ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ಸನ್ಮಾರ್ಗದ ದುಂಬಿ ‘ ಪುಸ್ತಕ ವಿಮರ್ಶೆ.

ಇತ್ತೀಚೆಗೆ ತುಮಕೂರು ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಬಿಡುಗಡೆಯಾದ ಪುಸ್ತಕ ಆತ್ಮೀಯರಾದ ಸಹೋದರ ಶ್ರೀ ಮುತ್ತು ಸರ್ ರವರು ರಚಿಸಿದ ಕವನ ಸಂಕಲನ ‘ಸನ್ಮಾರ್ಗದ ದುಂಬಿ’ ಅತ್ಯಂತ ಸರಳವಾಗಿ ಬಿಡುಗೊಡೆಗೊಳಿಸಿದ್ದು ಎಲ್ಲರಿಗೂ ಇದೊಂದು ಮಾದರಿ.
ಮನುಷ್ಯನ ಅಂತರಂಗದ ಭಾವನೆಯನ್ನು ವ್ಯಕ್ತಪಡಿಸುವ ಸಾಧನಗಳು ಈ ಕವನ ಸಂಕಲನಗಳು. ಸನ್ಮಾರ್ಗದ ದುಂಬಿ ಕವನ ಸಂಕಲನದಲ್ಲಿ 69 ಕವನಗಳಿದ್ದು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಮುತ್ತು ಸರ್ ರವರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ. ಅವರು ಅಲ್ಲಿಂದಲೇ ಒಳ್ಳೆಯ ಮೌಲ್ಯಗಳನ್ನು ಕಲಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
ಹೀಗಾಗಿ ಪ್ರಥಮವಾಗಿ ತಮ್ಮ ಆರಾಧ್ಯ ದೈವ ಸಿದ್ಧಗಂಗಾ ಶ್ರೀಗಳ ಕುರಿತು ಬರೆದ ಕವನ ಪ್ರಾರಂಭದಲ್ಲೇ ಭಕ್ತಿ ಭಾವದ ಸಿಂಚನವಾಗುತ್ತದೆ. ನಂತರ ಪರಿಸರದ ಕಾಳಜಿಯ ಬಗ್ಗೆ ತಿಳಿಸುತ್ತಾ ಸಾಲುಮರದ ತಿಮ್ಮಕ್ಕನವರನ್ನು ನೆನೆದಿದ್ದಾರೆ ಹತ್ತರ ಮಗುವೇ ಎಚ್ಚರವಾಗಿರು ಎಂಬ ಕವನದಲ್ಲಿ ಯಾವ ರೀತಿಯಾಗಿ ಮಕ್ಕಳು ಶಿಕ್ಷಣ ಕಲಿಯಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದಾರೆ. ಅನ್ನ ನೀಡುವ ಅನ್ನದಾತನ ಬಗ್ಗೆ ನಾವೆಲ್ಲರೂ ಕಾಳಜಿ ತೋರಬೇಕು ಎಂಬುದನ್ನು ಅರುಹಿದ್ದಾರೆ.
ತಂದೆ-ತಾಯಿಯರ ಬಗ್ಗೆ ವಿಶೇಷವಾಗಿ ಪ್ರೀತಿ ಕಾಳಜಿ ಗೌರವ ಪೂರ್ವಕವಾಗಿ ಬರೆದ ಕವನವಂತೂ ಮನಸ್ಸಿಗೆ ನಾಟುವಂತಿದೆ. ಹೆತ್ತವರನ್ನು ಎಂದಿಗೂ ನೋಯಿಸಬೇಡಿ ಎನ್ನುವ ಸಂದೇಶ ನೀಡಿದ್ದಾರೆ. ಜೊತೆಗೆ ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಕವನದಲ್ಲಿ ಕೂಡಿ ಬಾಳುವ ಸಂಸ್ಕೃತಿಯನ್ನು ಕಲಿಸಿ ಕೊಟ್ಟಿದ್ದಾರೆ. ಸಮಯದ ಬಗ್ಗೆ ಬರೆಯುತ್ತಾ ಹೊತ್ತು ಹೋದರೆ ಮತ್ತೆ ಬಾರದು ಎಂಬಂತೆ ಅಮೂಲ್ಯ ಸಮಯವನ್ನು ಗೌರವಿಸಿ ಎಂಬ ಕಿವಿಮಾತನ್ನು ಹೇಳಿದ್ದಾರೆ.
ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ ಇವರು ಹೆಣ್ಣು ಸಮಾಜದ ಕಣ್ಣು ಎನ್ನುವ ಕವನದಲ್ಲಿ ಹೆಣ್ಣಿನ ಮನಸ್ಸಿಗೆ ನೋವು ಕೊಡಬೇಡಿ ಎನ್ನುವ ಮೌನ ಸಂದೇಶವಿದೆ. ಪಾಪ ತುಂಬಿದ ಈ ಲೋಕಕ್ಕೆ ಹೇ ಭಗವಂತ ಒಮ್ಮೆ ಧರೆಗೆ ಬಾ ಎನ್ನುವ ಪೂಜ್ಯ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇಶ ಕಾಯುವ ಸೈನಿಕರಿಗೆ, ಗುರುಗಳಿಗೆ ಕೃತಜ್ಞತಾ ಭಾವದಿಂದ ನೆನೆದಿದ್ದಾರೆ.ಬದುಕು ಎನ್ನುವುದು ಪ್ರತಿಯೊಬ್ಬರ ಕಲ್ಪನೆಯಲ್ಲಿ ಯಾವ ರೀತಿಯಾಗಿರುತ್ತದೆ ಎನ್ನುವುದನ್ನು ಬದುಕಿನ ಅರ್ಥ ನಾನಾರ್ಥದಲ್ಲಿ ತುಂಬಾ ಸೊಗಸಾಗಿ ತಿಳಿಸಿದ್ದಾರೆ.
ನಾವೆಲ್ಲರೂ ಸರಿಯಾದ ಮಾರ್ಗದಲ್ಲಿ ನಡೆದು ಸಾಧನೆಯ ಕನಸನ್ನು ನನಸಾಗಿಸಿ ಸ್ಪೂರ್ತಿಯಾಗಬೇಕೆಂದು ಸನ್ಮಾರ್ಗದ ದುಂಬಿ ಕವನದಲ್ಲಿ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ನನಗೆ ಅತ್ಯಂತ ಮೆಚ್ಚುಗೆಯಾದ ಕವನವೆಂದರೆ ಗುರುಶಿಷ್ಯರ ಬಾಂಧವ್ಯ. ಗುರುವನ್ನು ಮೀರಿ ಶಿಷ್ಯ ಬೆಳೆಯಬೇಕು ಎನ್ನುವ ಗುರುವಿನ ಆಶಯ ಬಹಳ ಅಚ್ಚುಕಟ್ಟಾಗಿ ಸೊಗಸಾಗಿ ಅದರ ಬಗ್ಗೆ ತಿಳಿಸಿದ್ದಾರೆ.
ಕೊನೆಯದಾಗಿ ಜೀವನ ಹೇಗಿರಬೇಕು? ಇತಿಹಾಸದ ಪುಟದಲ್ಲಿ ನಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಿರಲಿ ಎಂಬ ಆಶಯ ಹೊಂದಿದ್ದಾರೆ..ನಮ್ಮ ಕನಸಿನ ಶಾಲೆ ನಾಡಿಗೆ ಮಾದರಿಯಾಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಹೀಗೆ‌ ಓದುತ್ತಾ
ಹೋದಂತೆ ಎಲ್ಲವನ್ನೂ ಸರಳವಾಗಿ ಓದಿಸಿಕೊಂಡು ಹೋಗುತ್ತವೆ.
ತಮ್ಮದೇ ಸರಳ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಬರೆದ ಕವನಗಳು ಓದುಗರ ಜೀವನಕ್ಕೆ ಬಹಳ ಹತ್ತಿರವಾಗಿವೆ.
ಮುತ್ತು ಸರ್ ಅವರ ಈ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ.ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಹೊರಹೊಮ್ಮಲಿ ಎಂದು ಆಶಿಸುವೆ.

  • ಸುನಂದಾ ಪುರಾಣಿಕ ಹಳಿಯಾಳ, ಉತ್ತರ ಕನ್ನಡ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!