ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಿಂದೂ ದೇವತೆಗಳನ್ನು ಹೀಯಾಳಿಸಿ ಹೇಳಿಕೆ ಕೊಟ್ಟವನ ಮೇಲೆ ಪ್ರಕರಣ ದಾಖಲಿಸಲು ದೂರು ಸಲ್ಲಿಕೆ

ಬೀದರ್ :ಇತ್ತೀಚೆಗೆ ನಮ್ಮ ಹಿಂದೂ ಧರ್ಮದ ಆರಾಧ್ಯ ದೈವ ಪ್ರಭು ಶ್ರೀರಾಮ, ಶ್ರೀ ಕೃಷ್ಣ ಹಾಗೂ ಮಹಾತ್ಮಾ ಗಾಂಧೀಜಿ ರವರ ಬಗ್ಗೆ ಹೀಯಾಳಿಸಿ, ಅಸಭ್ಯವಾಗಿ ಮಾತನಾಡಿ ಹೇಳಿಕೆ ಕೊಟ್ಟ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದ್ದು ಹೇಳಿಕೆ ಕೊಟ್ಟ ಭಾಲ್ಕಿ ತಾಲೂಕಿನ ಅಟರಗಾ ಗ್ರಾಮದ ಕಾಳಿದಾಸ ತಂದೆ ಅರ್ಜುನ ಸೂರ್ಯವಂಶಿ ಎನ್ನುವವನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ
” ದ್ವೇಷದ ಭಾಷಣ ” ಧಾರ್ಮಿಕ ನಿಂದನೆ,
ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು (ಕಾಯ್ದೆ ೨೯೯),
ಧರ್ಮಗಳ ಮಧ್ಯೆ ವೈಷಮ್ಯ ಬಿತ್ತುವುದು (ಕಾಯ್ದೆ ೧೯೬,೧೯೭),
ಸಾರ್ವಜನಿಕ ಅಶಾಂತಿಗೆ ಪ್ರಚೋದನೆ (ಕಾಯ್ದೆ೩೫೩),
ರೈಲ್ವೆ ಆವರಣದಲ್ಲಿ ಅಸಭ್ಯ ವರ್ತನೆ,
ಸಾರ್ವಜನಿಕರಿಗೆ ಕಿರಿಕಿರಿ (ರೈಲ್ವೆ ಕಾಯ್ದೆ ೧೪೫/೧೯೮೯)
ಆಕ್ಷೇಪಾರ್ಹ ವಿಷಯಗಳ ಪ್ರಸಾರ (ಮಾಹಿತಿ ತಂತ್ರಜ್ಞಾನ ೨೦೦ರ ಕಾಯ್ದೆ 67) ಅಡಿಯಲ್ಲಿ
ಪ್ರಕರಣ ದಾಖಲಿಸಿ ಈ ಶಿಕ್ಷಾರ್ಹ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಬೇಕೆಂದು ವಿನಂತಿಸಿ ಉಪ ನಿರೀಕ್ಷಕರು, ಹಾಗೂ ವೃತ್ತ ನಿರೀಕ್ಷಕರು ಬಸವಕಲ್ಯಾಣ ನಗರ ಆರಕ್ಷಕ ಠಾಣೆಯಲ್ಲಿ ದೂರನ್ನು ದಾಖಲಿಸಲಾಯಿತು.

ಈ ಸಂಧರ್ಭದಲ್ಲಿ ರವಿ ನಾವದ್ಗೇಕರ ಸಂಯೋಜಕರು ಬಜರಂಗದಳ ಬಸವಕಲ್ಯಾಣ ,
ಶ್ರೀಶೈಲ ವಾತಡೆ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್ ಬಸವಕಲ್ಯಾಣ ,
ಪ್ರಕಾಶ ನಿರಾಳೆ ನಗರ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಬಸವಕಲ್ಯಾಣ ,
ವಿನೋದ ಬಡಗೆಕರ ಗೋರಕ್ಷ ಪ್ರಮುಖರು ವಿಶ್ವ ಹಿಂದೂ ಪರಿಷತ್ ,
ಸಚಿನ್ ಗರುಡಕರ ಸಹ ಸಂಯೋಜಕರು ಬಜರಂಗದಳ ಬಸವಕಲ್ಯಾಣ ,
ರವಿ ಜಾಧವ ಹಾಗೂ ಇನ್ನಿತರರು ಭಾಗಿಯಾಗಿದ್ದರು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!