ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವಮೊಗ್ಗ – ತಾಳಗುಪ್ಪ ರೈಲು ಅಪಾಯಕಾರಿಯೇ ?

ಶಿವಮೊಗ್ಗ: ಜನ ಸಾಮಾನ್ಯರಿಗೆ , ವಯಸ್ಕರಿಗೆ, ವಿಕಲಾಂಗರಿಗೆ ಆರಾಮದಾಯಕ ಪ್ರಯಾಣ ವ್ಯವಸ್ಥೆಯೆಂದು ನಂಬಿಕೆಗೆ ಪಾತ್ರವಾಗಿರುವ ರೈಲು ಪ್ರಯಾಣ ಇಂದು ಸಾಮಾಜಿಕ ವ್ಯವಸ್ಥೆಯ ಅಧ: ಪತನದಿಂದಾಗಿ ದಿನಕ್ಕೊಂದು ಆಘಾತಕಾರಿ ಘಟನೆಗಳನ್ನು ಬಿಂಬಿಸುತ್ತಿವೆ. ರೈಲ್ವೆ ಇಲಾಖೆಯ ಉದ್ಯೋಗಿಗಲೀ ಇದರಲ್ಲಿ ಶಾಮೀಲಾಗಿ ಪ್ರಯಾಂಕಿರನ್ನು ದೋಚುತ್ತಿರುವ ಸಾಕ್ಷಿಗಳು ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದರೂ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಇಂತಹ ಪರಿಸ್ಥಿತಿಯಿರುವಾಗ ರೈಲ್ವೆ ಉದ್ಯೋಗಿಗಳ ಸಂಘಟನೆ ಏನು ಮಣ್ಣು ತಿನ್ನುತ್ತಿದೆ ಎಂದು ಪ್ರಶ್ನಿಸಲೇಬೇಕಾಗಿದೆ.

ಒಂದು ವರ್ಷದ ಹಿಂದೆ ಬೆಂಗಳೂರು ತಾಳಗುಪ್ಪ ರೈಲಿನ ಬೋಗಿಯಿಂದ ಶಿವಮೊಗ್ಗ ಮಹಿಳೆಯನ್ನು ದರೋಡೆ ಮಾಡಿ ರೈಲಿನಿಂದ ಬಿಸಾಕಿ ಹಾಕಿದ ಘಟನೆ ಮಾಸುವ ಮುನ್ನವೇ ಇದೀಗ ಮೊನ್ನೆ ಮಂಗಳವಾರ ಶಿವಮೊಗ್ಗದ ವಿದ್ಯಾನಗರ ರೈಲ್ವೆ ಸ್ಟೇಷನಲ್ಲಿ ಶಿವಮೊಗ್ಗ-ತಾಳಗುಪ್ಪ ರೈಲಿಗೆ ಹತ್ತಿ ದುಷ್ಕರ್ಮಿಯೊಬ್ಬ ಮಾರಕಾಸ್ತ್ರ ತೋರಿಸಿ ಪ್ರಯಾಣಿಕರನ್ನು ಸುಲಿಗೆ ಮಾಡಿದ್ದಾನೆ ಎಂದು ವರದಿ ತಿಳಿಸಿದ್ದು ರೈಲ್ವೆ ಪೋಲೀಸರ ನಾಲಾಯಕ್ಕು ತಾಣವನ್ನು ಬಹಿರಂಗ ಪಡಿಸಿದೆ.

ಇದಲ್ಲದೆ ವಿಕಲಚೇತನರ ವಿಶೇಷ ಬೋಗಿಯಲ್ಲಿ ದಿನ ನಿತ್ಯ ಅನಗತ್ಯ ಕಿರಿಕಿರಿಗಳಿದ್ದು ಅಲ್ಲಿ ಪೊಲೀಸ್ ಕಾವಲು ಇರಿಸಬೇಕೆಂಬ ಒತ್ತಾಯಕ್ಕೆ ಯಾರೂ ಕಿವಿಕೊಡುತ್ತಿಲ್ಲ ಇದರಿಂದಾಗಿ ಈ ಬೋಗಿಯನ್ನು ದುರುಪಯೋಗಿಸಲಾಗುತ್ತಿದೆಯಲ್ಲದೆ ಅನೈತಿಕ ಚಟುವಟಿಕೆಗಳಿಗೆ ರಹದಾರಿ ನೀಡುತ್ತಿದೆ ಎಂಬ ಗುಮಾನಿಯೂ ಬೆಳೆದಿದೆ.
ರೈಲ್ವೆ ಇಲಾಖೆ ತನ್ನಲ್ಲಿ ನ್ಯಾಯ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳುವ ತನಕ ರೈಲ್ವೆ ಬೋಗಿಗಳಲ್ಲಿ ನಡೆಯುವ ಹೇಯ ಕೃತ್ಯಗಳು ಯಾವತ್ತ್ತು ಮರೆಯಾಗುವುದಿಲ್ಲ ಎಂದು ಸ್ಪಷ್ಟಗೊಳ್ಳುವ ಮೊದಲೇ ರೈಲ್ವೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಇಂಡಿಯನ್ ದಿವ್ಯನ್ಗ್ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!