ಹನೂರು : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುದಾನದಡಿ ಆಯೋಜಿಸಿದ್ದ 50 ಬೆಡ್ ಹಾಸಿಗೆ ನೂತನ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
ವೇದಿಕೆ ಕಾರ್ಯಕ್ರಮ ಮಾತನಾಡಿದ ಶಾಸಕರು,
ಹನೂರು ತಾಲ್ಲೂಕಿನ ಜನತೆಗೆ ಇಂದು ಸುದಿನ ಅಂತ ಹೇಳ್ತೇನೆ ರಾಜ್ಯದಲ್ಲೇ ಅತೀ ಹೆಚ್ಚು ವಿಸ್ತೀರ್ಣ ಹೊಂದಿರುವ ಮೂರನೇ ಕ್ಷೇತ್ರ ನಮ್ಮ ಹನೂರು, ಆರೋಗ್ಯ ವ್ಯವಸ್ಥೆಯಲ್ಲಿ ಹನೂರು ಭಾಗದ ಜನರು ವಂಚಿತರಾಗಿದ್ದರು ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ನಡೆದ ಫಲವಾಗಿ ಮಾದಪ್ಪನ ಆಶೀರ್ವಾದದಿಂದ ನಮಗೆ ಇವತ್ತು 20 ಕೋಟಿ ವೆಚ್ಚದಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣವಾಗಲು ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಹಾಗೂ ನಮಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.ಎಂದರು
ಗುತ್ತಿಗೆದಾರರು 18 ತಿಂಗಳ ಒಳಗೆ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲೇಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕೆಲಸ ಪ್ರಾರಂಭವಾದ ಮೇಲೆ ಕಾಮಗಾರಿ ಗುಣಮಟ್ಟವನ್ನು ನಾನೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಎಂದು ಗುತ್ತಿಗೆದಾರರಿಗೆ ತಿಳಿಸಿದರು.
ಡಿ.ಎಚ್.ಓ ಡಾ .ಚಿದಂಬರಂ ಅವರು ಮಾತನಾಡಿ ಹನೂರು ಕ್ಷೇತ್ರದ ಶಾಸಕರು ಹಠವಾದಿ ಶಾಸಕರು ಇಂತಹ ಕೆಲಸ ಮಾಡಬೇಕು ಎಂದರೆ ಅದನ್ನು ಮಾಡದೇ ಬಿಡುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಮಾತನಾಡಿ ನನ್ನ ಕ್ಷೇತ್ರಕ್ಕೆ ಇಂತಹ ಕೆಲಸ ಆಗಬೇಕು ಎಂದು ಮಾತನಾಡಿ ಹನೂರು ತಾಲೂಕು ಕೇಂದ್ರಕ್ಕೆ 50 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಇಂದು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ್ದಾರೆ
,ಹಿಂದೆ ಹಲವಾರು ಜನ ಪ್ರತಿನಿದಿಗಳು ಪಟ್ಟಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಯತ್ನ ಪಟ್ಟಿದ್ದರು ಕೂಡ ಅದು ಪೂರ್ಣ ಆಗಿರಲಿಲ್ಲ. ಇದೀಗ ಶಾಸಕ ಮಂಜುನಾಥ್ ರವರ ನಿರಂತರ ಪ್ರಯತ್ನದಿಂದ ಕಾಲ ಕೂಡಿ ಬಂದಿದೆ.
20 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗುತ್ತಿದ್ದೂ ನಾನಾ ರೀತಿಯ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತವೆ.
ಹನೂರು ಕ್ಷೇತ್ರ ಭೌಗೋಳಿಕ ವಿಸ್ತೀರ್ಣ ಜಾಸ್ತಿ ಇದೆ ಕಾಡಂಚಿನ ಗ್ರಾಮಗಳಿಂದ ಬರುವ ತನಕ ತುಂಬಾ ಸಮಯ ಬೇಕಾಗುತ್ತದೆ ದೂರದ ಕೊಳ್ಳೇಗಾಲ ಮೈಸೂರು ಚಾಮರಾಜನಗರದ ಕಡೆ ಹೋಗುತ್ತಿದ್ದರು. ಹನೂರಿನಲ್ಲಿ ಆಸ್ಪತ್ರೆ ನಿರ್ಮಾಣ ಹಾಗುತ್ತಿರುವುದು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆಸ್ಪತ್ರೆಗೆ ಸ್ಥಳೀಯ ವೈದ್ಯರನ್ನೆ ನೇಮಕ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ನಾಲ್ಕು ಬೆಡ್ ಇರುವ ಡಯಲಿಸಿಸ್ ಕೇಂದ್ರವನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಅರೋಗ್ಯಧಿಕಾರಿ ಡಾ ಪ್ರಕಾಶ್, ಹನೂರು ಅರೋಗ್ಯ ಕೇಂದ್ರದ ಡಾ ರಾಜು, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು ಮುಮ್ತಾಜ್ ಭಾನು, ಎಂಜಿನಿಯರ್ ಗಳಾದ ಜಗದೀಶ್, ಗುರುಪ್ರಸಾದ್ ಪ್ರಸಾದ್ ಗುತ್ತಿಗೆದಾರರು, ರಾಜು, ಪ್ರಸಾದ್,ಸಮಿವುಲ್ಲಾ, ಮಂಜೇಶ್, ವಿಜಯ್ ಕುಮಾರ್ ಇನ್ನಿತರರಿದ್ದರು.
ವರದಿ :ಉಸ್ಮಾನ್ ಖಾನ್




















