ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗೃಹ ಸಚಿವರ ತವರು ನೆಲದಲ್ಲಿ ಮತ್ತೆ ಮಾರ್ಧನಿಸಿದ ಮಾದಿಗ ದಲಿತ ಸಿ. ಎಂ ಕೂಗು ಜೋರು

ತುಮಕೂರು/ ಕೊರಟಗೆರೆ: ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಮಧುಗಿರಿಯ ತನ್ನ ಸಂಬಂಧಿಗಳ ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಚಿವರನ್ನು ಸ್ವಾಗತಿಸಿದ ಮಾದರ ಮಹಾಸಭಾ ಮತ್ತು ಮಾದಿಗ ಸಂಘಟನೆಗಳ ಮುಖಂಡರು ಮುಂದಿನ ದಲಿತ ಮುಖ್ಯಮಂತ್ರಿ ಕೆ.ಎಚ್ ಮುನಿಯಪ್ಪಜಿ ಗೆ ಜೈ ಮುಂದಿನ ದಲಿತ ಮುಖ್ಯಮಂತ್ರಿ ಕೆ.ಎಚ್ ಮುನಿಯಪ್ಪಜಿ ಗೆ ಜೈ.. ಎಂಬ ಏರು ಧ್ವನಿಯ ಘೋಷಣೆಗಳು ಮಾರ್ಧನಿಸಿದ ಘಟನೆ ನಡೆಯಿತು.

ಮಧುಗಿರಿ ತಾಲೂಕಿನ ಜಡಗೊಂಡನಹಳ್ಳಿ ಗ್ರಾಮದಲ್ಲಿ ಸಂಬಂಧಿಕರ ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ಸಚಿವರನ್ನು ತುಮಕೂರು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರು ಪಟ್ಟಣದ ರಿಂಗ್ ರಸ್ತೆಯಲ್ಲಿ ಜಮಾವಣೆಗೊಂಡು ಮುಂದಿನ ಸಿಎಂ ಮುನಿಯಪ್ಪ ಅವರು ಎಂಬ ಘೋಷ ವಾಕ್ಯ ಮೊಳಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದೇ ಸಂದರ್ಭದಲ್ಲಿ ಸುವರ್ಣಗಿರಿ ಸಂಜೀವಿನಿ ತಪೋ ಕ್ಷೇತ್ರ ಸಿದ್ದರಬೆಟ್ಟ ಪ್ರಾಂತ್ಯವನ್ನು ಆಳಿದ ಕುರಂಗರಾಜ ಅಳಿದ ನೆಲವನ್ನು ಗುರುತಿಸಿ ಸಂರಕ್ಷಿಸುವುದರ ಜೊತೆಗೆ ಕುರಂಗರಾಜನ ಪ್ರತಿಷ್ಠಾನದ ಬೆಳವಣಿಗೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕು ಎಂಬ ಮನವಿಯನ್ನು ಕೊರಟಗೆರೆ ತಾಲೂಕು ಮಾದರ ಮಹಾಸಭಾ ಅಧ್ಯಕ್ಷ ವಿಭೂತಿ ಸಿದ್ದಪ್ಪ, ದಾಡಿ ವೆಂಕಟೇಶ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ತುಮಕೂರು ಜಿಲ್ಲಾ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಹುಚ್ಚಯ್ಯ ಅವರು ಶತಶತಮಾನಗಳಿಂದ ಶೋಷಣೆ ತುಳಿತಕ್ಕೊಳಗಾದ ಮಾದಿಗ ಸಮುದಾಯದ ಯುವಕರನ್ನ ಸಂಘಟಿಸಿ ಮುನ್ನಡೆಸಬೇಕು ಎಂದು ಸಚಿವರಲ್ಲಿ ಸಂದರ್ಭದಲ್ಲಿ ಬೇಡಿಕೆ ಇಟ್ಟರು.

ಈ ಸಂದರ್ಭದಲ್ಲಿ ಮಾದರ ಮಹಾಸಭಾದ ಮಾಜಿ ಶಾಸಕ ಗಂಗಾ ಹನುಮಯ್ಯ, ಜಿಲ್ಲಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಉಪಾಧ್ಯಕ್ಷರಾದ ಡಾ. ಎಲ್ ಮುಕುಂದರಾಜ್, ಕೊಟ್ಟ ಶಂಕರ್ , ಗೂಳರಿವೆ ನಾಗರಾಜು, ಕೊರಟಗೆರೆ ತಾಲೂಕು ಮಾದರ ಮಹಾಸಭಾದ ವಿಭೂತಿ ಸಿದ್ದಪ್ಪ ದಾಡಿ ವೆಂಕಟೇಶ್,ಲಕ್ಷ್ಮೀ ನರಸಪ್ಪ, ವೀರ ಕ್ಯಾತರಾಯ, ಟೌನ್ ಮಾರುತಿ, ಗೋಪಿ, ತೋವಿನಕೆರೆ ಹನುಮಂತರಾಯಪ್ಪ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತುಮಕೂರು ಜಿಲ್ಲಾ ಉಸ್ತುವಾರಿಗಳು.
ಕಾಮರಾಜನಹಳ್ಳಿ. ದೊಡ್ಡಯ್ಯ,ಗಂಗಣ್ಣ, ಚಿಂಪುಗಾನಹಳ್ಳಿ ರವಿ
ಪತ್ರಕರ್ತ ,ನೇಗಲಾಲ ಸಿದ್ದೇಶ್, ಸಂಜೀವರಾಯಪ್ಪ ತೋವಿನಕೆರೆ. ರಾಮಾಂಜಿನಪ್ಪ. ಮಂಜುನಾಥ್. ಪ್ರಸನ್ನ ಕುಮಾರ್.ಸುರೇಶ್ ಸೇರಿದಂತೆ ಮಾದಿಗ ಸಮುದಾಯದ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ : ಪ್ರಸನ್ನಕುಮಾರ್. ಎಸ್., ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!