ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಳಲಿಯಲ್ಲಿ – ಪರಮಹಂಸರ 41 ನೇ ಸ್ಮರಣೋತ್ಸವ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪುಣ್ಯಭೂಮಿ ಕುಳಲಿ ಗ್ರಾಮದ ಶ್ರೀ ಗುರು ರಾಮಯೋಗಿ ಪರಮಹಂಸರ 41ನೆಯ ಪುಣ್ಯಸ್ಮರಣೋತ್ಸವ ಹಾಗೂ ಮಹಾ ರಥೋತ್ಸವ ಇದೇ ಫೆಬ್ರವರಿ ಶುಕ್ರವಾರ ದಿ. 20 ರಂದು ಮರೇಗುದ್ದಿಯ ಅಡವಿಮಠದ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಡಾ. ನಿರುಪಾದಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿವಿಧ ಕಾರ್ಯಕ್ರಮಗಳು ಜರುಗುವವು. ಬೆಳಿಗ್ಗೆ 6:00ಗೆ ಕರ್ತೃ ಗದ್ದಿಗಿಗೆ ಮಹಾರುದ್ರಾಭಿಷೇಕ, ಪೂಜಾ ಕಾರ್ಯಕ್ರಮ ಜರುಗುವುದು.
ಸಂಜೆ 6:00ಗೆ ಪೂಜ್ಯರ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯುವುದು. ರಾತ್ರಿ 9 ರಿಂದ ಬೆಳಿಗ್ಗೆ 6:00ವರೆಗೆ ಬಸವೇಶ್ವರ ಭಜನಾ ಮಂಡಳ ಕುಳಲಿ ಹಾಗೂ ಮುಗಳಖೋಡದ ಶಿವ ಭಜನಾ ಕಲಾ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗುವುದು ‌ಇದೇ ಸಮಯದಲ್ಲಿ 58 ಕೆ. ಜಿಯ ಪುರುಷರ ಹಾಗೂ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಗಳು ನಡೆಯುವವು. ಶನಿವಾರ ದಿ. 21 ರಂದು “ಮರುರಥೋತ್ಸವ” ಜರುಗುವುದು.
ರಾತ್ರಿ 10.30 ಕ್ಕೆ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ನಾಟಕ ಪ್ರದರ್ಶನಗೊಳ್ಳುವುದು ಎಂದು ಹೇಳಿದ ಗ್ರಾಮದ ಗಣ್ಯರಾದ ನಾಗಪ್ಪ ಐಹೊಳೆ ಪಾರಮಾರ್ಥಿಕ ಪ್ರಿಯರು ಆಗಮಿಸಿ ಗುರು ಕೃಪೆಗೆ ಪಾತ್ರರಾಗಲು ತಿಳಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!