ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಮ್ಮಿಗನೂರು ಗ್ರಾಮದಲ್ಲಿ ಜಡೆಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ.

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೆಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ರಥವನ್ನು ನಿರ್ಮಿಸುವ ಕುರಿತು ಸಾರ್ವಜನಿಕರೊಂದಿಗೆ ಭಕ್ತರೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಗ್ರಾಮದ ಮುಖಂಡರಾದ ಬೇರ್ಗಿ ಮಹೇಶಗೌಡ ಮಾತನಾಡಿ ಜಡೆಸಿದ್ದೇಶ್ವರ ಎಮ್ಮಿಗನುರು ಗ್ರಾಮದ ದೈವಪುರುಷ, ಅವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಹೊಸ ರಥವನ್ನು ನಿರ್ಮಿಸಬೇಕಿದೆ. ಈ ಎಲ್ಲಾ ಕಾರ್ಯಗಳನ್ನು ನೆರವೇರಿಸಲು ಎಮ್ಮಿಗನೂರು ಗ್ರಾಮದ ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಬೇಕಿದ್ದು, ಎಲ್ಲರ ಒಪ್ಪಿಗೆ ಅಗತ್ಯವಿದೆ ಎಂದರು.
ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಮುದಾಯಗಳ ಸದ್ಬಕ್ತರು ಸಮಾಲೋಚನಾ ಸಭೆಯ ಎಲ್ಲಾ ತೀರ್ಮಾನಗಳಿಗೆ ಸಮ್ಮತಿ ಸೂಚಿಸಿದರು. ನಂತರ ಸಮಿತಿಗೆ ಸದಸ್ಯರನ್ನುಆಯ್ಕೆ ಮಾಡುವಂತೆ ಒಪ್ಪಿಗೆ ಸೂಚಿಸಿದರು.
ಸಮಾಲೋಚನಾ ಸಭೆಯಲ್ಲಿ ಘನಮಠಸ್ವಾಮಿ, ಎಚ್.ರುದ್ರಪ್ಪ, ಎಮ್ಮೆ ತಿಪ್ಪಯ್ಯ, ಮೀನುಕೆರೆ ಶೇಖಣ್ಣ,ಬಜಾರ ವೆಂಕಟೇಶ್, ಅಗಲೂರು ಬಸಪ್ಪ, ವಡ್ಡರ ವಿರೇಶ್, ನಾಯಕರ ಸಿದ್ದಪ್ಪ, ಟಿ.ಪಿ.ಜಡೆಪ್ಪ, ಹೆಬ್ಬಟ್ಟದ ರಾಮಾಂಜಿನಿ, ಗಾದ್ಲಿ ನಾಗರೆಡ್ಡಿ, ಎಳ್ಳಾರ್ಥಿ ರಾಘವೇಂದ್ರರೆಡ್ಡಿ, ಮರವಾಡಿ ಗಾದಿಲಿಂಗಪ್ಪ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!