
ಬಳ್ಳಾರಿ / ಕಂಪ್ಲಿ : ಬಳ್ಳಾರಿ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಕಂಪ್ಲಿ ನಡುವೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಸೇತುವೆಗಾಗಿ ಮಣ್ಣಿನ ಪರೀಕ್ಷೆ (Soil Testing) ಪ್ರಕ್ರಿಯೆಯು ಪ್ರಾರಂಭಿಸಲಾಗಿದೆ.
ಸೇತುವೆಯ ಅನಿವಾರ್ಯತೆ: ಈಗಿರುವ ಹಳೆಯ ಸೇತುವೆಯು ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ಗಿಂತ ಹೆಚ್ಚಿನ ನೀರು ಬಿಟ್ಟಾಗಲೆಲ್ಲ ಮುಳುಗಡೆಯಾಗುತ್ತದೆ. ಇದರಿಂದಾಗಿ ಈ ಭಾಗದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿತ್ತು.
ಯೋಜನೆಯ ವೆಚ್ಚ: ನೂತನ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಾಜು ₹110 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಲಾಗಿದೆ.
ನೂತನ ಸೇತುವೆಗೆ ನಿರ್ಮಾಣಕ್ಕೆ ಬೇಕಾದ ಡಿಪಿಆರ್ (DPR) ಸಿದ್ಧಪಡಿಸುವ ಪ್ರಕ್ರಿಯೆಯ ಭಾಗವಾಗಿ ಮಣ್ಣಿನ ಪರೀಕ್ಷೆ ಮತ್ತು ಸರ್ವೆ ಕಾರ್ಯಗಳನ್ನು ನಡೆಸಲು ಪ್ರಾರಂಭಿಸಲಾಗಿದೆ.
ನಿರ್ಮಾಣದ ಉದ್ದೇಶ: ಹೊಸ ಸೇತುವೆಯನ್ನು ಹಳೆಯದಕ್ಕಿಂತ ಎತ್ತರದಲ್ಲಿ ಸುಮಾರು 42 ಅಡಿ ಎತ್ತರ ನಿರ್ಮಿಸಲು ಯೋಜಿಸಲಾಗಿದೆ, ಇದರಿಂದ ಮಳೆಗಾಲದಲ್ಲಿ ಸಂಚಾರ ಸ್ಥಗಿತಗೊಳ್ಳುವುದನ್ನು ತಪ್ಪಿಸಬಹುದು.
ಟೆಂಡರ್ ಪ್ರಕ್ರಿಯೆ: ಈ ಯೋಜನೆಯ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
ಸ್ಥಳೀಯ ಶಾಸಕರಾದ ಜೆ. ಎನ್. ಗಣೇಶರವರು ಈ ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲು ಸರ್ಕಾರದ ಮೇಲಿಂದ ಮೇಲೆ ಒತ್ತಡದಿಂದ ಕ್ಷೇತ್ರದ ಜನರ ಬಹುದಿನಗಳ ಕನಸು ಈಡೇರಿದಂತಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















