ಕೊರಟಗೆರೆ: ದುಡಿಯಲು ಶಕ್ತಿಯಿಲ್ಲದೆ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ಅಶಕ್ತರಿಗೆ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತದೆ ಎಂದು ತಾಲೂಕು ಯೋಜನಾಧಿಕಾರಿ ಅನಿತಾ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಬೋಡಬಂಡೇನಹಳ್ಳಿ ಗ್ರಾಮದ ವಾಸಿ ಬಡ ವೃದ್ಧೆ ಮುನಿರತ್ನಮ್ಮಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭೀವೃದ್ಧಿ ಸಂಸ್ಥೆಯಿoದ ಶುಕ್ರವಾರ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ ಅರ್ಹ ಬಡತನ ರೇಖೆಗಿಂತ ಕಡಿಮೆ ಇರುವವರನ್ನು ಯೋಜನೆಯಿಂದ ಗುರುತಿಸಲಾಗುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿoದ ಬಡ ವೃದ್ಧೆ ಮುನಿರತ್ನಮ್ಮಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗಿದೆ. ಕಟ್ಟ ಕಡೆಯ ಪ್ರಜೆಯು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಕಿಟ್‌ನಲ್ಲಿ ದಿನ ಬಳಕೆಗೆ ಆರೋಗ್ಯ ಬಳಕೆಗೆ ವಸ್ತುಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಸೇವಾ ಪ್ರತಿನಿಧಿ ವೀಣಾ ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಶೀರ್ವಾದದಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಸಂಸ್ಥೆಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ವಾತ್ಸಲ್ಯ ಯೋಜನೆ ಅಶಕ್ತರಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ನೇತ್ರಾವತಿ, ವಿಜಯಲಕ್ಷ್ಮಿ, ಬಾನುಪ್ರೀಯ, ನಾಗರತ್ನಮ್ಮ, ರುದ್ರಮ್ಮ, ರೇಣುಕಾ, ಭಾಗ್ಯಶ್ರೀ, ಗಾಯಿತ್ರಿ, ಸಾವಿತ್ರಮ್ಮ ಸೇರಿದಂತೆ ಇತರರು ಇದ್ದರು.
ವರದಿ :ಪ್ರಸನ್ನಕುಮಾರ್. ಎಸ್, ಕೊರಟಗೆರೆ



















