ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸೇವೆ ಮತ್ತು ದಾನ, ಧರ್ಮದಂತಹ ಗುಣಗಳು ಬೆಳೆಸಿಕೊಳ್ಳಬೇಕು : ಪೂಜ್ಯ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು

ಚಿಟಗುಪ್ಪ: ಸಮಾಜಮುಖಿ ಕಾರ್ಯಗಳ ಮೂಲಕ ಜನತೆಯಲ್ಲಿ ಸೇವೆ ಮತ್ತು ದಾನ ಹಾಗೂ ಧರ್ಮದಂತಹ ಗುಣ ಬೆಳೆಸುವಲ್ಲಿ ಶ್ರೀ ಶಿವಸಿದ್ಧ ಯೋಗಾಶ್ರಮ ಪಾತ್ರ ಅನನ್ಯವಾಗಿದೆ ಎಂದು
ಸುಕ್ಷೇತ್ರ ಶಿವಸಿದ್ಧ ಯೋಗಾಶ್ರಮ, ಶಾಖಾ ಮುಕ್ತಿಮಠ ಇಟಗಾ ಪೀಠಾಧ್ಯಕ್ಷರಾದ ಪರಮ
ಪೂಜ್ಯ ಶ್ರೀ ಷ.ಬ್ರ. ಮಹರ್ಷಿ ಧರ್ಮಶ್ರೀ, ತಪೋರತ್ನ
ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ನುಡಿದರು.

ತಾಲೂಕಿನ ಇಟಗಾ ಗ್ರಾಮದ ಸುಕ್ಷೇತ್ರ ಶಿವಸಿದ್ಧ ಯೋಗಾಶ್ರಮ, ಶಾಖಾ ಮುಕ್ತಿ ಮಠದಲ್ಲಿ ಜರಗಿದ
ಶ್ರೀ ಗುರು ಭದ್ರೇಶ್ವರರ 49ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮ ಪೂಜ್ಯರು ಕಷ್ಟ, ಸುಖ, ನೋವು-ನಲಿವು ಎಲ್ಲವುಗಳಲ್ಲೂ ಸ್ಥಿತ ಪ್ರಜ್ಞತೆ ಕಾಯ್ದುಕೊಂಡು ಬದುಕುವುದೇ ನಿಜವಾದ ಮಾನವೀಯತೆ ಎನಿಸಿಕೊಳ್ಳುತ್ತದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡಿದ ಕಾಯಕದಿಂದ ಅಂತಕಃಕರಣ ಶುದ್ಧಿಯಾಗುವುದು. ಇದೇ ಸೃಷ್ಟಿಕರ್ತನ ಅನುಗ್ರಹಕ್ಕೆ ದಾರಿ ಮಾಡಿಕೊಡುವ ದೈವ ಶಕ್ತಿಯಾಗಿದೆ.
ನಾನು ನನ್ನದು, ನಾನು ಮಾಡಿದೆ ಎಂಬ ಅಹಂಕಾರವನ್ನು ತ್ಯಜಿಸಬೇಕು, ಹಣ, ಬಂಗಾರ ಸೇರಿದಂತೆ ಆಸ್ತಿ ಎಂದು ಅತಿಯಾದ ವ್ಯಾಮೋಹ ದುರಾಸೆ ಹಿಂದೆ ಹೋಗದೆ ಆದರ್ಶಗಳ ಹಿಂದೆ ಹೋಗಬೇಕು. ಮೌಲ್ಯಾಧಾರಿತ ಜೀವನ ಅಳವಡಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಪ್ರತಿಯೊಬ್ಬರೂ ನಾಡನ್ನು ಕಟ್ಟಬೇಕು. ಈ ಪುಣ್ಯಭೂಮಿಯನ್ನು ಉಳಿಸಬೇಕು ಅನ್ನುವಂತಹ ಮನೋಭಾವ ಬೆಳಸಿಕೊಳ್ಳಬೇಕು. ಸಾಧ್ಯವಾದಷ್ಟು ಮೋಸದ ಜೀವನ ಬಿಟ್ಟು ಸತ್ಯ ಶುದ್ಧ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಂದರ ಸಮಾಜ ನಿರ್ಮಾಣಕ್ಕೆ ತಮ್ಮ ಕೈಲಾದಷ್ಟು ನಿಸ್ವಾರ್ಥ ಸೇವೆ ಸಲ್ಲಿಸಬೇಕು.
ಮಹಾತ್ಮರ ದಿವ್ಯ ಸಂದೇಶ ಅರಿತು ಸುಂದರ ಜೀವನ ಸಾಗಿಸಲು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು.
ಈ ಶಿವಸಿದ್ಧ ಯೋಗಾಶ್ರಮ ಎಲ್ಲ ಸಮಾಜದವರನ್ನು ಸಮಾನವಾಗಿ ಕಾಣುವ ಮಠವಾಗಿದೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಗುರು ನಂಜೇಶ್ವರ
ಭರತನೂರ್ ಶ್ರೀಗಳು ಮಾತನಾಡಿ ಜ್ಞಾನ ದಾಸೋಹ ಒದಗಿಸುವ ಜೊತೆಗೆ ಆಧ್ಯಾತ್ಮಿಕ ಸಿಂಚನ್ನು ಹಂಚುತ್ತಿರುವ ಶಿವಸಿದ್ಧ ಯೋಗಾಶ್ರಮ ಮುಕ್ತಿ ಮಠದ ಕೈಂಕರ್ಯಗಳು ಅಪಾರವಾಗಿವೆ.ಸಾಮಾಜಿಕ ಕಳಕಳಿ
ಕೆಲಸಗಳೊಂದಿಗೆ ಲಿಂಗೈಕ್ಯ ಪೂಜ್ಯರ ಸತ್ಯ ಸಂಕಲ್ಪದ ಮರೆಗೆ ಈ ಭಾಗದಲ್ಲಿ ಅನೇಕ ಜನಪರ ಕೆಲಸಗಳು ನಿರಂತರವಾಗಿ ಮಾಡುತ್ತಿರುವುದು ಬಹಳಷ್ಟು ಖುಷಿ ತಂದಿದೆ. ಭಾರತ ಸಾಧು ಸಂತರು ಜನಿಸಿದ ಪುಣ್ಯ ಭೂಮಿಯಾಗಿದೆ. ಇಲ್ಲಿ ಸತ್ಯಕ್ಕೆ ಗೌರವವಿದೆ.
ಶಾಂತಿ ಸಮಾಧಾನ ದೊರೆಯುತ್ತದೆ.
ಶರಣರು ಕಷ್ಟದಿಂದ ಬಂದವರಿಗೆ ಅನ್ನವನ್ನು ನೀಡಿ, ಉದ್ಯೋಗದ ಪರಿಕಲ್ಪನೆ ನೀಡಿ ಎಲ್ಲರನ್ನೂ ಸನ್ಮಾರ್ಗದಲ್ಲಿ ನಡೆಯುವಂತಹ ಮಾರ್ಗದರ್ಶನ ನೀಡಿದರು. ಇಂತಹ ಕಾರ್ಯಕ್ರಮಗಳನ್ನು ಇಂದಿನ ಪೀಠಾಧ್ಯಕ್ಷರು ಮಾಡಿಕೊಂಡು ಬರುತ್ತಿರುವುದು
ಹೆಮ್ಮೆ ಆಗುತ್ತಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ ತ್ರಿಪುರಾಂತನ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಶ್ರೀಗಳು ಸಮಾನ ಮನೋಭಾವ ಮತ್ತು ಸ್ವತಂತ್ರತೆ ವ್ಯಕ್ತಿತ್ವ ಹೊಂದಿದ್ದಾರೆ. ಜ್ಯೋತಿಯಂತೆ ಬೆಳಗಿ
ಶಿವಸಿದ್ಧ ಯೋಗಾಶ್ರಮದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರು. ಸಮಾಜಪರ ಕಾಳಜಿಯುಳ್ಳ ಶ್ರೀಗಳು ನಾಡಿಗೆ ಮಾದರಿ ಎಂದರು.

ಪೂಜ್ಯ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಕನ್ನಡ ನಾಡಿನ ಪ್ರಗತಿಗೆ ಮಠಗಳ ಪಾತ್ರ ದೊಡ್ಡದು. ಯಾವ ಸರಕಾರಗಳು ಮಾಡದ ಕೆಲಸ ರಾಜ್ಯದಲ್ಲಿ ಮಠಗಳು ಮಾಡುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸುವ ಜತಗೆ ಸಾಮಾಜಿಕ ಕ್ಷೇತ್ರದಲ್ಲಿ ಮಠಗಳು ಸಲ್ಲಿಸುತ್ತಿರುವ ಸೇವೆ ಅನನ್ಯ.ಮಠಗಳು ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮತ್ತು ನೈತಿಕ ಮೌಲ್ಯಗಳ ಉಳಿವಿಗೆ ಅಗತ್ಯವಾದ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಸಮಾಜವನ್ನು ಮುನ್ನಡೆಸುವಲ್ಲಿ ಮಠಗಳ ಪಾತ್ರ ಬಹುಮುಖ್ಯ. ಸಮಾಜಕ್ಕೆ ದಿಕ್ಸೂಚಿಯಾಗಿ ಮಠಗಳು ಇರಬೇಕು. ಆ ಹಾದಿಯಲ್ಲಿ ಇಟಗಾ ಶಿವಸಿದ್ಧ ಯೋಗಾಶ್ರಮ ಸಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೂಜ್ಯ ಚಳಕಾಪೂರ ಸ್ವಾಮಿಜಿ ,ಪೂಜ್ಯ ವೇದಮೂರ್ತಿ ಸ್ವಾಮಿಜಿ, ಶಾಂತವೀರಯ್ಯಾ ಸ್ವಾಮಿಜಿ ನಾವದಗಿ,
ಪೂಜ್ಯ ಉದ್ದವ ಮಹಾರಾಜರು, ಪೂಜ್ಯ ಸುಖದೇವ್ ಮಹಾರಾಜರು ಮಾತನಾಡಿದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಸಾಹಿತಿ ಸಂಗಮೇಶ ಎನ್ ಜವಾದಿ ಮಾತನಾಡಿ ಇಟಗಾ ಶಿವಸಿದ್ಧ ಯೋಗಾಶ್ರಮ ಮುಕ್ತಿ ಮಠವು ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ನಿರಂತರ ದಾಸೋಹದ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದೆ. ಕಲ್ಯಾಣ ಕರ್ನಾಟಕದ ವಿಕಾಸ ಮತ್ತು ದುರ್ಬಲ ವರ್ಗದವರ ಉನ್ನತಿಗಾಗಿ ಶ್ರೀಮಠವು ಈ ಭಾಗದಲ್ಲಿ ಅಪಾರ ಕೊಡುಗೆ ನೀಡುತ್ತಿದೆ.
ಭಜನೆ, ಕೀರ್ತನೆ, ಧರ್ಮಸಭೆಗಳು ಮತ್ತು ಸಾಹಿತ್ಯ ಪ್ರಕಟಣೆಯ ಮೂಲಕ ಸಂಸ್ಕೃತಿ ಮತ್ತು ಧರ್ಮದ ಸಂರಕ್ಷಣೆ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಸಿದ್ದಲಿಂಗಪ್ಪ ಪಾಟೀಲರು, ಮುಖಂಡರಾದ ರೇವಪ್ಪ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಇಂದ್ರಣ್ಣ ಮೈಲೂರ್, ಶರಣು ಗಡಮಿ, ಚಂದ್ರಕಾಂತ ನಾರಾಯಣಪೂರ್, ಕಂಠಯ್ಯ ಸ್ವಾಮಿ,ಮನೋಹರ್ ಮೇದಾ,ಅಣ್ಣೆಪ್ಪ ಇಸ್ಲಾಂಪೂರ್ ಹಾಜರಿದ್ದರು.

ಶಿಕ್ಷಕ ನೀಲಕಂಠರಾವ ಇಸ್ಲಾಂಪೂರ್
ನಿರೂಪಿಸಿ, ವಂದಿಸಿದರು.

ಇದೆ ಸಂದರ್ಭದಲ್ಲಿ ಸಾಹಿತ್ಯ, ಸಾಮಾಜಿಕ ಮತ್ತು ಪರಿಸರ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀ ಸಂಗಮೇಶ ಎನ್ ಜವಾದಿ ರವರಿಗೆ ಶ್ರೀ ಮಠದಿಂದ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನೇಕ ಮಹನೀಯರಿಗೆ ಸನ್ಮಾನಿಸಿ ಗೌರವಿಸಿದರು.

ಇದೆ ವೇಳೆ ರಮೇಶ ಪಂಚಾಳ ಒಳಖಿಂಡಿ ಮತ್ತು ಪಾವರ್ತಿ ಪಂಚಾಳ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶ್ರೀ ಗುರು ಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸಹಸ್ರಾರು ಭಕ್ತ ಸಮೂಹದಲ್ಲಿ ನೆರವೇರಿದ ರಥೋತ್ಸವದಲ್ಲಿ ಪಾಲ್ಗೊಂಡು ಪೂಜ್ಯರ ದಿವ್ಯಾಶಿರ್ವಾದ ಪಡೆದುಕೊಂಡರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!