ಹಾವೇರಿ : ಶಿಗ್ಗಾವ್ ತಾಲೂಕು, ಹೊಸೂರು ಗ್ರಾಮದ ಗಾಡಿಕೇರಿ ಓಣಿ ಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಅಂಗವಾಗಿ LKG ಹಾಗೂ UKG ತರಗತಿಗಳನ್ನು ಜ್ಯೋತಿ ಬೆಳಗುವ ಮುಖಾಂತರ ಶುಭಾರಂಭ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ಯಾಮವ್ವ ಯ. ಹೊಸಮನಿ ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಶ್ರೀಯುತ ನೀಲಪ್ಪ ಕೋ. ಬಾರಕೇರ, ಶ್ರೀಮತಿ ಸುಶೀಲಾ ಚ. ಹಿರೇಮಠ್, ಶ್ರೀ ಶೇಖಪ್ಪ ಡಿ. ಮಾದರ, ಶ್ರೀ ಸಮೀರ್ ಖಾನ್ ಮುಲ್ಲಾನವರ್, ಶ್ರೀ ಪ್ರಶಾಂತ ರಾ. ವಾಲೆಕಾರ್ ಹಾಗೂ ಶ್ರೀಮತಿ ಲೀಲಾವತಿ ಶಂ. ಮ್ಯಾಗೇರಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಸೈರಿನಬಾನು ಮುಲ್ಲಾನವರ್ ಹಾಗೂ ಶ್ರೀಮತಿ ತಾಂಗವ್ವ ಅ ಬಸಾಪುರ (ಛಬ್ಬಿ) ಅವರು ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆ, ಪೂರ್ವ ಪ್ರಾಥಮಿಕ ಶಿಕ್ಷಣದ ಮಹತ್ವ ಮತ್ತು ಮಕ್ಕಳ ಚಟುವಟಿಕೆಗಳ ಕುರಿತು ಸಮರ್ಪಕವಾಗಿ ಪ್ರಸ್ತಾವನೆ ಮಾಡಿ ವಿವರಿಸಿದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಪಿ.ಆರ್. ಕಬ್ಬಣ್ಣವರ ಅವರು ಅಭಿನಂದಿಸಿದರು.
👉 ಶಿಕ್ಷಕಿ ಪಿ. ಆರ್. ಕಬ್ಬಣ್ಣವರ ಅವರು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ, ಮಮಕಾರದಿಂದ ಹಾಗೂ ತಾಯಿಯಂತೆ ಕಾಳಜಿಯಿಂದ ನೋಡಿಕೊಳ್ಳುತ್ತಿರುವುದು ಎಲ್ಲರ ಮನಸ್ಸಿಗೆ ಸ್ಪರ್ಶಿಸಿತು. ಮಕ್ಕಳ ಶೈಕ್ಷಣಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅವರ ಸೇವೆ ಮಾದರಿಯಾಗಿದೆ ಎಂಬುದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ ಬಸವರಾಜ ಎಸ್. ಎನ್.




















