
ಬಳ್ಳಾರಿ / ಕಂಪ್ಲಿ : ಪುರಸಭೆ ವತಿಯಿಂದ ಸ್ವಚ್ಛಭಾರತ್ ಹಾಗೂ ಕಂಪ್ಲಿ ಉತ್ಸವ–2026ರ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಮಂಗಳವಾರ ಪುರಸಭೆ ಆಶ್ರಯದಲ್ಲಿ ಸ್ವಚ್ಛತಾ ಓಟ ನಡೆಯಿತು.
ಸಚಿವರು, ಜಿಲ್ಲಾಧಿಕಾರಿಗಳ, ಸಂಸದರು, ಶಾಸಕರಾದ ಜೆ. ಎನ್. ಗಣೇಶರವರ ಮಾರ್ಗದರ್ಶನದಡಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಅವರು ಸ್ವಚ್ಛತಾ ಓಟಕ್ಕೆ ಚಾಲನೆ ನೀಡಿ ‘ ಸ್ವಾಮಿ ವಿವೇಕಾನಂದರ ಮೌಲ್ಯಗಳು, ಸದೃಢ ಶರೀರ ಮತ್ತು ಮನಸ್ಸಿನ ಮಹತ್ವ ಮತ್ತು ಸ್ವಚ್ಛ, ಆರೋಗ್ಯಕರ ವಾತಾವರಣ ನೆನಪಿಸಿದರು. ವಿಶೇಷವಾಗಿ ರೂಪಿಸಿದ ಈ ಸ್ವಚ್ಛತಾ ಓಟವು ಯುವಜನತೆಗೆ ಪ್ರೇರಣೆ ನೀಡಿತು. ಕಂಪ್ಲಿಯ ಜನತೆಯಲ್ಲಿ ತಮ್ಮ ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿತು.
ಸ್ವಚ್ಛತಾ ಓಟದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ- 65ರ ವಯೋಮಾನದವರು ಓಟದಲ್ಲಿ ಕಂಡು ಬಂದರು. ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.
ಅತಿ ಹೆಚ್ಚು ಪ್ಲಾಸ್ಟಿಕ್ ಕಸ ಸಂಗ್ರಹಿಸಿ ತಂದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಜನರು ಪ್ರಾಗೋಥಾನ್ ಓಟಕ್ಕೆ ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















