ಬೆಂಗಳೂರು: ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಂಗೀಕೃತವಾದ ಮತ್ತು ರಾಷ್ಟ್ರಪತಿಗಳ ಅಂಕಿತ ಪಡೆದ ವಿಕಸಿತಭಾರತಉದ್ಯೋಗಖಾತ್ರಿ ಮತ್ತು ಅಜೀವಿತಮಿಷನ್ ( ಗ್ರಾಮೀಣ )ಕಾಯ್ದೆ -(VB-G- RAM- G) ಕಾಯ್ದೆಯನ್ನು ರಾಜ್ಯಪಾಲರ ಬಾಯಿಯಿಂದ ಖಂಡಿಸಲು ಹೊರಟಿದ್ದ ರಾಜ್ಯದ ಕಾಂಗ್ರೆಸ್ ಪಕ್ಷದ ಪ್ರಯತ್ನ ಕುರಿತು ವಿಧಾನಸಭೆಯಲ್ಲಿ ಬೆಂಗಳೂರು ರಾಜಾಜಿನಗರ ವಿಧಾನಸಭಾ ಶಾಸಕ ಶ್ರೀ ಎಸ್ ಸುರೇಶ್ ಕುಮಾರ್ ಅವರು ಕೆಲವು ಮಾತುಗಳನ್ನು ಈ ಬಗ್ಗೆ ವಿಸ್ತಾರವಾಗಿ ದಾಖಲೆಗಳ ಮೂಲಕ ಮಂಡಿಸಿ ಸಭೆಯ ಗಮನ ಸೆಳೆದರು.
ರಾಷ್ಟ್ರಪತಿಗಳಿಂದಲೇ ನೇಮಕಗೊಂಡ ರಾಜ್ಯಪಾಲರು ರಾಷ್ಟ್ರಪತಿ ಅಂಕಿತ ಪಡೆದ ವಿಧೇಯಕದ ವಿರುದ್ಧ ಮಾತನಾಡುವಂತೆ ಅವರ ಭಾಷಣ ಸಿದ್ಧಗೊಳಿಸಿದ ಸರ್ಕಾರದ ಹುನ್ನಾರ ಕುರಿತು ಅವರು ಮಾತುಗಳಿಂದಲೇ ಸರಕಾರವನ್ನು ಚುಚ್ಚಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್.




















