ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮ ಪಂಚಾಯತಿಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಂಡ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ಹಾಗೂ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿತು.
ಪರಿಶೀಲನೆಗೊಂಡ ವಿಷಯಗಳು:
ಗ್ರಾಮ ಪಂಚಾಯತಿಯಲ್ಲಿ ನಿರ್ವಹಿಸಲಾಗುತ್ತಿರುವ 7 ವಹಿಗಳ ಪರಿಶೀಲನೆ,
ಕಾಮಗಾರಿಗಳ ಕಡತಗಳ ಪರಿಶೀಲನೆ,
ಪ್ರಸ್ತುತ ವರ್ಷಗಳಲ್ಲಿ ಕೈಗೊಂಡ ಕಾಲುವೆ ಕಾಮಗಾರಿಗಳ ಸ್ಥಳ ಪರಿಶೀಲನೆ,
ಪ್ರಸ್ತುತ ವರ್ಷದಲ್ಲಿ ನಿರ್ಮಾಣಗೊಂಡ ಸಿ.ಸಿ. ರಸ್ತೆ ಕಾಮಗಾರಿಗಳ ಪರಿಶೀಲನೆ,
ಬಸವ ವಸತಿ ಯೋಜನೆಯಡಿ ನಿರ್ಮಾಣಗೊಂಡ ಮನೆಗಳ ಪರಿಶೀಲನೆ,
ಎನ್ ಎಂ ಎಂ ಎಸ್ ಹಾಜರಾತಿ, ಭುವನ್ ಆಪ್ ಮತ್ತು ಫೋಟೋಗಳ ಪರಿಶೀಲನೆ,
ಈ ಸಂದರ್ಭದಲ್ಲಿ ಕೇಂದ್ರ ತಂಡದ ಲೀಡರ್ ಸಂಜಯ್ ಕುಮಾರ್, ಲೆಕ್ಕಪರಿಶೋಧಕ ಶಶಾಂಕ್ ತ್ಯಾಗಿ, ಕಾರ್ಯನಿರ್ವಾಹಕ ಅಧಿಕಾರಿಗಳು ಮೆನಿಗಾ ಮುತ್ಯಾಲ್ ಹಾಗೂ ಶ್ರೀಕುಮಾರ, ಸಹಾಯಕ ನಿರ್ದೇಶಕರಾದ ಮಲ್ಲನಗೌಡ K.S. ಎ ಡಿ ಪಿ ಸಿ ಅಂಬರೀಶ್, PDO ಮಲ್ಲಿಕಾರ್ಜುನ, ಕಾರ್ಯದರ್ಶಿ ಶಿವಪ್ಪ, ಹನುಮೇಶ್, ಸಂಗಮೇಶ್, ಲೋಕೇಶ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















