ನಸುಕಿನಲ್ಲಿ ಚಿಕ್ಕೋಡಿಯ ಉಪವಿಭಾಗೀಯ ದಂಡಾಧಿಕಾರಿಗಳಾದ ಸುಭಾಷ ಸಂಪಗಾವಿ ಹಾಗೂ ತಾಲೂಕಾ ತಹಶಿಲ್ದಾರರು ಆದ ರಾಜೇಶ ಬುರ್ಲಿ ಅವರು, ಬೈಕ್ ಹತ್ತಿ ಚಿಕ್ಕೋಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಮತ್ತು ಮಾರುಕಟ್ಟೆ, ಬೀದಿಗಳಿಗೆ ತೆರಳಿ, ಅಲ್ಲಿಯ ಸ್ವಚ್ಚತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು, ಜನ ಸಾಮಾನ್ಯರನ್ನು ಸಂಪರ್ಕಿಸಿ ಅವರ ಅನಿಸಿಕೆಗಳನ್ನು ಕಲೆ ಹಾಕಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಮಾಡಿದರು.
ಸಾರ್ವಜನಿಕ ಆಸ್ಪತ್ರೆಗೆ ಮತ್ತು ತಾಯಿ-ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳೊಂದಿಗೆ ಕೆಲ ಸಮಯ ಕಳೆದ ಸಾಹೇಬರು, ಅಲ್ಲಿಯ ವ್ಯವಸ್ಥೆಯ ಕುರಿತು ವೈದ್ಯಾಧಿಕಾರಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇವರು ಧಿಡೀರನೆ ಪಟ್ಟಣದಲ್ಲಿ ಸಂಚರಿಸಿರುವ ವಿಷಯ ತಿಳಿದ ಕೆಲ ಅಧಿಕಾರಿಗಳಲ್ಲಿ ಎಚ್ಚರಿಕೆ ಮೂಡಿ ಬಂದಿದೆ, ಇಂತಹ ಅಧಿಕಾರಿಗಳು ಇರುವುದರಿಂದ ರಾಮರಾಜ್ಯದ ಕನಸು ನನಸಾಗುವ ಭರವಸೆ ಜನಸಾಮಾನ್ಯರಲ್ಲಿ ಮೂಡಿದೆ, ಪಟ್ಟಣ ಸಂಚಾರದ ಹಿಂದೆ ವ್ಯವಸ್ಥೆಯ ಬದಲಾವಣೆ ನಿಶ್ಚಿತ ಎಂಬ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ, ಸಾರ್ವಜನಿಕರು ಈ ಅಧಿಕಾರಿಗಳ ಕಾರ್ಯ ವೈಖರಿಯನ್ನು ಕಂಡು ಪಟ್ಟಣದ ತುಂಬೆಲ್ಲ ಕೊಂಡಾಡುತ್ತಿದ್ದಾರೆ.
ವರದಿ ವಿಕಾಸ ಅಮಾತೆ



















