ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಪೂರ್ವಭಾವಿ ಸಭೆ

ಫೆಬ್ರುವರಿ 14ರಂದು ಹಾವೇರಿಯಲ್ಲಿ ನಡೆಯಲಿರುವ ಐತಿಹಾಸಿಕ ಭೂ ಗ್ಯಾರಂಟಿ ಸಾಧನಾ ಸಮಾವೇಶದ ಹಿನ್ನೆಲೆದಲ್ಲಿ, ಇಂದು ದಿನಾಂಕ 12-02-2026, ಬೆಳಿಗ್ಗೆ 11:00 ಗಂಟೆಗೆ, ಹಾವೇರಿ ನಗರ ಪಿ.ಬಿ. ರಸ್ತೆ ಅಜ್ಜಯನ ಗುಡಿ ಹತ್ತಿರ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ನಡೆಯಿತು.

ಈ ಮಹತ್ವದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶಿವಾನಂದ ಪಾಟೀಲ ಅವರ ನೇತೃತ್ವದಲ್ಲಿ ಕರೆಯಲಾಗಿದ್ದು, ಸಮಾವೇಶದ ಸಿದ್ಧತೆ, ಸಂಘಟನೆ ಹಾಗೂ ಯಶಸ್ಸಿಗೆ ಅಗತ್ಯವಾದ ಮಾರ್ಗಸೂಚಿಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಸಭೆಯಲ್ಲಿ ಪ್ರಮುಖವಾಗಿ ಹೆಸ್ಕಾಂ ನಿಗಮದ ಅಧ್ಯಕ್ಷರು, ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಸೈಯದ್ ಅಜಿಮಪೀರ ಖಾದ್ರಿರವರು ,ಕರ್ನಾಟಕ ಸರ್ಕಾರದ, ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಕುಮಾರ ನೀರಲಗಿ ಶ್ರೀ ಶಂಕರ ಮೆಹರವಾಡೆ (ವಕೀಲರು), ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಹಾವೇರಿ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ ದಾನಮ್ಮನವರು, ಕೆಪಿಸಿಸಿ ಜಿಲ್ಲಾ ವಕ್ತಾರರಾದ ಡಾ. ಸಂಜಯಗಾಂಧಿ, ಪು. ಸಂಜೀವಣ್ಣನವರು, ಶೇಖಪ್ಪ ಡಿ. ಮಾದರ – ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಸ್‌ಸಿ ಘಟಕ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಭೆಯಲ್ಲಿ ಫೆಬ್ರುವರಿ 14ರಂದು ನಡೆಯುವ ಸಾಧನಾ ಸಮಾವೇಶವನ್ನು ಐತಿಹಾಸಿಕ ಯಶಸ್ಸು ಮಾಡಬೇಕೆಂಬ ದೃಢ ಸಂಕಲ್ಪವನ್ನು ಎಲ್ಲಾ ನಾಯಕರು ವ್ಯಕ್ತಪಡಿಸಿದರು.

ವರದಿ ಬಸವರಾಜ ಎಸ್. ಎನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!