ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೈಲಾರ ಕಾರ್ಣಿಕ 2026: ಸಂಪಾಯಿತಲೇ ಪರಾಕ್..!

ಹಾವೇರಿ : ರಾಜ್ಯದಲ್ಲಿಯೇ ಹೆಸರುವಾಸಿಯಾದ ಜಾತ್ರೆ ಅಂದರೆ ಅದು ಮೈಲಾರಲಿಂಗಶ್ವರ ಜಾತ್ರೆ ವಿಶೇಷವಾಗಿ ಸಾವಿರಾರು ಭಕ್ತರ ಮಧ್ಯೆ ನುಡಿಯುವ ಭವಿಷ್ಯವಾಣಿಗಳು ನಿಜವಾಗುತ್ತವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ರಾಜ್ಯಾದ್ಯಂತ ಭಕ್ತರು ಈ ಕ್ಷಣಕ್ಕಾಗಿ ಕಾತರದಿಂದ ಕಾದು ಕುಳಿತಿರುತ್ತಾರೆ. ಅದರಂತೆಯೇ ಇದೀಗ ಗೊರವಪ್ಪ ಭವಿಷ್ಯವಾಣಿ ನುಡಿದಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಪ್ರಸಿದ್ಧ ದೊಡ್ಡ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯ ಅಂಗವಾಗಿ ಈ ವರ್ಷದ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಭಕ್ತರ ಅಪಾರ ನಿರೀಕ್ಷೆಯ ನಡುವೆ ನಡೆದ ಈ ಪಾರಂಪರಿಕ ಜಾತ್ರೆಯಲ್ಲಿ ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ಭವಿಷ್ಯವಾಣಿ : ಈ ವರ್ಷ ” ಸಂಪಾಯಿತಲೇ ಪರಾಕ್ ” ಎಂಬುದು ಗೊರವಯ್ಯ ರಾಮಜ್ಜ ‘ ಎಂಬ ಕಾರ್ಣಿಕ ನುಡಿಸಿದ್ದಾರೆ. ಇದರ ಅರ್ಥ ವರ್ಷಪೂರ್ತಿ ಉತ್ತಮ ಮಳೆಯಾಗಲಿದೆ, ಕೃಷಿ ಬೆಳೆಯು ಸಮೃದ್ಧಿಯಾಗಲಿದೆ ಹಾಗೂ ರಾಜ್ಯದ ಜನತೆ ಸುಖಸಮೃದ್ಧಿಯಿಂದ ಬದುಕುವರು ಎಂದು ಭಕ್ತರು ಹಾಗೂ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಮೈಲಾರದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವ ನಡೆಯುತ್ತಿದ್ದು. ಈ ಜಾರಿಗೆ ರಾಜ್ಯದ ಹಲವು ಜಿಲ್ಲೆಗಳು ಸೇರಿ ಹೊರ ರಾಜ್ಯದಿಂದಲೇ ಭಕ್ತರು ಆಗಮಿಸುತ್ತಾರೆ. ಈ ವರ್ಷ ಜಾತ್ರೆ ಜನವರಿ 25 ರಿಂದ ಫೆ.5 ವರೆಗೂ ನಡೆಯುತ್ತಿದೆ. ಬುಧವಾರ ಸಂಜೆ ಕಾರ್ಣಿಕ ನಡೆದಿದ್ದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಯ್ಯ ರಾಮಜ್ಜನವರು ಭವಿಷ್ಯವಾಣಿ ನುಡಿದಿದ್ದಾರೆ. ಈ ವರ್ಷದ ಕಾರ್ಣಿಕ ನುಡಿಯನ್ನು ಭಕ್ತರು, ಗ್ರಾಮಸ್ಥರು ವಿಶ್ಲೇಷಣೆ ಮಾಡಿದ್ದಾರೆ. “ಸಂಪಾಯಿತಲೇ ಪರಾಕ್ ” ಎಂದರೇ ಮಳೆ‌ ಬೆಳೆ ನಾಡು ಸಮೃದ್ದಿ ಆಗುತ್ತೆ ಎಂದಾಗಿದೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!