ಗುಂಡ್ಲುಪೇಟೆ : ಪಟ್ಟಣದಾದ್ಯಂತ ಕುಡಿಯುವ ನೀರಿನ ಸೌಲಭ್ಯ ಪರಿಹಾರವಾಗಿಲ್ಲ, ರಸ್ತೆಗಳು, ರೋಡ್ ಕಟಿಂಗ್ ಗಳು, ಗುಂಡಿಗಳು ಸೇರಿದಂತೆ ತಮ್ಮ ತಮ್ಮ ಮನೆ ಮುಂದೆ ಇರುವಂತಹ ನೀರಿನ ಗುಂಡಿಗಳನ್ನು ಸಹ ಪುರಸಭೆಯು ಅಧಿಕಾರಿಗಳು ಮುಚ್ಚದೆ ಇರುವುದು ದುರದೃಷ್ಟಕರ ಸಂಗತಿಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಜನತೆಗೆ ಹಾಗೂ ಗುಂಡ್ಲುಪೇಟೆ ಪಟ್ಟಣದ ಜನತೆಗೆ ಯಾವುದೇ ಸಭೆ ಸಮಾರಂಭ, ಮಹನೀಯರ ಜಯಂತಿಗಳು, ಜಾತ್ರೆಯ , ರಾಜಕೀಯದ ಮೆರವಣಿಗೆಗಳು, ಶಾಲಾ ಕಾಲೇಜುಗಳ ಮೆರವಣಿಗೆಗಳು ಹೀಗೆ ಪ್ರತಿಯೊಂದು ಮೆರವಣಿಗೆಯು ಸಹ ಗುಂಡ್ಲುಪೇಟೆ ಪಟ್ಟಣದಲ್ಲಿ ಪಾದಯಾತ್ರೆಯ ಮುಖಾಂತರ ಸಂಚರಿಸುತ್ತವೆ ಹೀಗಿರುವ ಪರಿಸ್ಥಿತಿಯಲ್ಲಿ ಗುಂಡ್ಲುಪೇಟೆ ಪುರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿದ್ದಾರೆ ರಸ್ತೆಗಳನ್ನು ಅಗೆದು ಮನೆ ಮುಂದೆ ಇರುವ ಆ ನೀರಿನ ಗುಂಡಿಗಳು ಹಲವು ವರ್ಷಗಳಿಂದ ಹಾಗೆ ಬಿದ್ದಿದೆ ಯಾವುದೇ ಪಕ್ಷ ಅಧಿಕಾರ ಬಂದರೂ ಸಹ ಗುಂಡ್ಲುಪೇಟೆಯ ಮೆರವಣಿಗೆ ರಸ್ತೆಯನ್ನು ಅಭಿವೃದ್ಧಿ ಪಡಿಸದೆ ಉಳಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಗುಂಡ್ಲುಪೇಟೆ ತಾಲೂಕಿನ ಜನತೆಗಳಿಗೆ ಹಾಗೂ ಪಟ್ಟಣದ ಜನತೆಗೆ ಅನುಕೂಲ ಮಾಡಿಕೊಡದೆ ಇದ್ದಲ್ಲಿ ನಮ್ಮ ಕರ್ನಾಟಕ ಸೇನೆಯಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಗುಂಡ್ಲುಪೇಟೆಯ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಮನವಿ ಮುಖೇನ ಸಂಘಟನೆಯಿಂದ ಎಚ್ಚರಿಕೆ ನೀಡಲಾಯಿತು.
ಈ ಸಮಯದಲ್ಲಿ ಜಿಲ್ಲಾಧ್ಯಕ್ಷರು ಸುರೇಶ್ ನಾಯಕ್,
ಜಿಲ್ಲಾ ಉಪಾಧ್ಯಕ್ಷರು ನಾಗರಾಜು, ತಾಲೂಕು ಅಧ್ಯಕ್ಷ ಶ್ರೀನಿವಾಸ್ ನಾಯಕ್, ವಾಹನ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಮಾದುನಾಯಕ,
ತಾಲೂಕು ಉಪಾಧ್ಯಕ್ಷರು ಕೃಷ್ಣಗೌಡ ಜಿ,
ಹoಗಳ ಹೋಬಳಿ ಅಧ್ಯಕ್ಷರು ಮಂಜು,
ಕೊಡಳ್ಳಿ ಘಟಕದ ಅಧ್ಯಕ್ಷರು ಕೃಷ್ಣ ಹಾಗೂ ಮನು ಹರೀಶ್ ಗೌಡ ಸೇರಿದಂತೆ ಇನ್ನೂ ಮುಂತಾದವರು ಇದ್ದರು.
- ಕರುನಾಡ ಕಂದ ಪತ್ರಿಕೆ




















