ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿರುವ ಎಂಟರ್ ಪ್ರೈಸಸ್, ಆಟೋ ಎಲೆಕ್ಟ್ರಿಕಲ್ ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಗುರುವಾರ ದಾಳಿ ನಡೆಸಿ, ಬಾಲಕಾರ್ಮಿಕರನ್ನು ರಕ್ಷಿಸಿದರು.
ನಂತರ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮೌನೇಶ್ ಮಾತನಾಡಿ, ಬಾಲ ಕಾರ್ಮಿಕರ ರಕ್ಷಣೆಗಾಗಿ ಕಂಪ್ಲಿ ಪಟ್ಟಣದ ಅಂಗಡಿಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಶಿರಿಡಿ ಸಾಯಿ ಎಂಟರ್ ಪ್ರೈಸಸ್, ಇಲಾಹಿ ಆಟೋ ಎಲೆಕ್ಟ್ರಿಕಲ್ ಶಾಪ್ ಸೇರಿದಂತೆ ಇತರೆ ಅಂಗಡಿಗಳ ಮೇಲೆ ದಾಳಿ ಮಾಡಿ, ಮಕ್ಕಳನ್ನು ರಕ್ಷಿಸಿ, ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಆದರೆ, ಕೆಲವರು 18ವರ್ಷದೊಳಗಿನ ಮಕ್ಕಳನ್ನು ಶಾಲೆ ಬಿಡಿಸಿ, ಕೆಲಸಗಳಿಗೆ ಕಳುಹಿಸುವುದು ಸರಿಯಲ್ಲ. ಸಾರ್ವಜನಿಕರು ಸಹ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾರಾದರೂ ಮಕ್ಕಳನ್ನು ನೇಮಿಸಿಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ– 1098 ಮತ್ತು ಪೊಲೀಸ್ ಇಲಾಖೆಯ ಸಹಾಯವಾಣಿ– 112 ಸಂಖ್ಯೆಗೆ ಕರೆ ಮಾಡಿ ಮಕ್ಕಳ ರಕ್ಷಣೆಗೆ ಸಹಕಾರ ನೀಡಬೇಕು’ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ, ಪಿಎಸ್ ಐ ಅವಿನಾಶ್, ಆರ್ಒ ಪ್ರಶಾಂತ್, ಜಿಲ್ಲಾ ತಂಬಾಕು ನಿಷೇಧ ಇಲಾಖೆಯ ಜಿಲ್ಲಾ ಸಲಹೆಗಾರ ಪ್ರಶಾಂತ್, ಇಸಿಒ ಟಿಎಂ ಬಸವರಾಜ, ನಿಲಯ ಪಾಲಕ ಗಾದಿಲಿಂಗಪ್ಪ, ಅಂಗಮವಾಡಿ ಮೇಲ್ವಿಚಾರಕಿ ಲತೀಫಾಬೇಗಂ, ಆರೋಗ್ಯ ಇಲಾಖೆಯ ಬಸವರಾಜ, ಕಾರ್ಮಿಕ ಇಲಾಖೆಯ ಡಿ.ಒ ವಿಘ್ನೇಶ್ವರ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















