ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿದ್ದರಾಮಯ್ಯನಗರ ಹೆಸರಿನಲ್ಲಿ ನಿವೇಶನ ಹಂಚಿಕೆಯಲ್ಲಿ ಮೋಸ : ಕ್ರಮಕ್ಕೆ ಎಸ್.ಕೆ.ದಾನಕೈ ಒತ್ತಾಯ

ಹೋರಾಟಗಾರರು, ಬುದ್ದಿ ಜೀವಿಗಳು ಮೌನವಾಗಿ ಕೈ ಕಟ್ಟಿಕೊಂಡು ಕುಳಿತರೆ ಭ್ರಷ್ಟಚಾರಿಗಳು ಹುಟ್ಟುತ್ತಾ ಇರುತ್ತಾರೆ ಭ್ರಷ್ಟಚಾರ ತಡೆಗಟ್ಟಲು ಯುವ ಸಮುದಾಯ ಧೈರ್ಯದಿಂದ ಮುನ್ನುಗ್ಗಬೇಕು ಅಂದಾಗ ಭ್ರಷ್ಟಚಾರ ದೂರ ತಳ್ಳುವದಕ್ಕೆ ಸಾದ್ಯವಾಗುತ್ತದೆ : ಶರಣಬಸಪ್ಪ ದಾನಕೈ ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಲಬುರ್ಗಾ ತಾಲೂಕು ಘಟಕ.

ಯಲಬುರ್ಗಾ :ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಲಬುರ್ಗಾದ ಮಲಕ ಸಮುದ್ರ ರಸ್ತೆಗೆ ಇರುವ ಶ್ರೀ ಸಿದ್ದರಾಮಯ್ಯ ನಗರದ ಸರ್ವೇ ನಂಬರ ೨೨೨ ಮತ್ತು ಸರ್ವೆ ನಂಬರ್ ೨೨೪ ರಲ್ಲಿ ಹಾಲುಮತ ಸಮಾಜದ ಹೆಸರಿನಲ್ಲಿ ನಿವೇಶನಗಳು ಮಾಯವಾಗಿವೆ, ಭ್ರಷ್ಟಾಚಾರದಲ್ಲಿ ಭಾಗಿಯಾದ ತಪ್ಪಿತಸ್ಥರ ಮೇಲೆ ಬೆಂಗಳೂರಿನ ಉಪ ಲೋಕಯುಕ್ತರು ದಾಳಿ ನಡೆಸಿ ತನಿಖೆ ಮಾಡಿ ಹಾಲುಮತ ಸಮಾಜದ ಸಂಘ, ಸಂಸ್ಥೆಗಳಿಗೆ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ( ವಾಸುದೇವ ಮೇಟಿ ಬಣದ) ಯಲಬುರ್ಗಾ ತಾಲೂಕಾ ಅಧ್ಯಕ್ಷ ಶರಣಬಸಪ್ಪ ದಾನದಕೈ ಅವರು ಅಕ್ಟೋಬರ್ .೩೦ ರಂದು ಉಪ ಲೋಕಯುಕ್ತರಿಗೆ ದೂರನ್ನು ಸಲ್ಲಿಸಿದ್ದಾರೆ.
ದೂರಿನಲ್ಲಿ ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಮತ್ತು ಸಮಾಜದ ಸಂಘ ಸಂಸ್ಥೆಗಳಿಗೆ ನಿವೇಶನಗಳನ್ನು ವಿತರಿಸಿ, ಹಣ ಕೊಟ್ಟಿರುವ ಸದಸ್ಯರಿಗೆ ೩೦× ೪೦ ಸೈಜ್ ಪ್ಲಾಟುಗಳನ್ನು ಹಂಚಿಕೆ ಮಾಡಿಕೊಡಬೇಕು ಎಂದು ನಿರ್ಧಾರ ಮಾಡಲಾಗಿತ್ತು, ಸರ್ವೆ ನಂಬರ ೨೨೨ ರ ರೇವಣೆಪ್ಪ ಹಿರೇಕುರಬರ ಇವರ ಹೊಲವನ್ನು ಶರಣಬಸಪ್ಪ ದಾನಕೈ ಇವರಿಂದ ಒಂದು ಲಕ್ಷ ಹಣ ಪಡೆದುಕೊಂಡು ೧೧/೦೯/೨೦೦೧ ರಂದು ವಚನಪತ್ರ ಬರೆಸಿದ್ದಾರೆ , ಆದರೆ ವ್ಯವಹಾರದಲ್ಲಿ ಭಾಗವಹಿಸಿದ ಹನುಮಂತಪ್ಪ ಕೊಂಡಗುರಿ ಶಿಕ್ಷಕರು ಲಿಂಗನಬಂಡಿ ಸಾ/ ಹಿರೇ ಅರಳಿಹಳ್ಳಿ ಇವರು ತಮ್ಮ ಸಹೋದರ ಶರಣಪ್ಪ ಕೊಂಡುಗುರಿ ಸಾ/ ಹಿರೇಅರಳಿಹಳ್ಳಿ ಇವರ ಹೆಸರಿಗೆ ೨೨೨ ರ ಸರ್ವೇ ನಂಬರ ಭೂಮಿಯನ್ನು ೨೯/೦೫/೨೦೦೧ ರಂದು ರಂದು ನೋಂದಣಿ ಮಾಡಿಸಿಕೊಂಡು ನಿವೇಶನ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ ಮತ್ತು ೨೨೪ ರ ಸರ್ವೇ ನಂಬರ ಪೂಜಾರಪ್ಪ ಬಂಡಿಹಾಳ ಇವರ ಜಮೀನನ್ನು ಮಲ್ಲಪ್ಪ ಜೋಗಿನ ಇವರಿಗೆ ೦೫/೧೧/೧೯೯೯ ರಂದು ಖರೀದಿ ವಚನ ಪತ್ರ ಬರೆಯಲಾಗಿತ್ತು ಆದರೆ ನೊಂದಣಿ ಕಾರ್ಯಗಳು ಬೇಗನೆ ಆಗಲಿ ಎನ್ನುವ ದೃಷ್ಟಿಯಿಂದ ೨೦/೧೦/೨೦೦೧ ರಂದು ನಯಾಪೈಸೆ ಕೊಡಲಾರದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ, ಹಾಗೂ ಇಂದಿನ ಹಾಲಿ ಯಲಬುರ್ಗಾ ತಾಲೂಕು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೆರಿಬಸಪ್ಪ ನಿಡುಗುಂದಿ ಇವರ ಹೆಸರಿಗೆ ಖರೀದಿ ಮಾಡಿ ಎನ್.ಎ ಮಾಡಿಸಿ ಪ್ಲಾಟುಗಳನ್ನು ವಿತರಿಸಬೇಕೆಂದು ಹಾಲುಮತ ಸಮಾಜದ ಹಿರಿಯರು ತೀರ್ಮಾನಿಸಿದ್ದರು ಇದರ ಮುಂದಾಳತ್ವವನ್ಬು ಸೋಮಶೇಖರ ಹರ್ತಿ ನಿವೃತ್ತ ಶಿಕ್ಷಕರು ಭಾಗ್ಯನಗರ ಹಾಗೂ ಮಲ್ಲಪ್ಪ ಜೋಗಿನ ಇವರು ವಹಿಸಿದ್ದರು. ಆದರೆ ಫ್ಲಾಟುಗಳನ್ನು ಸರಿಯಾಗಿ ವಿತರಣೆ ಮಾಡಲಾರದೆ ಭ್ರಷ್ಟಾಚಾರ ಮಾಡಿದ್ದಾರೆ. ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೊಲೀಸ ಪಾಟೀಲ ಇವರು ಬಗೆ ಹರಿಸುವುದಾಗಿ ಹೇಳಿ ತಾವು ಹುಲಿಯಂತೆ ಗರ್ಜಿಸ ಬೇಕಾದವರು ಈಗ ಹೊಸ ಮನೆ ನಿರ್ಮಿಸಿಕೊಂಡು ವಿಷಯದ ಬಗ್ಗೆ ಮೌನವಾಗಿದ್ದಾರೆ ಏಕೆ? ಎಂಬ ಪ್ರಶ್ನೆ ಕಾಡುತ್ತಿದೆ, ಭ್ರಷ್ಟಚಾರ ಯಾರಿಂದ ಆಗಿದೆ ಎಂಬುದನ್ನು ತನಿಖೆ ನಡೆಸಬೇಕು . ಇದರಲ್ಲಿ ಶ್ರೀ ಕನಕದಾಸ ಯುವಕ ಮಂಡಳ, ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘ, ಯಲಬುರ್ಗಾ ತಾಲೂಕು ಕುರುಬರ ಸಂಘ, ಕನಕ ಭವನ ಹಾಗೂ ಪ್ಲಾಟುದಾರರಾದ ಶರಣಬಸಪ್ಪ ದಾನದಕೈ ಯಲಬುರ್ಗಾ, ದೇವಪ್ಪ ಭೀಮಪ್ಪ ಬಾವಿಕಟ್ಟಿ ಭಟಪನಹಳ್ಳಿ ಪುಷ್ಪಲತಾ ಹನುಮಂತಪ್ಪ ದಾನಕೈ ಯಲಬುರ್ಗಾ, ಗವಿಸಿದ್ದಪ್ಪ ಹುಜರತ್ತಿ, ಸರೋಜಮ್ಮ ದೊಡ್ಡಮನಿ,ಬಿ.ಎಂ.ತುಗ್ಗಲಡೋಣಿ ಹಾಗೂ ಇತರ ಜನರಿಗೆ ಮೋಸ ಮಾಡಿದ್ದಾರೆ , ಸಮಾಜದಲ್ಲಿ ತಪ್ಪು ಮಾಡುವದು ತಪ್ಪಲ್ಲ ಮಾಡಿದ ತಪ್ಪನ್ನು ತಪ್ಪಿಲ್ಲ, ತಪ್ಲಿಲ್ಲಾ ಎಂದು ವಾದಿಸುತ್ತೇವೆ ಅದು ದೊಡ್ಡ ತಪ್ಪು ಅಂತಹ ತಪ್ಪುಗಳನ್ನು ತಿದ್ದಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ “ತಿಳಿದು ಬದುಕ ಬೇಕಾದವರು ತುಳಿದು ಬದುಕುತ್ತಿದ್ದಾರೆ,” “ಬೇಲಿಯೆ ಎದ್ದು ಹೊಲವನ್ನು ಮೇದಂತೆ ಆಗಿದೆ” ” ಕುರುಬ ಸಮಾಜದ ಮುಖಂಡರಿಂದ ಕುರುಬರಿಗೆ ಅನ್ಯಾಯವಾಗಿದೆ” ಇವರು ಹಾಲುಮತ ಸಮಾಜದ ಸಂಘ ಸಂಸ್ಥೆಗಳ ಪ್ಲಾಟುಗಳನ್ನು ಗುಳುಂ ಮಾಡಿದ್ದಾರೆ ,ಸಮಾಜಕ್ಕಾಗಿ ಉಳಿಸಿದ ಪ್ಲಾಟುಗಳನ್ನು ಬೇರೆಯವರಿಗೆ ಮಾರಿ ಹಂಚಿಕೆ ಮಾಡಲಾರದೆ ಮೋಸ ಮಾಡಿದ್ದಾರೆ, ತಪ್ಪಿತಸ್ಥರ ಮೇಲೆ ಕ್ರಮ ತಗೆದುಕೊಂಡು ತನಿಖೆ ಮಾಡಿ ನಮ್ಮ ಸಮಾಜಕ್ಕೆ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಉಪಲೋಕಯುಕ್ತರಲ್ಲಿ ಶರಣಬಸಪ್ಪ ಕಲ್ಲಪ್ಪ ದಾನದಕೈ ಅವರು ದೂರು ಸಲ್ಲಿಸಿ ಮನವಿ ಸಲ್ಲಿಸಿದ್ದಾರೆ.

ಹಿನ್ನಲೆ ಏನು ?

ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಸರ್ವೆ ನಂಬರ ೨೨೪ ರ ಜಮೀನು ಒಂದು ಎಕರೆ ಹನ್ನೊಂದು ಗುಂಟೆ ಜಮೀನು ಹಾಗೂ ಸರ್ವೆ ನಂಬರ ೨೨೨ ರ ಜಮೀನು ಮಾಲೀಕರಿಗೆ ಹಣ ಕೊಟ್ಟು ಖರೀದಿ ಮಾಡಿರುತ್ತದೆ ಆದರೆ ಎನ್.ಎ. ಮಾಡಿಸಿ ಅದರಲ್ಲಿ ಸಮಾಜಕ್ಕೆ ಪ್ರಥಮ ಪ್ರಾಮುಖ್ಯತೆ ಕೊಟ್ಟು ಇತರ ಪ್ಲಾಟುಗಳನ್ನು ಹಣ ಕೊಟ್ಟಿರುವ ಸದಸ್ಯರಿಗೆ ಡ್ರಾ ಮಾಡಿ ವಿತರಿಸಬೇಕು ಎಂದು ತೀರ್ಮಾನಿಸಿ ಹಿರಿಯರು ಮತ್ತು ಸದಸ್ಯರು ಕೂಡಿಕೊಂಡು ಅವರ ಹೆಸರಿಗೆ ಎನ್.ಎ ಮಾಡಿದ್ದಾರೆ ಇಲ್ಲಿಯವರೆಗೆ ಲೆಕ್ಕ ಪತ್ರಗಳನ್ನು ನೀಡಿಲ್ಲ, ಇದರ ಬಗ್ಗೆ ವಾರ , ಪಾಕ್ಷಿಕ , ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದರೂ ಸುಮ್ಮನಿದ್ದಾರೆ.
ಸರ್ವೆ ನಂಬರ ೨೨೨ ರ ಜಮೀನು ಮಾಲಿಕರು ಇವರಿಗೆ ಸಂಚಗಾರ ಒಂದು ಲಕ್ಷ ರೂ. ಕೊಟ್ಟವರು ಯಾರು? ಇದನ್ನು ತಿಳಿಯಲಾರದೆ ಪ್ರಥಮ ಹಂತದಲ್ಲಿ ನಯಾ ಪೈಸೆ ಕೊಡಲಾರದವರು ಪ್ಲಾಟುಗಳನ್ನು ನುಂಗಿ ನೀರು ಕುಡಿದಿದ್ದಾರೆ, ತಾಳಿದವನು ಬಾಳಿಯಾನು ಎನ್ನುವಂತೆ ತಾಳ್ಮೆಯಿಂದ ಸಹಿಸಿಕೊಂಡು ಬಂದಿರುವೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಾರೆ, ಇವರದು ತಪ್ಪಿಲ್ಲವೆಂದರೆ ಇದುವರೆಗೂ ಬಹಿರಂಗವಾಗಿ ಸಭೆಯಲ್ಲಿ ಲೆಕ್ಕ ಪತ್ರಗಳನ್ನು ಏಕೆ ನೀಡಲಿಲ್ಲ ? ಇಂತಹ ಭ್ರಷ್ಟಚಾರದಲ್ಲಿ ನಿರತರಾದ ವ್ಯಕ್ತಿ ಹಾಗೂ ಇವರ ಕುಟುಂಬದವರ ಮನೆಯನ್ನು ಲೋಕಯುಕ್ತರು ಸಮಯ ನೋಡಿ ದಾಳಿ ಮಾಡಿದಾಗ ಇವರ ಭ್ರಷ್ಟಾಚಾರ ಹೊರ ಬರಲು ಸಾಧ್ಯವಾಗುತ್ತದೆ ಎಂದು ರೈತ ಮುಖಂಡ ಹೊರಾಟಗಾರ ಶರಣಬಸಪ್ಪ ದಾನಕೈ ಅವರು ಮಾದ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ, “ಸಮಾಜ ದೇಶ ನನಗೆ ಏನು ಕೊಟ್ಟಿದೆ ಎನ್ನುವದಕ್ಕಿಂತ ಸಮಾಜ ದೇಶಕ್ಕಾಗಿ ನಾನು ಏನು ಕೊಟ್ಟೆ ,ನನ್ನ ಕೊಡುಗೆ ಏನು” ಎಂಬುದನ್ನು ತಿಳಿಯಾಲಾರದವರು ಇವರು ಸಮಾಜ ಉದ್ದಾರಕರೆ? ಯುವಕರೆ ಜಾಗೃತರಾಗಿರಿ, ಬಾಯಿ ಇದ್ದರೂ ಮೂಖರಂತೆ, ಕಣ್ಣು ಇದ್ದರೂ ಕುರುಡರಂತೆ, ಕಿವಿಯಿದ್ದರೂ ಕಿವಡರಂತೆ ಆಗಿದೆ ನಮ್ಮ ಸಮಾಜದ ಪರಿಸ್ಥಿತಿ ಇನ್ನು ಮುಂದೆ ಭ್ರಷ್ಟಚಾರಿಗಳನ್ನು ಯಾವುದೇ ಸಭೆ ಸಮಾರಂಭಗಳಲ್ಲಿ ಕರೆಯಬೇಡಿ , ಮುಂದಿನ ದಿನಮಾನದಲ್ಲಿ ಇವರಿಗೆ ತಕ್ಕ ಪಾಠವನ್ನು ಕಲಿಸಬೇಕು ಅಂದಾಗ ಇವರು ಜಾಗೃತಿ ಹೊಂದಲು ಸಾಧ್ಯ, ನಾವೆಲ್ಲರೂ ಹೋರಾಟದ ಹಾದಿಯಲ್ಲಿ ಸಾಗಿದಾಗ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ,ನಿಮ್ಮದು ತಪ್ಪಿಲ್ಲವೆಂದರೆ ಫೆ. ೧೫ ರಂದು ಶ್ರೀ ಬೀರಲಿಂಗೇಶ್ವರ ಜಾತ್ರೆಯಲ್ಲಿ ಜರುಗುವ ಬಹಿರಂಗ ಸಭೆಯಲ್ಲಿ ಶಾಂತಿ ರೀತಿಯಿಂದ ಲೆಕ್ಕ ಪತ್ರವನ್ನು ವಿತರಿಸಬೇಕು ಎಂದು ಹಾಲುಮತ ಸಮಾಜದ ಜಿಲ್ಲಾ ಮುಖಂಡ ಶರಣಬಸಪ್ಪ ದಾನಕೈ ಅವರು ತಿಳಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!