ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಉಪ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳದ ಮೊರಾರ್ಜಿ ವಸತಿ ಶಾಲೆಯಲ್ಲಿ. 6 ಹಾಗೂ 7ನೇ ತರಗತಿ ಶಾಲಾ ಮಕ್ಕಳಿಂದ ಶಾಲಾ ಕೊಠಡಿಗಳ ಕಸಗೂಡಿಸಲಿಕ್ಕೆ ಹಚ್ಚಿದ್ದಾರೆ. ಹಾಗೂ ಚಿಕ್ಕ ಮಕ್ಕಳಿಂದ ಶಾಲೆಗೆ ಬಂದ ಗೂಡ್ಸ್ ವಾಹನದಲ್ಲಿದ್ದ ಬೆಡ್, ಮಂಚಗಳನ್ನು ರೂಮ್ ಗಳಿಗೆ ಸಾಗಿಸುವ ಕೆಲಸವನ್ನು ಶಾಲಾ ಮಕ್ಕಳ ಕೈಯಿಂದ ಮಾಡಸಿದ್ದಾರೆ. ಶಾಲೆಯಲ್ಲಿರುವ ಶೌಚಾಲಯಗಳ ಸ್ವಚ್ಛತೆಯನ್ನು ಕೂಡ ಮಕ್ಕಳ ಕೈಯಿಂದ ಮಾಡಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಘದ ಪ್ರಕಾರ ಒಂದು ಕ್ಲಾಸಿಗೆ 50 ವಿದ್ಯಾರ್ಥಿಗಳನ್ನು ಮಾತ್ರ ತುಂಬಿಕೊಳ್ಳಬೇಕು.
ಆದರೆ ಇವರು ಸರ್ಕಾರದ ನಿಯಮ ಮೀರಿ 54 ವಿದ್ಯಾರ್ಥಿಗಳನ್ನು ತುಂಬಿದ್ದಾರೆ ಇದಕ್ಕೆ ನೇರ ಹೊಣೆ ಬಂಥನಾಳ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾಗಿರುತ್ತಾರೆ. ಮಹೇಶ ಪೊದ್ದಾರ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರಿಗೆ ದೂರು ಅರ್ಜಿ ಸಲ್ಲಿಸಿದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಹೀಗಾಗಿ ತಾವು ಪರಿಶೀಲನೆ ನಡೆಸಿ ಉಪ ನಿರ್ದೇಶಕರ ಮೇಲೆ ಸೂಕ್ತ ಕ್ರಮ ಕೈಗೊಂಡು ಬಂಥನಾಳ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲರ ಮೇಲೆ ಸೂಕ್ತ ಕ್ರಮ ಕೈಗೊಂಡು ಅಮಾನತ್ತು ಅಥವಾ ವರ್ಗಾವಣೆ ಮಾಡಬೇಕೆಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಕರ್ನಾಟಕ ಸರ್ಕಾರ ನಿರ್ದೇಶಕರು
ಶ್ರೀ ಕಾಂತರಾಜು ಪಿ. ಎಸ್ ಭಾ.ಆ.ಸೇ ಇವರು ಇತ್ತ ಕಡೆ ಸ್ವಲ್ಪ ಗಮನಹರಿಸಬೇಕೆಂದು ಇಂಡಿ ತಾಲೂಕು ಡಿಎಸ್ಎಸ್ ಸಂಚಾಲಕರಾದ ಶಿವಾನಂದ ರಾಮಪ್ಪ ಸಿಂಗೆ ಅವರು ಆಗ್ರಹಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















