ಬೀದರ್/ ಚಿಟಗುಪ್ಪಾ: ಬಸವಾತ್ಮಜೆ ಮಹಿಳಾ ಸಹಕಾರಿ ಸಂಘದ ಮುಖ್ಯ ಉದ್ದೇಶವು ಲಾಭ ಗಳಿಸುವುದಕ್ಕಿಂತ ಹೆಚ್ಚಾಗಿ, ತಮ್ಮ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಕಾಪಾಡುವುದು. ಪರಸ್ಪರ ಸಹಕಾರದ ಮೂಲಕ ಆರ್ಥಿಕ ಸಬಲೀಕರಣ, ಶೋಷಣೆಯಿಂದ ಮುಕ್ತಿ, ಮತ್ತು ಸಮುದಾಯದ ಅಭಿವೃದ್ಧಿಯನ್ನು ಉತ್ತೇಜಿಸುವುದು ಬಸವಾತ್ಮಜೆ ಮಹಿಳಾ ಸಹಕಾರಿ ಸಂಘದ ಪ್ರಮುಖ ಧ್ಯೇಯವಾಗಿದೆ. ಜೊತೆಗೆ ಕೇವಲ ಲಾಭ ಗಳಿಸುವುದಕ್ಕಿಂತಲೂ ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸಿ, ಉತ್ತಮ ಸೇವೆ ನೀಡುವ ಗುರಿ ಹೊಂದಿದೆ
ಎಂದು ಬಸವಾತ್ಮಜೆ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶರಣೆ ಲಾವಣ್ಯದೇವಿ ಮಾತಾಜಿ ಹೇಳಿದರು.
ಪಟ್ಟಣದ ಕಲ್ಯಾಣ ಕಾಯಕ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯ ಸಾನಿಧ್ಯ ಉದ್ದೇಶಿಸಿ ಮಾತನಾಡಿದ ಮಾತಾಜಿ
ಸದಸ್ಯರಲ್ಲಿ ಸಹಕಾರ, ಭ್ರಾತೃತ್ವ ಮತ್ತು ಪರಸ್ಪರ ಸಹಾಯವನ್ನು ಬೆಳೆಸುವುದು. ಲಾಭಕ್ಕಿಂತ ಹೆಚ್ಚಾಗಿ ಸದಸ್ಯರಿಗೆ ಸೇವೆ ನೀಡುವುದು. ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವುದು. ವಿಶೇಷವಾಗಿ ರೈತ ಮಹಿಳೆಯರಿಗೆ ಕೃಷಿ ಸಾಲವನ್ನು ಒದಗಿಸುವ ಮೂಲಕ ಸದಸ್ಯರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿರುತ್ತವೆ. ಸಣ್ಣ ಉತ್ಪಾದಕರು, ಕೃಷಿಕರು ತಮ್ಮ ಸಂಪನ್ಮೂಲಗಳನ್ನು ಹಂಚಿಕೊಂಡು ಸಾಮೂಹಿಕವಾಗಿ ಅಭಿವೃದ್ಧಿ ಹೊಂದುವುದು. ಸಣ್ಣ ಉತ್ಪಾದಕರು, ಕೃಷಿಕರು ತಮ್ಮ ಸಂಪನ್ಮೂಲಗಳನ್ನು ಹಂಚಿಕೊಂಡು ಸಾಮೂಹಿಕವಾಗಿ ಅಭಿವೃದ್ಧಿ ಹೊಂದುವುದು ಬಸವಾತ್ಮಜೆ ಮಹಿಳಾ ಸಹಕಾರಿ ಸಂಘದ ಮುಖ್ಯ ಆಶಯವಾಗಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಲ್ಯಾಣ ಕಾಯಕ ಪ್ರತಿಷ್ಠಾನದ ಅಧ್ಯಕ್ಷ ಶರಣ ಸಂಗಮೇಶ ಎನ್ ಜವಾದಿ ಮಾತನಾಡಿ ಬಸವಕಲ್ಯಾಣದ ಬಸವ ಧರ್ಮ ಪೀಠ,ಮಾಹಾಮನೆ ಆವರಣದಲ್ಲಿ ಆರಂಭವಾಗಲಿರುವ ಈ ಬಸವಾತ್ಮಜೆ ಮಹಿಳಾ ಸಹಕಾರಿ ಸಂಘವು ಹಲವು ಯೋಜನೆಗಳನ್ನು ಹಾಕಿಕೊಳ್ಳಬೇಕು. ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಕೆಲಸಕ್ಕೆ ಕೈ ಜೋಡಿಸಬೇಕು.
ಸಂಘ ಸದೃಢವಾಗಿ ಬೆಳೆಯಬೇಕು. ಕೃಷಿಕರ, ಮಹಿಳೆಯರ ಸಣ್ಣಪುಟ್ಟ ವ್ಯಾಪಾರಿಗಳ ಆರ್ಥಿಕ ಸದೃಢತೆಗೆ ನೆರವಾಗಬೇಕು. ಸದೃಢ ಕುಟುಂಬಗಳ ಮೂಲಕ ಸಮೃದ್ದ ಸಮಾಜ ನಿರ್ಮಿಸಬಹುದು. ದೇಶ ಕಟ್ಟುವಲ್ಲಿ ಬಸವಾತ್ಮಜೆ ಮಹಿಳಾ
ಸಹಕಾರಿ ರಂಗದ ಪಾತ್ರ ಹಿರಿದಾಗಬೇಕು.
ಬಸವತ್ಮಾಜೆ ಸಂಘವು ಪ್ರಜಾಪ್ರಭುತ್ವ ತತ್ವಗಳಡಿ ಕೆಲಸ ಮಾಡುತ್ತಿದ್ದು, ಗ್ರಾಮೀಣ ಅರ್ಥಿಕ ವ್ಯವಸ್ಥೆಗೆ ವರದಾನವಾಗಿ ಪರಿಣಮಿಸಿದೆ. ಕೃಷಿಕರ ಬದುಕಿಗೆ ಆಸರೆಯಾಗಿದೆ. ತಮ್ಮ ಸದಸ್ಯರ ಒಳಿತಿಗಾಗಿ ಉತ್ತಮ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಜನರಿಗೆ ಸಹಾಯ ಮಾಡಬೇಕು. ಜನರ ವಿಶ್ವಾಸ ಗಳಿಸುವುದಕ್ಕಾಗಿ ತನ್ನೆಲ್ಲಾ ಚಟುವಟಿಕೆಗಳಲ್ಲಿ, ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು
ಹೇಳಿದರು.
ಸಭೆಯಲ್ಲಿ ತಾಲೂಕು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಜಶೇಖರ ದೇವಣಿ, ಮನೋಹರರಾವ ಮೇದಾ, ಭೀಮಶೆಟ್ಟಿ ವಡ್ಡನಕೇರಾ, ಎನ್ ಎಸ್ ಮಲ್ಲಶೆಟ್ಟಿ, ಮನೋಹರ್ ಜಕ್ಕಾ, ಬಸಯ್ಯಾ ಸ್ವಾಮಿ, ಚನ್ನವೀರ ಲಾತೂರೆ, ಗುರುನಾಥ ಮಾಹಾಜನ್, ಶೌರ್ಯ ಜವಾದಿ, ಬಸವರಾಜ ಪಂಗರಗಿ, ಸಿದ್ದು ಪಡಶೆಟ್ಟಿ, ಸಂಜು ಕೊಟಗೆನೊರ್, ಕಾಶಿನಾಥ ಚಳಕಾಪೂರೆ, ರಾಕೇಶ ಗುಡ್ಡಾ, ಸೂರ್ಯಕಿರಣ ಗುಡ್ಡಾ, ವೀರ ಮಾಹಾಜನ, ಶ್ರಾವ್ಯ ಜವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















