ಬಳ್ಳಾರಿ / ಕಂಪ್ಲಿ : ತಾಲೂಕಿನ ಸುಗ್ಗೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಶ್ರೀ ರಾಮರಂಗಪುರ ಗ್ರಾಮದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆ ಮೂಲಕ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಿ ಜೊತೆಗೆ ಸಂಘಟನೆ ಬಲ ಪಡಿಸಲು ಮುಂದಾಗಬೇಕು ಎಂದರು.
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಶ್ರೀರಾಮರಂಗಪುರದ ಗ್ರಾಮ ಘಟಕ ಅಧ್ಯಕ್ಷರಾಗಿ ಮೋಹನ್ ರಾಜ್ ಗೌರವ ಅಧ್ಯಕ್ಷರಾಗಿ ಸತ್ಯನಾರಾಯಣ ವೀರಾಂಜಿನೇಯಲು ಉಪಾಧ್ಯಕ್ಷರಾಗಿ ಶ್ರೀನಿವಾಸ ಎರ್ರೀಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ ಸಣ್ಣ ವೀರೇಶ ಸಂಘಟನಾ ಕಾರ್ಯದರ್ಶಿಯಾಗಿ ನವೀನ್ಕುಮಾರ್, ಪದಾಧಿಕಾರಿಗಳಾಗಿ ಆಶೋಕ್ ಪವನ್ಕುಮಾರ್ ಗಂಗಾಧರ್ ಗುರುಪ್ರಸಾದ್ ಸದಸ್ಯರಾದ ಶ್ರೀಕಾಂತ ಸುರೇಶ ಶಿವಶಂಕರ್ ತರುಣ್ ಬಸವ ಶಾಂತರಾಜ್ ರಂಗಸ್ವಾಮಿ ಗೋಪಿ ಅಶೋಕ್ ಮಂಜು, ಶೇಕ್ಷಾವಲಿ, ಓಬಳೇಶ ನಾಗರಾಜ, ನಾಗೇಂದ್ರ, ಉದಯಕುಮಾರ, ರಾಜೇಂದ್ರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಓಬಳೇಶ, ಸಂಘಟನಾ ಕಾರ್ಯದರ್ಶಿ ರಾಕೇಶ್ ವೀರಾಂಜಿನೇಯಲು ಗೌರವ ಅಧ್ಯಕ್ಷ ಜಯಣ್ಣ ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















