ಶಿವಮೊಗ್ಗ: ಐಡಿಯಲ್ ಪ್ಲೇ ಅಬಾಕಸ್ ಪ್ರೈವೇಟ್ ಲಿಮಿಟೆವಿಡ್ ಸಂಸ್ಥೆಯು ಇತ್ತೀಚೆಗೆ ಪಾಂಡಿಚೇರಿಯಲ್ಲಿ ನಡೆಸಿದ ರಾಷ್ಟ್ರಮಟ್ಟದ ಅಬಾಕಸ್ ಹಾಗೂ ವೇದಗಣಿತ ಸ್ಪರ್ಧೆಯಲ್ಲಿ ಶಿವಮೊಗ್ಗದ ಜಯನಗರ ಐಡಲ್ ಪ್ಲೇ ಅಬಾಕಸ್ ಸೆಂಟರ್‌ನ ೩೫ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ದೃತಿನ ಶ್ರೇಯಸ್ ಮತ್ತು ತನ್ಮಯ್ ಚಿನ್ನದ ಪದಕ ಪಡೆಯುವ ಮೂಲಕ ಚಾಂಪಿಯನ್ ಆಫ್ ಚಾಂಪಿಯನ್ ಆಗಿದ್ದಾರೆ. ಜೊತೆಗೆ 6 ಪ್ರಥಮ ಸ್ಥಾನ 12 ದ್ವಿತೀಯ ಸ್ಥಾನ 9 ತೃತೀಯ ಸ್ಥಾನ 2 ನಾಲ್ಕನೆಯ ಸ್ಥಾನ 2 ಐದನೇ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿ ಗೆದ್ದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಬೆಸ್ಟ್ ಪ್ರಾಂಚೈಸಿ ಅವಾರ್ಡ್ ಪಡೆದ ಸೆಂಟರ್‌ನ ಜ್ಯೋತಿ ಉಮೇಶ್ ಅವರು ವಿಜೇತ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್.



















