ಬಾಗಲಕೋಟೆ/ ಹುನಗುಂದ: ಪಟ್ಟಣದ ರೆಡ್ಡಿ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ಫೆ. 22 ರಂದು ರವಿವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50ರ ಹೊಂದಿಕೊಂಡಿರುವ ಎಚ್ ಪಿ ಪೆಟ್ರೋಲ್ ಬಂಕ್ ಹತ್ತಿರದಲ್ಲಿರುವಲ್ಲಿರುವ ಸಮಾಜದ ಸ್ವಂತ ಜಾಗದಲ್ಲಿ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ನೂತನ ದೇವಸ್ಥಾನ ಕಟ್ಟಡದ ಭೂಮಿ ಪೂಜೆ ಸಮಾರಂಭ ಜರಗಲಿದೆ ಎಂದು ರೆಡ್ಡಿ ಸಮಗ್ರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಎಂ ಕಾಮಾ ಹೇಳಿದರು.
ಪಟ್ಟಣದ ಸಮಾಜದ ಜಾಗದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ ಸಮಗ್ರ ಅಭಿವೃದ್ಧಿ ಸಂಸ್ಥೆ 2018 ರಲ್ಲಿ ಉದಯವಾಗಿದ್ದು, ಸಂಸ್ಥೆಯಿಂದ ಸ್ವಂತ ಜಾಗ ಮಾಡಿ ಇಲ್ಲೊಂದು ಹೇಮರೆಡ್ಡಿ ಮಲ್ಲಮ್ಮನವರ `ದೇವಸ್ಥಾನ ಕಟ್ಟಬೇಕು ಅನ್ನುವಂತ ಅನೇಕ ವರ್ಷದ ಕನಸಾಗಿತ್ತು. ಸದ್ಯ ಸಮಾಜದ ಅನೇಕ ಗಣ್ಯ ವ್ಯಕ್ತಿಗಳ ಸಹಾಯ ಸಹಕಾರದಿಂದ ಆ ಕನಸು ನನಸಾಗಿದೆ. ಸಮಾಜದ ಶಂಕರಪ್ಪ ಸಂಗಪ್ಪ ಬೆಳ್ಳಿಹಾಳ ಮತ್ತು ಗಿರಿಜಾ ಶಂಕರಪ್ಪ ಬೆಳ್ಳಿಹಾಳ ಅವರು ಜಮೀನ ಖರೀದಿ ಮತ್ತು ದೇವಸ್ಥಾನ ನಿರ್ಮಾಣಕ್ಕೆ ಧನ ಸಹಾಯವನ್ನು ಮಾಡಿದ್ದು, ಇದರ ಜೊತೆಗೆ ಇನ್ನು ಅನೇಕ ಸಮಾಜದ ಗಣ್ಯರು ಕೂಡಾ ಸಹಾಯ ಸಹಕಾರವನ್ನು ನೀಡಿದ್ದಾರೆ ಎಂದರು. ಉಪಾಧ್ಯಕ್ಷ ಮರಿಯಪ್ಪ ದೇವರೆಡ್ಡಿ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮನವರ ನೂತನ ದೇವಸ್ಥಾನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಎರೆಹೊಸಳ್ಳಿ ರೆಡ್ಡಿ ಪೀಠದ ವೇಮನಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿಕೊಳ್ಳುವುದು, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಚಿತ್ತರಗಿ ಸಂಸ್ಥಾನ ಮಠ ಹುನಗುಂದದ ಗುರು ಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆಯನ್ನು ವಹಿಸಿದರು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭೂಮಿ ಪೂಜೆ ಅಡಿಗಲ್ಲನ್ನು ನೆರವೇರಿಸಲಿದ್ದಾರೆ. ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಕಾಮಾ ಉಪಸ್ಥಿತಿ ವಹಿಸುವರು. ಮಾಜಿ ಸಂಸದ ಆರ್.ಎಸ್ ಪಾಟೀಲ, ಮಾಜಿ ಸಚಿವ ಎಸ್ ಆರ್ ಪಾಟೀಲ್ ಸಂಸದ ಪಿ ಸಿ ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ,ಶಾಸಕ ಜೆ.ಟಿ.ಪಾಟೀಲ, ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್ ಪೂಜಾರ, ಹನುಮಂತ ನಿರಾಣಿ, ಸುನೀಲಗೌಡ ಪಾಟೀಲ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ನಾರಾಯಣ ಹಾದಿಮನಿ, ರಾಯನಗೌಡ ತಾತರೆಡ್ಡಿ ಸೇರದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು. ರೆಡ್ಡಿ ಸಮಾಜದ ಅನೇಕ ಗಣ್ಯಮಾನ್ಯರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದರು. ಸಂದರ್ಭದಲ್ಲಿ ಕಾರ್ಯದರ್ಶಿ , ಪರಶುರಾಮನಗೌಡ ಹಣಮಗೌಡ್ರ ನಿರ್ದೇಶಕರಾದ ಪ್ರಸನ್ನ ನಾಗರಾಳ, ದ್ಯಾವಪ್ಪ ಫೈಲ, ತಿಮ್ಮನಗೌಡ ಬಾವಿಕಟ್ಟಿ, ಹನುಮಂತಗೌಡ ಬೆನಕನಡೋಣಿ, ರಾಮನಗೌಡ ಬೆಳ್ಳಿಹಾಳ, ಸಂಗಣ್ಣ ನಾಲತವಾಡ, ಸಂಗಮೇಶ ಮನ್ನಾಪೂರ, ಬಸನಗೌಡ ಫೈಲ, ತಿಮ್ಮನಗೌಡ ದಾದ್ದಿ, ಮಹೇಶ ಬೆಳ್ಳಿಹಾಳ, ಮಲ್ಲಣ್ಣ ಫೈಲ್ ಸೇರಿದಂತೆ ಅನೇಕರು ಇದ್ದರು.
- ಕರುನಾಡ ಕಂದ ಪತ್ರಿಕೆ



















