ಬಳ್ಳಾರಿ / ಕಂಪ್ಲಿ : ಈಗಿನ 5ಜಿ ಜನರೇಷನ್‌ನಲ್ಲಿ ಎಲ್ಲ ಸೌಕರ್ಯಗಳಿದ್ದರೂ ಶಾಂತಿ, ಸಮಾಧಾನಗಳಿಲ್ಲ ಎಂದು ಜೈನ ಸಂತ ಮುಕ್ತಿಪ್ರಭ ಸಾಗರ ಶ್ರೀಗಳು ಹೇಳಿದರು.
ಫೆ.3ರಂದು ಪಟ್ಟಣದ ಶ್ರೀ ಮುನಿಸುವ್ರತ್‌ಸ್ವಾಮಿ ಮಂದಿರದಿಂದ ಪಾರ್ಶ್ವಮಣಿ ದೇವಸ್ಥಾನದಿಂದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಪೆದ್ದತುಂಬಲ್‌ತನಕ ನಡೆವ ಪಾದಯಾತ್ರೆ ಪ್ರಯುಕ್ತ ಪಟ್ಟಣದಲ್ಲಿ ಜೈನ ಸಂತರ ಮೆರವಣಿಗೆಯಲ್ಲಿ ಮಾತನಾಡಿದರು.
ಅಹಿಂಸಾಮಯ, ಒತ್ತಡ ರಹಿತ ಜೀವನ ಸಾಗಿಸಲು ದೇವರು, ಗುರುಗಳ ಮೇಲೆ ಭಕ್ತಿ, ನಂಬಿಕೆ ಅಗತ್ಯ. ಪರೋಪಕಾರ ಜೀವನ ಸಾಗಿಸುವಂತೆ ಪ್ರೇರೇಪಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಜೈನ ಗುರುಗಳಾದ ಮನಿಪ್ರಭಾ ಸಾಗರಶ್ರೀ, ಸುಲೋಚನಾಶ್ರೀ, ಸುಲಕ್ಷಣಾಶ್ರೀ ಸೇರಿದಂತೆ 28ಜನ ಜೈನ ಸಂತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪೆದ್ದತುಂಬಲ್ ಸ್ಥಳದ ಐತಿಹಾಸಿಕ ಮಹತ್ವ : ಈ ಗ್ರಾಮವು ಪ್ರಾಚೀನ ಜೈನ ಧರ್ಮದ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಇಲ್ಲಿ ಜೈನ ತೀರ್ಥಂಕರರ ವಿಗ್ರಹಗಳು ಮತ್ತು ಹಳೆಯ ಜೈನ ದೇವಾಲಯಗಳ ಅವಶೇಷಗಳನ್ನು ಕಾಣಬಹುದು.
ಜೈನ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಕಾರ್ಯದರ್ಶಿ ಪಾರಸ್‌ಮಲ್ ಹುಂಡಿಯಾ, ಪ್ರಮುಖರಾದ ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಫತೇಕುಮಾರ್ ಭಾಷ್ಣ, ಕಲಾಪೊರ್ಣ ಯುವಕ ಮಂಡಲ, ಪದ್ಮಾವತಿ ಬಹು ಮಂಡಲ, ನೌಕಾರ್ ಮಾಲೀಕ ಮಂಡಲ್ ಇತರರಿದ್ದರು. ಮುನಿಸುವ್ರತ್ ಸ್ವಾಮಿ ಮಂದಿರದಲ್ಲಿ ಭಜನೆ ಹಾಗೂ ಜೈನ ಸಂಪ್ರದಾಯದ ವಿವಿಧ ಕಾರ್ಯಕ್ರಮಗಳು ನಡೆದವು.
ವರದಿ : ಜಿಲಾನಸಾಬ್ ಬಡಿಗೇರ್



















