜ್ಯೋತಿಯೊಂದಿಗೆ ಪೂಜ್ಯರನ್ನು ಬರಮಾಡಿಕೊಂಡ ಗ್ರಾಮದ ಮಹಿಳೆಯರು ಭಕ್ತಾದಿಗಳು.

ಪೂಜ್ಯರ ತುಲಾಭಾರ ಸೇವೆಗೈದ ಕುಟುಂಬಸ್ಥರು

ಮಯೂರ ಶ್ರೀ ಹುಂಡೇಕರಿ ಮು, ಸೋಲಾಪುರ,
ಶ್ರೀ ಶಿವಕುಮಾರ ಪೂಚಾಲಿ ಚಿಂಚೋಳಿ,
ಶ್ರೀಮತಿ ಭಾಗ್ಯ ಜ್ಯೋತಿ ಶಿವಕುಮಾರ ಲಾಡ ಚಿಂಚೋಳಿ.

ಜಗನ್ನಾಥ ಸೇರಿಕಾರ ಪತ್ರಕರ್ತರು ನಿರೂಪಿಸಿದರು, ರಾಜು ಪಾಟೀಲ್ ಸ್ವಾಗತಿಸಿ ವಂದಿಸಿದರು.

ವರದಿ ಎಸ್ ವಿ ಗಂಗಾಣಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!