ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ದಿನಾಂಕ: 18/02/2026 ರಂದು ಬುಧವಾರ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ವತಿಯಿಂದ ವಿರಾಟ್ ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾಯಾತ್ರೆಯು ಊರಿನ ಪ್ರಮುಖ ಬೀದಿಗಳಲ್ಲಿ ಭಾರತಾಂಬೆಯ ಭಾವಚಿತ್ರದ ಜೊತೆ ಅದ್ದೂರಿಯಾಗಿ ಜರುಗಿತು.
ಸಮಾವೇಶದ ಅಧ್ಯಕ್ಷತೆಯನ್ನು ಶ್ರೀಶೈಲ ಸಾವಳಗಿ, ಸಾನಿಧ್ಯವನ್ನು ಪರಮ ಪೂಜ್ಯ ಗುರುಪ್ರಸಾದ್ ಸ್ವಾಮಿಗಳು ಸಾ// ಮೈಗೂರ್ ,
ಪರಮ ಪೂಜ್ಯ ಮರುಳಾರಾದ್ಯ ಶಿವಾಚಾರ್ಯರು ಸಾ//ಮಾಷ್ಯಾಳ್ ಹಾಗೂ
ಸಾ// ಸಂಜೀವ ಜೋಶಿ ಜಿಲ್ಲಾ ಸಂಚಾಲಕರು ಅತಿಥಿಗಳಾಗಿ ರಮೇಶ್ ಕುರುಬಗಟ್ಟಿ, ಬಿ.ಎಸ್. ಪಾಟೀಲ, ದಶರಥ ಕೋಟಿ, ಕಾಂತುಗೌಡ ಪಾಟೀಲ್ ಅಂಬಣ್ಣ ಸಾವಳೇ, ದೀಪಕ್ ಕ್ಷತ್ರೀ, ರುದ್ರೇಶ್ ಹಲಸಂಗಿ, ಪಂಚಪ್ಪ ಮರಗೂರ್, ಸತೀಶ್ ಗೌಡ ಪಾಟೀಲ್, ಸುಭಾಸ್ ಒಗೆಪ್ಪಗೊಳ್, ರಂಗನಾಥ್ ಬೋಸಲೇ, ಕಾಶಿನಾಥ್ ಮಾನೆ, ಶಿವಬಸವ ತೋಳನೂರ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭೀಮಾಶಂಕರ ಆಳೂರ ಹಾಗೂ ಆರ್ ಎಸ್ ಎಸ್ ಪ್ರಮುಖರಾದ ಸ್ವತಂತ್ರ ಸಿಂಧೆ ಹಾಗೂ ಭೀಮಶಂಕರ್ ತೋಳನೂರ,
ಬಿಜೆಪಿ ಯುವ ನಾಯಕ ಸಿದ್ದರಾಯ ತೇಲಿ, ಮಹೇಶ್ ಪಾಟೀಲ್, ಬೆಳ್ಳು ಕ್ಷತ್ರಿ, ಭೀಮಾಶಂಕರ ವಾಗದುರಗಿ ಉಪಸ್ಥಿತರಿದ್ದರು.
ಅಗರಖೇಡ ಗ್ರಾಮದ ಸಮಸ್ತ ಹಿಂದೂ ಬಾಂಧವರು ಹಾಗೂ ತಾಯಂದಿರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಮೋಹನ್ ರಾಠೋಡ್ ಸ್ವಾಗತವನ್ನು ಭೀಮಾಶಂಕರ ಆಳೂರ ಇವರು ನಡೆಸಿಕೊಟ್ಟರು.
ವರದಿ ಮನೋಜ್ ನಿಂಬಾಳ



















