ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಶೌಚಾಲಯ ರಚನೆ ಮತ್ತು ಬಳಕೆ ಕುರಿತು ಸೃಜನಶೀಲ ಕಾರ್ಯಕ್ರಮವನ್ನು ಕಂಪ್ಲಿ ತಾಲೂಕಿನ ಯೋಜನಾ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷರವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಶೌಚಾಲಯ ಬಳಕೆಯ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು. ಇವತ್ತಿನ ದಿನಮಾನಗಳಲ್ಲಿ ಬಯಲು ವಿಸರ್ಜನೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಆರೋಗ್ಯದ ಕುರಿತು ಮತ್ತು ಮನೆಯಲ್ಲಿ ಹಿರಿಯರು ಸಣ್ಣ ಮಕ್ಕಳು ಆರೋಗ್ಯ ಸಮಸ್ಯೆಗಳು ಬಂದಾಗ ಅದರಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಮಸ್ಯೆಗಳಿಂದ ದೂರ ಆಗಬೇಕಾದರೆ ಕಡ್ಡಾಯವಾಗಿ ಮನೆಯಲ್ಲಿ ಒಂದೊಂದು ಶೌಚಾಲಯಗಳನ್ನು ಕಟ್ಟಿಸಿಕೊಂಡು ಅದನ್ನು ಶುಚಿತ್ವದಿಂದ ಕಾಪಾಡಿಕೊಂಡು ನಿರ್ವಹಣೆಯನ್ನು ಮಾಡಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದ ಅಡಿಯಲ್ಲಿ 20 ಜನ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಶೌಚಾಲಯ ರಚನೆ ಕಟ್ಟಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿ ಯೋಜನೆಯಿಂದ ಬೇಶನ್ ಖರೀದಿಗೆ 500 ಗಳ ಅನುದಾನದಡಿಯಲ್ಲಿ 20 ಜನ ಫಲಾನುಭವಿಗಳಿಗೆ 10,000 ರೂ. ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.
ಕಂಪ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ರಾಘವೇಂದ್ರ, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ, ಎಮ್ಮಿಗನೂರ್ ಹಾಗೂ ಕಂಪ್ಲಿ ವಲಯದ ಮೇಲ್ವಿಚಾರಕ ಮಂಜಣ್ಣ, ಮಂಜುನಾಥ ಹಾಗೂ ಸೇವಾ ಪ್ರತಿನಿಧಿಗಳು ಮತ್ತು ಜ್ಞಾನ ವಿಕಾಸ ಕೇಂದ್ರ ಸರ್ವ ಸದಸ್ಯರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















