ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀಶೈಲ ಪಾದಯಾತ್ರಿಗಳಿಗೆ ಸಿಹಿ ಸುದ್ದಿ

ಆಂಧ್ರ ಪ್ರದೇಶ : ನಾಗಾರ್ಜುನಸಾಗರ ಶ್ರೀಶೈಲಂ ಟೈಗರ್ ರಿಸರ್ವ್ ವ್ಯಾಪ್ತಿಯಲ್ಲಿರುವ ಪ್ರೊಜೆಕ್ಟ್ ಟೈಗರ್ ಡಿವಿಷನ್ ಆತ್ಮಕುರು ಪ್ರದೇಶದಲ್ಲಿ (ನಲ್ಲ ಮಲ್ಲ)ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಶ್ರೀಶೈಲ ಪಾದಯಾತ್ರಿಗಳಿಗೆ ಅರಣ್ಯದಲ್ಲಿ ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಲಾಗಿತ್ತು ಭಾರತದ ಎಲ್ಲಾ ಹುಲಿಗಳ ಕಾಯ್ದಿಟ್ಟ ಅರಣ್ಯದಲ್ಲಿ ಪ್ರತಿ ನಾಲ್ಕು ವರ್ಷಕ್ಕೆ ಒಂದು ಬಾರಿ ಅಖಿಲ ಭಾರತ ಹುಲಿಗಣನೆ ಕಾರ್ಯಕ್ರಮವನ್ನು 2026 ಹುಲಿಗಳ ಸಂಖ್ಯೆಯನ್ನು ತಿಳಿಯಲು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕಾರ್ಯರೂಪ ಕೈಗೊಂಡಿದ್ದು ಫೇಸ್ ತ್ರೀ ಕ್ಯಾಮೆರಾ, ಟ್ರ್ಯಾಪ್ ಗಳ ಮೂಲಕ ಹುಲಿಗಣತಿಯನ್ನು ವೆಂಕಟಾಪುರಮ್, ಪಚ್ಚೇರೂ, ನಾಗಲೂಟಿ, ಮಾರ್ಗವಾಗಿ ಹಠಕೇಶ್ವರವರೆಗೆ ಸುಮಾರು ಐವತ್ತು ಕಿಲೋ ಮೀಟರ್ ಹೊರಗಿನ ಪಾದಯಾತ್ರೆ ಮಹಾಶಿವರಾತ್ರಿ ಹಬ್ಬದ ದಿನಗಳನ್ನು ಗಮನದಲ್ಲಿಟ್ಟುಕೊಂಡು ದಿನಾಂಕ 08/02/2026 ಮುಂಜಾನೆ ನಾಲ್ಕು ಗಂಟೆಯಿಂದ 15/02/2026 ಮಧ್ಯರಾತ್ರಿವರೆಗೆ ಮೇಲಿನ ಮಾರ್ಗದ ಮೂಲಕ ಪಾದಯಾತ್ರೆ ನಡೆಸಲು ಭಕ್ತರಿಗೆ ಅನುಮತಿ ನೀಡಲಾಗಿದೆ ಅಧಿಕಾರಿಗಳು ಕರ್ನಾಟಕ ಶ್ರೀಶೈಲ ಪಾದಯಾತ್ರೆಗಳ ಮೇಲೆ ಇರುವ ಕಾಳಜಿಯ ಉದ್ದೇಶದಿಂದ ಅರಣ್ಯ ಅಧಿಕಾರಿಗಳಾದ ವಿಜ್ಞೇಶ್ IFS ಅವರು ಹಾಗೂ ಸಿಬ್ಬಂದಿಯಾದ ಜಾಕಿರ್ ಹುಸೇನ್ DRO ಅವರು ಕರುನಾಡ ಕಂದ ಪತ್ರಿಕೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿಷಯ ಅಧಿಕೃತವಾಗಿರುವುದರಿಂದ ಕರ್ನಾಟಕದ ಎಲ್ಲಾ ಶ್ರೀಶೈಲ ಪಾದಯಾತ್ರಿಗಳಿಗೆ ಇದು ಒಂದು ಸಂತಸದ ವಿಷಯವಾಗಿರುವುದರಿಂದ ಶ್ರೀಶೈಲ ಪಾದಯಾತ್ರಿಗಳು ಸ್ವಚ್ಛವಾಗಿ ಪ್ಲಾಸ್ಟಿಕ್ ಮುಕ್ತವಾಗಿ ಯಾವುದೇ ಅರಣ್ಯದಲ್ಲಿ ಬೆಂಕಿ ಹಚ್ಚುವಂಥದಾಗಲಿ, ಅಡುಗೆ ಮಾಡುವಂತದಾಗಲಿ, ಮದ್ಯಪಾನ, ಗುಟಕಾ, ಮಾಂಸ ಸೇವನೆ, ಬೀಡಿ, ಸಿಗರೇಟ್ ಹಚ್ಚುವುದು, ಕುಡಿಯುವ ನೀರಿನ ಬಾಟಲಿಯನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ ಇದು ಅರಣ್ಯ ಅಧಿಕಾರಿಗಳ ಕ್ರಮವಿರುತ್ತದೆ ಮುಂಬರುವ ಪಾದಯಾತ್ರೆಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಆಂಧ್ರದ ಅರಣ್ಯ ಅಧಿಕಾರಿಗಳಲ್ಲಿ ವಿನಂತಿ.

ವರದಿ ವಿಜಯಮಹಾಂತೇಶ ಬಳಿಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!