
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಆರಾಧ್ಯ ದೈವ, ಕಲಿಯುಗದ ಕಾಮಧೇನು, ಪವಾಡ ಪುರುಷನೆಂದು ಕರ್ನಾಟಕದಲ್ಲಿ ಪ್ರಖ್ಯಾತಿ ಪಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮೂರ್ತಿಯು ದೇವಸ್ಥಾನದಿಂದ ದ್ವಾರಬಾಗಿಲ ಬಳಿ ಬಂದ ತಕ್ಷಣ ಹರಿಜನ ಮಹಿಳೆಯಿಂದ ಗಿಣ್ಣದ ನೈವೇದ್ಯ ನೀಡಿದ ನಂತರ ಅಲ್ಲಿಂದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥವನ್ನೇರಿ ಮೂಲ ನಕ್ಷತ್ರ ಕೂಡಿದ ತಕ್ಷಣ ರಥವು ತಾನಾಗಿಯೇ ಒಂದು ಹೆಜ್ಜೆ ಉರುಳುತ್ತದೆ ಮತ್ತೆ ಮುಂದುವರೆದು ಸಾಗುತ್ತದೆ.
ಈ ಸಂದರ್ಭದಲ್ಲಿ ಎರಡನೇ ವರ್ಷ ರಥದ ಹಗ್ಗ ತುಂಡಾಗಿ 26 ನಿಮಿಷಗಳ ಕಾಲ ತಡವಾಯಿತು. ಹಗ್ಗ ಸರಿಪಡಿಸಿದ ನಂತರ ಸಕಲವಾದ್ಯಗಳಾದ ಸಮಳ ನಂದಿಕೋಲು ಮೇಳ ಮೂಲಕ ರಥವು ಮುಂದುವರಿಯಿತು.
ಈ ಸ್ವಾಮಿಯ ರಥೋತ್ಸವಕ್ಕೆ ನೂರಾರು ಕಿ.ಮೀ ದೂರದ ಅನೇಕ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಭಕ್ತ ಸಾಗರ ಹರಿದು ಬರುತ್ತದೆ ಈ ಸಂದರ್ಭದಲ್ಲಿ ಪೊಲೀಸರು ಬಂದೋಬಸ್ತ್ ನೀಡಿದರು.
ವರದಿ- R H ಕೊಟ್ರೇಶ, ಕೊಟ್ಟೂರು ತಾಲ್ಲೂಕು.



















