ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಂಸ್ಕೃತಿಕ ಕಲಾ ವೈಭವ : ಜನಮನ ಗೆದ್ದ ಕಲಾತಂಡಗಳ ವೈಭವದ ಮೆರವಣಿಗೆ

ಬಳ್ಳಾರಿ / ಕಂಪ್ಲಿ : ಕಂಪ್ಲಿ ಉತ್ಸವ‌ 2026 ವೈಭವದಿಂದ ನಡೆಯುತ್ತಿದ್ದು ಐತಿಹಾಸಿಕ ಇತಿಹಾಸವಿರುವ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪ್ಲಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ಮಾಡುತ್ತಿರೋ ಕಂಪ್ಲಿ ಉತ್ಸವದ ಮೊದಲ ದಿನದ ಕಲಾತಂಡಗಳ ಮೆರವಣಿಗೆ ಜನಮನ ಸೆಳೆಯಿತು.


ಜಿಲ್ಲಾ ವಿಭಜನೆ ಬಳಿಕ ಇದೀಗ ಉತ್ಸವ ಎರಡನೇ ಬಾರಿಗೆ ಸಾಕಾರಗೊಂಡಿದೆ.
ಕಂಪ್ಲಿ ಉತ್ಸವ 2026 ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವೈಭವ ಮೆರವಣಿಗೆಯು ಪಟ್ಟಣದ ಸಾಂಸ್ಕೃತಿಕ ಕಲಾ ವೈಭವವನ್ನು ಮರುಕಳಿಸಿತು.


ಕಂಪ್ಲಿ ಉತ್ಸವದ ಮೆರವಣಿಗೆಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಪಟ್ಟಣದ ಕೋಟೆಯ ಐತಿಹಾಸಿಕ ಶ್ರೀ ಪಂಪಾಪತಿ ದೇವಸ್ಥಾನದ ಪ್ರದೇಶದ ಗಂಡುಗಲಿ ಕುಮಾರರಾಮ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಚಾಲನೆ ನೀಡಿದರು.

ಅದ್ಧೂರಿಯಾಗಿ ನಡೆದ ಮೆರವಣಿಗೆ:
ಕಲಾ ತಂಡದೊಂದಿಗೆ ಮೆರವಣಿಗೆಯು ಪಟ್ಟಣದ ಕೋಟೆ ಪ್ರದೇಶದಿಂದ ಆರಂಭವಾಗಿ, ನಡುವಲ ಮಸೀದಿ ಮೂಲಕ ಸಾಗಿ ಡಾ.ರಾಜ್ ಕುಮಾರ್ ರಸ್ತೆಯ ಮಾರ್ಗವಾಗಿ ಅಂಬೇಡ್ಕರ್ ವೃತ್ತದಿಂದ ಸೋಮೇಶ್ವರ ದೇವಸ್ಥಾನದವರೆಗೆ ಅದ್ಧೂರಿ ಉತ್ಸವ ಮೆರವಣಿಗೆ ಜರುಗಿತು.

ಗಮನ ಸೆಳೆದ ವಿವಿಧ ಕಲಾತಂಡಗಳು: ಮೆರವಣಿಗೆಯಲ್ಲಿ ಹಗಲುವೇಷ, ವೀರಗಾಸೆ, ತಾಷರಂಡೋಲ್, ಹುಲಿವೇಷ, ಡೊಳ್ಳು ಕುಣಿತ, ಕಹಳೆ ವಾದನ, ಮಹಿಳಾ ಡೊಳ್ಳು ಕುಣಿತ, ನಾದಸ್ವರ, ನಂದಿಧ್ವಜ, ಕಂಸಾಳೆ, ಮರುಗಾಲು‌ ಕುಣಿತ, ಛತ್ರಿ ಚಾಮರಾ, ಸೋಮನ ಕುಣಿತ, ಭದ್ರಕಾಳಿ, ಸಿಂದೂಳ್ ಕುಣಿತ, ಕಂಚಿಮೇಳ, ಪಟ ಕುಣಿತ, ಸುಗ್ಗಿ ಕುಣಿತ, ಹಲಗೆ ವಾದನ, ಮಹಿಳಾ ಕೋಲಾಟ, ಹಕ್ಕಿಪಿಕ್ಕಿ ನೃತ್ಯ, ಚಂಡೆವಾದ್ಯ, ಗಾರಡಿ ಗೊಂಬೆ, ಗೊಂಬೆ ಕುಣಿತ, ಚಿಟ್ಟಿ‌ನೃತ್ಯ, ಪೂಜಾ ಕುಣಿತ, ಕಥಕ್ಕಳಿ, ಮಹಿಳಾ ವೀರಗಾಸೆ, ನಗಾರಿ ವಾದನ, ಸತ್ತಿಗೆ ಕುಣಿತ, ಕೀಲು ಕುದುರೆ-ನವೀಲು ಕುಣಿತ, ಗೊಂಬೆ ಕುಣಿತ, ಸಿಂದೋಳ್ ಕುಣಿತ, ಕಂಚಿಮೇಳ, ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವವದ ಮೆರಗನ್ನು ಇನ್ನಷ್ಟು ಹೆಚ್ಚಿಸಿದವು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!