ಬಳ್ಳಾರಿ / ಕಂಪ್ಲಿ : ಕೋಟೆಯ ತುಂಗಭದ್ರಾ ನದಿ ಸೇತುವೆ ದ್ವಾರದಲ್ಲಿ ಅಡ್ಡಲಾಗಿ ಕಬ್ಬಿಣದ ಸ್ವಾಗತ ಫಲಕವನ್ನು ಕ್ರೇನ್ನಿಂದ ಅಳವಡಿಸುವಾಗ ಸ್ವಾಗತ ಫಲಕ ಕಳಚಿ ಬಿದ್ದು ಒಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಪಟ್ಟಣದ 4ನೇವಾರ್ಡ್ ನಿವಾಸಿ ವೆಲ್ಡಿಂಗ್ ಲೇಬರ್ ಶೆಕ್ಷಾ(35) ಮೃತ ದುರ್ದೈವಿ. ಗಾಯಗೊಂಡ ಈತನನ್ನು ಕಂಪ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಗಂಗಾವತಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಇನಾಯತ್ (32)ಗೆ ಗಂಭೀರ ಗಾಯಗಳಾಗಿದ್ದು, ಕರೀಮ್(21)ಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಿಐ ಕೆ.ಬಿ.ವಾಸುಕುಮಾರ್, ಪಿಎಸ್ಐ ಅವಿನಾಶ್ ಕಾಂಬ್ಳೆ ಸ್ಥಳಕ್ಕೆ ಭೇಟಿ ನೀಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















