ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“5 ವರ್ಷದ ಕತ್ತಲಿಗೆ ಚುನಾವಣಾ ಬಹಿಷ್ಕಾರದ ಬಿಸಿ : ಕೋಗನೂರು ಆಶ್ರಯ ಕಾಲೋನಿ ಜನರ ಪಟ್ಟು.”

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ನಾಡು ಕೋಗನೂರಿನ ಆಶ್ರಯ ಕಾಲೋನಿಯಲ್ಲಿ 5 ವರ್ಷದಿಂದ ಬೀದಿ ದೀಪ ವ್ಯವಸ್ಥೆ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು, ಜೊತೆಗೆ ಊರಿನ ಮುಖ್ಯ ರಸ್ತೆಯಲ್ಲಿ ಕರೆಂಟ್ ಕೇಬಲ್ ಕೆಳಕ್ಕೆ ನೇತಾಡುತ್ತಿರುವುದು ಅಪಾಯಕಾರಿಯಾಗಿದ್ದು ಜನರು ಭಯಬೀತರಾಗಿದ್ದಾರೆ ದೊಡ್ಡ ದೊಡ್ಡ ವಾಹನ ಚಲಾಯಿಸುವುದು ಕಷ್ಟವಾಗಿರುತ್ತದೆ ಎಂದು ಗ್ರಾಮಸ್ತರು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪಿಡಿಒ ಅಧಿಕಾರಿ ಶರಣಪ್ಪ ಮುದ್ದಿ ಊರಿನ ಮುಖ್ಯ ರಸ್ತೆಯಲ್ಲಿ ಕೆಳಗೆ ನೇತಾಡುತ್ತಿರುವ ಕರೆಂಟ್ ಕೇಬಲ್ ಅನ್ನು ವೀಕ್ಷಿಸಿ ತಕ್ಷಣ ಸಮಸ್ಯೆ ಬಗೆಹರಿಸುವುದರ ಜೊತೆಗೆ ಬೀದಿ ದೀಪ ಅಳವಡಿಸುವ ಮನವಿಯನ್ನು ಸ್ವೀಕರಿಸಿ ಕಾರ್ಯ ಪ್ರಕ್ರಿಯೆಯ ಭರವಸೆ ನೀಡಿದರು, ಈ ಸಂದರ್ಭದಲ್ಲಿ ಪಕೀರ ಸಾಬ್ ಕಲಾಯಿಗರ್, ಹೈದರಲಿ ಪಿಂಜಾರ್, ಜುಬೇಧಾ ಪಿಂಜಾರ್, ದಾವಲ್ ಬಿ ಕಲೆಗಾರ್ , ಸತ್ಯಮ್ಮ ಅಗಸರ, ಲಾಲ್ ಬಿ ದೇಸಳ್ಳಿ ಮತ್ತು ಸಾಮಾಜಿಕ ಹೋರಾಟಗಾರರದ ರಾಜು ಎಚ್. ರವರು ಉಪಸ್ಥಿತರಿದ್ದರು. ಒಂದು ವೇಳೆ ಕೆಲಸ ಆಗದಿದ್ದರೆ ಹೋರಾಟದ ಎಚ್ಚರಿಕೆಯ ಧ್ವನಿ ಗೂಡಿಸಿದರು.

ವರದಿಗಾರರು :ರಾಖೇಶ ಬೂದಿಹಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!