ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಫೆಬ್ರವರಿ 8 ಮತ್ತು 9, 2026 ರಂದು 8ನೇ ವರ್ಷದ ವಾಲ್ಮೀಕಿ ಜಾತ್ರಾಯ ಯಶಸ್ಸಿಗೆ ಜನ ಸಹಭಾಗಿತ್ವ ಹೆಚ್ಚಿಸಲು ತಾಲೂಕಿನ ವಾಲ್ಮೀಕಿ ಸಮುದಾಯ ಮುಖಂಡರು ಹಾಗೂ ಹರಪ್ಪನಹಳ್ಳಿಯ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಮಠದ ಪ್ರತಿನಿಧಿ ಹನುಮಂತರಾಜು ನೇತೃತ್ವದಲ್ಲಿ ಜಾತ್ರೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
ಶತಮಾನಗಳಿಂದ ಶೋಷಣೆ ದೌರ್ಜನಕ್ಕೆ ಒಳಗಾದ ಸಮುದಾಯಗಳ ಜಾಗೃತಿಗಾಗಿ ವಾಲ್ಮೀಕಿ ಜಾತ್ರೆ ಸಾಕ್ಷಿಯಾಗುತ್ತದೆ ಎಂದು ತಾಲೂಕಿನ ಮಠದ ಪ್ರತಿನಿಧಿ ಹನುಮಂತರಾಜು ಮಾತನಾಡಿ ಹರಿಹರದಲ್ಲಿ ಫೆ. 8 & 9 ರಂದು ನಡೆಯುವ ಎಂಟನೇ ವರ್ಷದ ವಾಲ್ಮೀಕಿ ಜಾತ್ರೆಯು ಸಾಂಪ್ರದಾಯಿಕವಾಗಿರದೆ ಜನಜಾಗೃತಿ ಮೂಡಿಸುವ ಜೊತೆಗೆ ವೈಚಾರಿಕ ಜಾತ್ರೆ ಇದಾಗಿದೆ.
ಮಠದ 27ನೇ ವರ್ಷದ ವಾರ್ಷಿಕೋತ್ಸವ ಮತ್ತು ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿಗಳ 17ನೇ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ವೈಚಾರಿಕ ಆಶಯಗಳನ್ನು ಜನರಿಗೆ ತಿಳಿಸುವುದರ ಜೊತೆ ತಾಲೂಕಿನ ಹೋಬಳಿ ಮಟ್ಟದ ನಮ್ಮ ಸಮುದಾಯದವರನ್ನು ಜಾತ್ರೆಗೆ ಕರೆ ತರುವುದು ಈ ಸಮಯ ಉದ್ದೇಶ ಎಂದರು.
ಸಂದರ್ಭದಲ್ಲಿ ತಾಲೂಕಿನ ಹಿರಿಯ ಸಮುದಾಯ ಮುಖಂಡರು ಕೋಟೆ ಸಿದ್ದಪ್ಪ, ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕರಾದ ರಂಗರಾಜು, ಪಟ್ಟಣ ಪಂಚಾಯತಿಯ ಮಾಜಿ ಸದಸ್ಯರು ಓಬಳರಾಜು. ಮಾಜಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಕೆ ವಿ. ಮಂಜುನಾಥ್. ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್. ಲಕ್ಷ್ಮಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. ತಾ.ಮಹಿಳಾ ಮುಖಂಡರು ಕವಿತಾ. ಕಾಟಣ್ಣ ಪಾತಗಾನಹಳ್ಳಿ ಪಂಚಾಯಿತಿ ಅಧ್ಯಕ್ಷರು. ಕೃಷ್ಣಮೂರ್ತಿ, ಗಿರೀಶ್, ಗೋವಿಂದರಾಜಯ್ಯ, ನಾಗರಾಜ್ ಜಯರಾಮ್ ಮಧು ಮಠದ ಪ್ರತಿನಿಧಿ ಹನುಮಂತರಾಜು. ಭರತ್ ಸಾಮಾಜಿಕ ಕಾರ್ಯಕರ್ತ ಮುಂತಾದವರು ಉಪಸ್ಥಿತರಿದ್ದರು.
” ಈ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಾಗದೆ ಸಮುದಾಯದಲ್ಲಿ ವೈಚಾರಿಕತೆ ಸಾಮಾಜಿಕ ಪ್ರಗತಿ ಜಾಗೃತಿ ಮತ್ತು ಜನಸಹಭಾಗಿತ್ವವನ್ನು ತ್ಯಜಿಸುವ ಗುರಿಯನ್ನು ಹೊಂದಿದೆ ಆದ್ದರಿಂದ ತಾಲೂಕಿನಿಂದ ಪ್ರತಿಯೊಬ್ಬ ಸಮುದಾಯದ ಮುಖಂಡರು ಜಾತ್ರೆಗೆ ಸಹಭಾಗಿತ್ವದ ಮನೋಭಾವದ ಜೊತೆ ಜನ ಸಮೂಹವನ್ನು ಜಾತ್ರೆಗೆ ಕರೆ ತರುವಂತೆ ಕಾರ್ಯದಲ್ಲಿ ತೊಡಗಬೇಕು ” .
- ಓಬಳರಾಜು. ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ. ಕೊರಟಗೆರೆ.
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯು ನಡೆಯುತ್ತಿದ್ದು. ಈ ಜಾತ್ರೆಗೆ ತಾಲೂಕಿನಿಂದ ಹೆಚ್ಚು ಜನ ಪಾಲ್ಗೊಳ್ಳಬೇಕು ಜೊತೆಗೆ ಹರಪನಹಳ್ಳಿಯ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಮಠಕ್ಕೆ ಒಂದು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ನಮ್ಮ ಸಮುದಾಯದ ಮುಖಂಡರು ಒತ್ತು ಕೊಡಬೇಕು.
ಈ ಮೂಲಕ ನಮ್ಮ ವಾಲ್ಮೀಕಿ ಸಮುದಾಯವನ್ನು ಶೈಕ್ಷಣಿಕವಾಗಿ ಪ್ರಗತಿಗೆ ತರಲು ಸಹಾಯ ಆಗುತ್ತದೆ.

- ರಂಗರಾಜು. ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕರು. ತುಮಕೂರು.
ವರದಿ : ಪ್ರಸನ್ನಕುಮಾರ್. ಎಸ್. ಕೊರಟಗೆರೆ




















