
ತುಮಕೂರು/ ಪಾವಗಡ : ಕರಿಯಮ್ಮನಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಶುದ್ಧ ನೀರಿನ ಘಟಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಲೋಕೇಶ್ ಪಾಳೇಗಾರ್ ಮಾತನಾಡಿ ಗಡಿ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂದು ಹಣೆಪಟ್ಟಿ ಇರುವ ಪಾವಗಡ ತಾಲ್ಲೂಕಿನಲ್ಲಿ ಆರೋಗ್ಯ, ಉದ್ಯೋಗ, ಸರ್ಕಾರಿ ಶಾಲೆ, ಬಡತನ, ಪ್ರಕೃತಿ ವಿಕೋಪ ಇನ್ನಿತರ ಕ್ಷೇತ್ರದಲ್ಲಿ ಸಂಕಷ್ಟದಲ್ಲಿ ಸದಾ ಸಹಾಯ ಸಹಕಾರ ಮಾಡುತ್ತಾ ಬರುತ್ತಿರುವ ಹೆಲ್ಪ್ ಸೊಸೈಟಿ ಸಂಸ್ಥೆ ಬರದ ನಾಡಿನ ಭಗೀರಥ ಎಂದರೆ ತಪ್ಪಾಗಲ್ಲ ಅವರ ಗುರಿ ಧ್ಯೇಯ ಉತ್ತಮವಾಗಿದೆ ಮಾನಂ ಶಶಿ ಕಿರಣ್ ರವರ ನೇತೃತ್ವದಲ್ಲಿ ಹೆಲ್ಪ್ ಸೊಸೈಟಿ ಸಂಸ್ಥೆ ಸೇವೆಯ
ತಾಲ್ಲೂಕಿನಲ್ಲಿ ಫ್ಲೋರೇಡ್ ಅಂಶ ಜಾಸ್ತಿ ಇದ್ದು ತಾಲ್ಲೂಕಿನ ಸಾವಿರಾರು ಜನತೆ ಮಕ್ಕಳು ವೃದ್ಧರು ಅಂಗವಿಕಲತೆಗೆ ತುತ್ತಾಗುತ್ತಿದ್ದಾರೆ ಅಂತಹ ಅಂಶವನ್ನು ಮನಗಂಡ ಹೆಲ್ಪ್ ಸೊಸೈಟಿ ಸಂಸ್ಥೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಿ ಫ್ಲೋರೇಡ್ ಮುಕ್ತ ಶುದ್ಧ ನೀರು ಮಕ್ಕಳು ಕುಡಿಯಲು ಅನುಕೂಲ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿ ಕಿರಣ್ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ ಮಾಡಿ ಮಾತನಾಡಿ ತಾಲೂಕಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಹೆಲ್ಪ್ ಸೊಸೈಟಿ ವತಿಯಿಂದ ಕೈಲಾದ ಸಹಾಯ ಸಹಕಾರ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಅಮಿಲಿನೆನಿ ನರೇಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮೀ ಓಂಕಾರ ನಾಯಕ ಮುಖ್ಯ ಶಿಕ್ಷಕಿ ಭಾರತಿ ಪಾಳೇಗಾರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಜನನಾಯಕ ಕೆ .ಗೋಪಾಲ್, ರಮೇಶ್, ಅಂಜನಾಯಕ ಮಹಾಲಿಂಗ ನಾಯಕ ಧನು ಹನುಮಂತರಾಯಪ್ಪ ಪದ್ಮ ಕಮಲಾಕ್ಷಿ ರಾಜಕುಮಾರ ಅಂಗನವಾಡಿ ಕಾರ್ಯಕರ್ತೆ ರಂಗಮ್ಮ ಅಡುಗೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ ಪೃಥ್ವಿರಾಜು ಜಿ. ವಿ




















