
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿ ದಿನಾಂಕ 11/02/2026 ರಂದು ಶ್ರೀ ವೀರಭದ್ರೇಶ್ವರ ಜಾತ್ರೆ ಹಾಗೂ ಸಾಯಂಕಾಲ ರಥೋತ್ಸವ ಅತೀ ವಿಜೃಂಭಣೆಯಿಂದ ಜರುಗಿತು.
ತೇರಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಮೊದಲ ಆದ್ಯತೆ ಕೊಡುವುದು ಈ ಜಾತ್ರೆಯ ವಿಶೇಷವಾಗಿದೆ.
ಹಾಗೆಯೇ ಈ ತೇರಿನ ಹೆಸರು ಕೂಡಾ ತವರಿನ ತೇರು ಎಂದು ಪ್ರಸಿದ್ಧಿಯಾಗಿದೆ.
ಧನ್ನೂರ ಗ್ರಾಮದ ಈ ತೇರಿನ ಉತ್ಸವ ಇಡೀ ಕರ್ನಾಟಕಕ್ಕೆ ಒಂದು ಒಳ್ಳೆಯ ಮಾದರಿಯಾಗಿದೆ.
ಈ ತೇರಿನ ಉತ್ಸವ ಪ್ರತಿ ವರ್ಷಕ್ಕಿಂತ ಈ ವರ್ಷ ಅತಿ ವಿಜೃಂಭಣೆಯಿಂದ ಜರುಗಿತು.
ವಿಶೇಷವಾಗಿ ಯುವಕರು, ಹಿರಿಯರು ಸೇರಿದಂತೆ ಬೆಂಗಳೂರಿನ ಗೆಳೆಯರ ಬಳಗ ವತಿಯಿಂದ ಪಟಾಕಿ ಉತ್ಸವ ನಡೆಯಿತು.
ದೇವಸ್ಥಾನದ ಮುಖ್ಯ ವ್ಯವಸ್ಥಾಪಕರು ಪರಮೇಶ್ವರ ಪಾಟೀಲ, ಕಾಶೀನಾಥ್ ಖಂಡ್ರೆ, ಶ್ರೀಕಾಂತ ದಾನಿ, ವಿಶಾಲ ಪಟ್ನೆ, ಬಸು ಬಕ್ಕ, ಮಹಾವೀರ ಸ್ವಾಮಿ, ಬಸವರಾಜ ಬಿರಾದಾರ, ನಾಗೇಶ ಬಾವಗೆ, ಶ್ರೀಕಾಂತ ದಾನಿ, ಶಿವು ಬಾವಗೆ, ಹಾಗೂ ಧನ್ನೂರ ಗ್ರಾಮದ ಸರ್ವ ಭಕ್ತರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅದೇ ರೀತಿ ಮಹಿಳೆಯರಿಂದ ರಂಗೋಲಿ ಸ್ಪರ್ಧೆ ಕೂಡ ಹಮ್ಮಿಕೊಳ್ಳಲಾಯಿತು ಗ್ರಾಮದ ಮುಖ್ಯ ರಸ್ತೆಗಳಲ್ಲಿ ವಿಭಿನ್ನ ರೀತಿಯ ರಂಗೋಲಿ ಬಿಡಿಸುವ ಮೂಲಕ ಸಮಸ್ತ ಧನ್ನೂರ ಗ್ರಾಮದ ಭಕ್ತಾದಿಗಳು ಈ ಜಾತ್ರೆಯಲ್ಲಿ ಜಾತಿ ಭೇದ ಮರೆತು ಎಲ್ಲರೂ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಭಾಗವಹಿಸವ ಮೂಲಕ ಈ ವೀರಭದ್ರೇಶ್ವರ ಜಾತ್ರೆ ತನ್ನದೇ ಆದ ವಿಶೇಷತೆಯನ್ನು ನೀಡುತ್ತಾ ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ, ಹಾಗೆಯೇ ಪ್ರತಿ ವರ್ಷದಂತೆ ಈ ವರ್ಷವೂ ಅನ್ನದಾಸೋಹ ಪ್ರಸಾದ ವ್ಯವಸ್ಥೆಯನ್ನು ದಾನಿ ಪರಿವಾರದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ವರದಿಗಾರರು ಗಜಾನಂದ ಪಾಟೀಲ.



















