ಧರೆಗೆ ರುಜು ಮಾಡಿದೆ
ಸೃಷ್ಟಿ ಸೊಬಗಿನ ವೈಚಿತ್ರ
ದೃಷ್ಠಿ ವಿಹಂಗಮ ದೃಶ್ಯ ಕಾವ್ಯ
ಪ್ರೇಮ ಪ್ರಣತಿ ಹಚ್ಚಿದೆ.
ಹೊನ್ನ ಕಾಂತಿಯ ಸೂಸುತ
ಭಿನ್ನ ರಾಗ ಮರೆಸಿ
ಕಣ್ಣ ಬಿಂಬಕೆ ನೂರೆಂಟು ಮಾತು ಕಲಿಸಿ
ಭರವಸೆಯ ಆಶಾಕಿರಣ ತುಂಬಿದೆ.
ದೇವರ ದಯೆಯಲಿ
ಬಾನಂಗಳದಿ ರಂಗಿನೋಕುಳಿ
ಜೀವ ವೀಣೆ ರಾಗ ತುಂಬಿ
ನಭದಿ ಉಷೆಯ ಗೀತೆ ಹಾಡಿದೆ.
ಇಳೆಗೆ ಕಂಪು ಸೂಸಿ
ಕಲರವ ನಿನಾದದಿ
ಅರಿವು ಮೂಡಿಸುವ ತೆರದಿ
ಬೆರೆವ ಸೊಭಾಗ್ಯ ಕಲ್ಪಿಸಿದೆ.
ಸಮಯದ ಗೊಂಬೆ ಆಟ
ಭುವಿಯ ಮಾಯೆ ಕಾಣಾ
ಹಂಬಲದ ಅಭಿವ್ಯಕ್ತಿಯಲಿ
ಚೆಲುವ ಚೈತ್ರ ಮಾರನೆನಿಸಿದೆ.
- ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು.




















